Tumakuru: ನೋಡನೋಡುತ್ತಿದ್ದಂತೆ ಪೊಲೀಸರ 112 ಕಾರನೇ ಚಲಾಯಿಸಿಕೊಂಡು ಹೋದ..! ಮುಂದೇನಾಯ್ತು?

ಜಗಳ ಬಿಡಿಸಲು ಬಂದ ಪೊಲೀಸರ '112' ಕಾರನ್ನು (Police Vehicle 112) ವ್ಯಕ್ತಿಯೊಬ್ಬ ನೋಡನೋಡುತ್ತಿದ್ದಂತೆ ಅವರ ಮುಂದೆಯೇ ಓಡಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಖಾಕಿಗಳು ಸಿನಿಮಾ ಸ್ಟೈಲ್‍ನಲ್ಲಿ ಹಿಂಬಾಲಿಸಿ, ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು (Tumakuru) ಜಿಲ್ಲೆಯ ಗುಬ್ಬಿ (Gubbi) ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ.

ನಾರನಹಳ್ಳಿಯಲ್ಲಿ ಸೋಮವಾರ (ನವೆಂಬರ್ 20) ತಡರಾತ್ರಿ ಮುನಿಯ ಹಾಗೂ ಆತನ ಸಹೋದರನೊಂದಿಗೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗುವುದನ್ನು ತಿಳಿದ ಮುನಿಯನ ಸಹೋದರ 122ಕ್ಕೆ ಕರೆ ಮಾಡಿದ್ದಾನೆ. ವಿಷಯ ತಿಳಿಯುತ್ತಲೇ ಪೊಲೀಸರು (Police), ಘಟನಾ ಸ್ಥಳಕ್ಕೆ ಧಾವಿಸಿದ್ದರೆ. ಈ ವೇಳೆ ಮುನಿಯ ಪೊಲೀಸರ 112 ಕಾರಿನ ಹಿಂಬದಿಗೆ ಕಲ್ಲಿನಿಂದ ಹೊಡೆದಿದ್ದಾನೆ.

Tumakuru: ನೋಡನೋಡುತ್ತಿದಂತೆ ಪೋಲೀಸರ 112 ಕಾರನೇ ಚಲಾಯಿಸಿಕೊಂಡ ಹೋದ..! ಮುಂದೇನಾಯ್ತು?

112 ಕಾರಿನ ಚಾಲಕ ಏನಾಯಿತು ಎಂದು ನೋಡಲು ಹಿಂಭಾಗಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಮುನಿಯ, ಸೀದಾ ಆ ವಾಹನವನ್ನು ಹತ್ತಿ, ಸ್ಟಾಟ್ ಮಾಡಿಕೊಂಡು ಎಲ್ಲರೂ ನೋಡುತ್ತಲೇ ಓಡಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಕೆಲಸವನ್ನು ಕಂಡು ಪೊಲೀಸರು ಗಾಬರಿಯಾಗಿದ್ದು, ಮುನಿಯನಿಯಾಗಿ ಹುಡುಕಾಟವನ್ನು ಶುರು ಮಾಡಿದ್ದಾರೆ. ಆದರೆ, ಕೆಲವು ಗಂಟೆಗಳವರೆಗೆ ಆತನ ಸುಳಿವೇ ಇರಲಿಲ್ಲ.

ಎಲ್ಲ ಕಡೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಕಡೆಗೆ ಮೂರು ಗಂಟೆಗಳ ಬಳಿಕ, ತುಮಕೂರು ತಾಲೂಕಿನ ಹೆಬ್ಬೂರು ಸಮೀಪ ಪೊಲೀಸ್ ವಾಹನ ಪತ್ತೆಯಾಗಿದ್ದು, ಆರೋಪಿ ಮುನಿಯನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ತಮ್ಮ ವಶಕ್ಕೆ ಪೊಲೀಸರು ಪಡೆದಿದ್ದಾರೆ. ಮುನಿಯ ಕುಡಿತದ ಚಟ ಹೊಂದಿದ್ದನು. ಆಗಾಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾಡುತ್ತಿದ್ದನು ಎಂದು ಗೊತ್ತಾಗಿದೆ.

Tumakuru: ನೋಡನೋಡುತ್ತಿದಂತೆ ಪೋಲೀಸರ 112 ಕಾರನೇ ಚಲಾಯಿಸಿಕೊಂಡ ಹೋದ..! ಮುಂದೇನಾಯ್ತು?

ಕಳೆದ ಜೂನ್ (June) ತಿಂಗಳು, ಪ್ರಯಾಣಿಕರಿದ್ದ ಕಲ್ಯಾಣ ಕರ್ನಾಟಕ ಸಾರಿಗೆ (ಕೆಕೆಆರ್‌ಟಿಸಿ) ಬಸ್‌ನ್ನು ಕುಡುಕನೊಬ್ಬ ಚಲಾಯಿಸಿಕೊಂಡ ಹೋದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ಬಸ್ ನಿಲ್ದಾಣದಲ್ಲಿ ನಡೆದಿತ್ತು. ಯಶಪ್ಪ ಎಂಬ ವ್ಯಕ್ತಿ ನಿಲ್ಲಿಸಿದ್ದ ಸಾರಿಗೆ ಬಸ್ ಓಡಿಸಿಕೊಂಡು ಹೋಗಿ, ವಾಹನವೊಂದಕ್ಕೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿಸಿ, ಅಪಘಾತಕ್ಕೆ ಕಾರಣನಾಗಿದ್ದನು.

ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು. ಸ್ಟ್ಯಾಂಡ್​ನಲ್ಲಿ ಬಸ್ ನಿಲ್ಲಿಸಿದ ಡ್ರೈವರ್ ಹಾಗೂ ಕಂಡಕ್ಟರ್‌ ನಿಲ್ದಾಣ ನಿಯಂತ್ರಕರಲ್ಲಿ ಎಂಟ್ರಿ ಮಾಡಿಕೊಂಡು ಹೋಗಿ, ಬರುವಷ್ಟರಲ್ಲಿ ಕುಡಿದ ಮತ್ತಿನಲ್ಲಿ ಈ ಕೆಲಸ ಮಾಡಿದ್ದನು. ಅಪಘಾತ ಮಾಡಿ, ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಆತನನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹಿಡಿದಿದ್ದರು.

ರಾಜ್ಯದಲ್ಲಿ ಈ ರೀತಿಯ ಹಲವು ಘಟನೆಗಳು ಈಗಾಗಲೇ ಜರುಗಿವೆ. ಈ ಹಿಂದೆ, ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ (Chincholi) ಬಸ್ ನಿಲ್ದಾಣದಲ್ಲಿ ಇಂತಹದ್ದೇ ಪ್ರಕರಣವೊಂದು ಫೆಬ್ರವರಿ (February) ಯಲ್ಲಿ ವರದಿಯಾಗಿತ್ತು. ಬಸ್ ನಿಲ್ದಾಣದಲ್ಲಿ ರಾತ್ರಿ ಹಾಲ್ಟ್ ಮಾಡಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಬಸ್ ಅನ್ನು ಖದೀಮರು ಕಳ್ಳತನ ಮಾಡಿದ್ದರು. 80 ಕಿಲೋಮೀಟರ್ ಓಡಿಸಿ, ತೆಲಂಗಾಣದ ತಾಂಡೂರು ಸಮೀಪ, ಡೀಸೆಲ್ ಖಾಲಿಯಾದ ಮೇಲೆ ಬಿಟ್ಟು ಪರಾರಿಯಾಗಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Source: Vijay Karnataka

Article Published On: Tuesday, November 21, 2023, 17:46 [IST]
English summary
Tumakuru man escaped in police vehicle what happens
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+