ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ನಮ್ಮ ಮದುವೆಗಳು ಸಾಂಪ್ರದಾಯಿಕವಾಗಿ ಮತ್ತು ಸಡಗರದಿಂದ ನಡೆಯುತ್ತವೆ. ಎಲ್ಲರೂ ಹೊಸ ಹೊಸ ಡ್ರೆಸ್ ತೊಟ್ಟು ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಮದುಮಕ್ಕಳಂತೂ ಹೊಸಬಾಳಿನ ನಿರೀಕ್ಷೆಯಲ್ಲಿ ಖುಷಿಯಿಂದ ಕಳೆಯುತ್ತಿರುತ್ತಾರೆ ಇನ್ನು ಕೆಲವರು ತಮ್ಮ ಮದುವೆಯನ್ನು ವಿಭಿನ್ನ ಮತ್ತು ವಿಶೇಷವಾಗಿಸಲು ಪ್ರಯತ್ನಿಸುತ್ತಾರೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಮದುವೆಗೂ ಮುಂಚೆ ನವ ವರನನ್ನು ಕುದುರೆ ಮೇಲೆ ಕೂರಿಸಿಕೊಂಡು ಬರುವುದು ಅಥವಾ ಎತ್ತಿನಗಾಡಿಯಲ್ಲಿ ಬರುವ ನವ ವರರ ಹಲವು ವಿಡಿಯೋಗಳು ವೈರಲ್ ಆಗಿದೆ. ಅದೇ ರೀತಿ ಮದುವೆ ಮನೆಗೆ ವಿಭಿನ್ನ ರೀತಿಯಲ್ಲಿ ಬರುವುದು ಹೊಸ ಟ್ರೆಂಡ್ ಆಗಿದೆ, ಈ ರೀತಿ ಟ್ರೆಂಡ್ ಅನ್ನು ಗಮನಿಸಿ ಮೆಕಾನಿಕ್‌ ಒಬ್ಬರು ಹಣ ಮಾಡಲು ಹೊಸ ಐಡಿಯಾವನ್ನು ಮಾಡಿದ್ದಾರೆ. ಇದು ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಮಾರ್ಪಡಿಸಿದ ಮತ್ತು ಮದುವೆಗಳಿಗೆ ಬಾಡಿಗೆಗೆ ನೀಡುವುದಾಗಿದೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಬಿಹಾರದ ಬಗಾಹಾದ ಮೆಕ್ಯಾನಿಕ್ ಗುಡ್ಡು ಶರ್ಮಾ ಅವರು ತಮ್ಮ ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ರೀತಿಯಲ್ಲಿ ಮಾರ್ಪಡಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ನ್ಯಾನೋ ಹೆಲಿಕಾಪ್ಟರ್ ಹಾರಟ ಮಾಡಲು ಸಾಧ್ಯವಾಗುವುದಿಲ್ಲ,.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಸಾಮಾನ್ಯ ಟಾಟಾ ನ್ಯಾನೋ ಕಾರನ್ನು ರೂ,2 ಲಕ್ಷ ಖರ್ಚು ಮಾಡಿ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಮಾದರಿಯಲ್ಲಿ ಮಾಡಿಫೈಗೊಳಿಸಿದ್ದಾರೆ. ಈ ನ್ಯಾನೋ ಹೆಲಿಕಾಪ್ಟರ್ ಕಾರನ್ನು ಕೇವಲ ರೂ,15 ಸಾವಿರಕ್ಕೆ ಮದುವೆಗೆ ಬಾಡಿಗೆಗೆ ನೀಡುತ್ತಿದ್ದಾರೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಹಲವು ಜನರಿಗೆ ತಮ್ಮ ಮದುವೆಗೆ ಹೆಲಿಕಾಪ್ಟರ್ ನಲ್ಲಿ ತೆರಳಬೇಕೆಂಬ ಕನಸಿರುತ್ತದೆ. ಆದರೆ ಹೆಲಿಕಾಪ್ಟರ್ ಬಹಳ ದುಬಾರಿ ಮತ್ತು ಇತರ ಕಾರಣಗಳಿಂದ ಇದು ಸಾಧ್ಯವಾಗುವುದಿಲ್ಲ. ಆದರೆ ನ್ಯಾನೋ ಹೆಲಿಕಾಪ್ಟರ್ ಕಾರನ್ನು ಬಾಡಿಗೆಗೆ ಪಡೆಯಬಹುದು.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ದೈನಿಕ್ ಭಾಸ್ಕರ್ ವರದಿ ಪ್ರಕಾರ. ಅಬಾಗಹದ ಪ್ರದೇಶದ ನಿವಾಸಿ ಗುಡ್ಡು ಶರ್ಮಾ ಮದುವೆ ಸಂದರ್ಭದಲ್ಲಿ ಹೆಲಿಕಾಪ್ಟರ್‌ಗಳಿಗೆ ಭಾರಿ ಬೇಡಿಕೆ ಹೊಂದಿದೆ, ಅನೇಕರು ತಮ್ಮ ನವ ವಧುವನ್ನು ಇಷ್ಟು ಅದ್ದೂರಿಯಾಗಿ ಮನೆಗೆ ಕರೆತರಲು ಹೆಲಿಕಾಪ್ಟರ್ ಕರೆಸುವುದು ರ್ಥಿಕವಾಗಿ ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಅವರು ತಮ್ಮ ನ್ಯಾನೋವನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದರು ಇದರಿಂದ ಎಲ್ಲರಿಗೂ ಹೆಚ್ಚು ಕೈಗೆಟುಕುವ ಆಯ್ಕೆ ಇರುತ್ತದೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಇಡೀ ವಾಹನವನ್ನು ಸಿದ್ಧಪಡಿಸಲು ಗುಡ್ಡು ಶರ್ಮಾ ಸೆನ್ಸಾರ್ ಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಅವರ ಈ ಸೃಜನಶೀಲ ಆವಿಷ್ಕಾರವು ಈಗಾಗಲೇ ಜನಪ್ರಿಯವಾಗಿದೆ. ಈಗಾಗಲೇ ಈ ಹೆಲಿಕಾಪ್ಟರ್‌ನ್ನು 19 ಜನರು ಅದನ್ನು ಬುಕ್ ಮಾಡಿದ್ದಾರಂತೆ. ಹೆಲಿಕಾಪ್ಟರ್ ಅನ್ನು 15,000 ರೂಪಾಯಿಗೆ ಮದುವೆಯಾಗುವ ವರರಿಗೆ ಬಾಡಿಗೆಗೆ ನೀಡಲಾಗುತ್ತದೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಡಿಜಿಟಲ್ ಇಂಡಿಯಾದ ಯುಗದಲ್ಲಿ ಈ ಆವಿಷ್ಕಾರವು ಸ್ವಾವಲಂಬಿ ಭಾರತಕ್ಕೆ ಜೀವಂತ ಉದಾಹರಣೆಯಾಗಿದೆ,ಈ ಹೈಟೆಕ್ ಹೆಲಿಕಾಪ್ಟರ್ ಅನೇಕ ಸುಧಾರಿತ ಸೌಲಭ್ಯಗಳನ್ನು ನೀಡಲು ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗುತ್ತದೆ.ಗುಡ್ಡು ಹೆಲಿಕಾಪ್ಟರ್ ತರಹದ ವಿನ್ಯಾಸವನ್ನು ನೀಡಲು ಲೋಹದ ಫಲಕಗಳನ್ನು ಬಳಸಿದ್ದಾರೆ ಮತ್ತು ಇದು ಮುಖ್ಯ ರೋಟರ್, ಟೈಲ್ ಬೂಮ್ ಮತ್ತು ಟೈಲ್ ರೋಟರ್‌ನೊಂದಿಗೆ ಬರುತ್ತದೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಶರ್ಮಾ ಅವರು ಬಿಹಾರದಲ್ಲಿ ಇಂತಹ ವಾಹನವನ್ನು ನಿರ್ಮಿಸಿದ ಮೊದಲ ವ್ಯಕ್ತಿ ಅಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ, ಬಿಹಾರದ ಮತ್ತೊಬ್ಬ ಆವಿಷ್ಕಾರಕ, ಬಿಹಾರದ ಛಾಪ್ರಾ ಮೂಲದ ಮಿಥಿಲೇಸ್​ ಪ್ರಸಾದ್​ ಕೂಡ ತಮ್ಮ ನ್ಯಾನೋವನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದರು.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ನ್ಯಾನೋ ಕಾರೊಂದನ್ನು ಖರೀದಿಸಿ ಅದನ್ನು ಹೆಲಿಕಾಪ್ಟರ್​ನಂತೆ ರೂಪಕೊಟ್ಟಿದ್ದಾರೆ. ಕಾರಿನ ಹಿಂಭಾಗದಲ್ಲೂ ಮತ್ತು ಮೇಲ್ಭಾಗದಲ್ಲಿ ರೆಕ್ಕೆಯನ್ನು ಜೋಡಿಸಿದ್ದಾರೆ. ಸದ್ಯ ಮಿಥಿಲೇಶ್​ ತಯಾರಿಸಿದ ಹೆಲಿಕಾಪ್ಟರ್​ ಕಾರಿನ ವಿಡಿಯೋ ಯ್ಯೂಟೂಬ್​ ಚಾನೆಲ್​ನಲ್ಲಿ ಭಾರಿ ವೈರಲ್​​ ಆಗುತ್ತಿದೆ. ಈತನ ವಿಭಿನ್ನ ಪ್ರಯತ್ನಕ್ಕೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ. ಮಿಥಿಲೇಸ್​ ಬಾಲ್ಯದಿಂದಲೆ ಪೈಲಟ್​​ ಆಗಬೇಕೆಂಬ ಕನಸುಕಂಡಿದ್ದ. ಬಡತನದಿಂದಾಗಿ ಆತನ ಕನಸು ನನಸಾಗಲಿಲ್ಲ. ಆದರೆ ತನ್ನ ಕನಸನ್ನು ನನಸು ಮಾಡಲು ಕಾರೊಂದನ್ನು ಹೆಲಿಕಾಪ್ಟರನ್ನಾಗಿ ಬದಲಾಯಿಸಿದ್ದಾನೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಈತನ ಪರಿಶ್ರಮದಿಂದ ನಿರ್ಮಿಸಿದ ಹೆಲಿಕಾಪ್ಟರ್ ಕಾರು ವಿಡೀಯೋ ಸಾಕಷ್ಟು ವೈರಲ್ ಆಗಿತ್ತು. ಡ್ಡುವಿನ ಹೆಲಿಕಾಪ್ಟರ್ ಕಾರಿಗೆ ಹೋಲಿಸಿದರೆ, ಒಳಗೆ ಸರಿಯಾದ ಫಿನಿಶಿಂಗ್‌ನೊಂದಿಗೆ ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಸಾದ್ ಅವರು ವಾಹನವನ್ನು ಪೂರ್ಣಗೊಳಿಸಲು ಏಳು ತಿಂಗಳು ಕಳೆದಿದ್ದರು ಮತ್ತು ಯೋಜನೆಯಲ್ಲಿ ರೂ.7 ಲಕ್ಷ ಹೂಡಿಕೆ ಮಾಡಿದ್ದರು. ವಾಹನವು ರೋಟರ್‌ಗಳಲ್ಲಿ ಎಲ್‌ಇಡಿ ದೀಪಗಳೊಂದಿಗೆ ಬಂದಿತು ಮತ್ತು ಕ್ಯಾಬಿನ್ ಅನ್ನು ಸಹ ಕಾಕ್‌ಪಿಟ್‌ನಂತೆ ವಿನ್ಯಾಸಗೊಳಿಸಲಾಗಿದೆ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಅತಿ ಕಡಿಮೆ ಬೆಲೆ, ಸಣ್ಣ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಭಾರತದ ಮಾರುಕಟ್ಟೆಗೆ ಲಗ್ಗೆಯನ್ನು ಇಟ್ಟಿತ್ತು. ಇದು ವಿಶ್ವದ ಅತೀ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ನ್ಯಾನೋ ಕಾರು ಭಾರತದಲ್ಲಿ ನಿರೀಕ್ಷಿಯ ಯಶಸ್ಸು ಕಂಡಿಲ್ಲ. ಸಣ್ಣ ಕಾರನ್ನು ಖರೀದಿಸಲು ಭಾರತೀಯರು ಹೆಚ್ಚಿನ ಆಸಕ್ತಿ ತೋರಲಿಲ್ಲ.

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನಂತೆ ಮಾರ್ಪಾಡು ಮಾಡಿ ಬಾಡಿಗೆಗೆ ನೀಡಿ ಹಣ ಗಳಿಸುವ ಮೆಕಾನಿಕ್‌

ಒಂದೆರಡು ವರ್ಷಗಳ ಹಿಂದೆ, ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದ ಓಲಾ ಟಾಟಾ ನ್ಯಾನೋದ ಬ್ಯಾಟರಿ ಚಾಲಿತ ಆವೃತ್ತಿಯನ್ನು ಅಭಿವೃದ್ಧಿಪಡಿಸಿತ್ತು. ಕೊಯಮತ್ತೂರು ಮೂಲದ ಜಯಮ್ ಆಟೋಮೋಟಿವ್ಸ್‌ಗೆ ಸಂಬಂಧಿಸಿದ ಸೀಮಿತ ಸಂಖ್ಯೆಯ ಎಲೆಕ್ಟ್ರಿಕ್ ನ್ಯಾನೊಗಳನ್ನು ನಿರ್ಮಿಸಲಾಗಿದೆ. ದುರದೃಷ್ಟವಶಾತ್, ಯೋಜನೆಯು ಎಂದಿಗೂ ಉತ್ಪಾದನೆಗೆ ದಾರಿ ಮಾಡಲಿಲ್ಲ. ಎಲೆಕ್ಟ್ರಾದಿಂದ ನ್ಯಾನೋ ಇವಿ ವಾಸ್ತವವಾಗಿ ನಗರದೊಳಗೆ ತಮ್ಮ ಡ್ರೈವ್‌ಗಳಿಗಾಗಿ ಸಣ್ಣ ಎಲೆಕ್ಟ್ರಿಕ್ ಕಾರನ್ನು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
Turns his tata nano into a helicopter for rent in bihar details
Story first published: Monday, February 21, 2022, 20:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X