ನಿಮಗೂ ಪರಿಪೂರ್ಣ ಬೈಕ್ ರೈಡರ್ ಎನಿಸಿಕೊಳ್ಳಬೇಕೇ?
ಹಿಂದೆಲ್ಲ ಐಕಾನಿಕ್ ಹಾರ್ಲೆ ಡೇವಿಡ್ಸನ್ ಬೈಕ್ ವೊಂದನ್ನು ಪಡೆಯುವುದು ಕನಸಿನ ಮಾತಾಗಿತ್ತು. ಆದರೆ 2009ನೇ ಇಸವಿಯಲ್ಲಿ ಭಾರತಕ್ಕೆ ಕಾಲಿರಿಸುವ ಮೂಲಕ ಹಾರ್ಲೆ ದೇಶದಲ್ಲಿನ ತನ್ನ ಭವಿಷ್ಯವನ್ನೇ ಬದಲಾಯಿಸಿತ್ತು. ಹಾರ್ಲೆ ಯಶಸ್ಸಿನಲ್ಲಿ ಹಾರ್ಲೆ ಮಾಲಿಕರ ಸಂಸ್ಥೆ (ಎಚ್ ಒಜಿ) ಪಾತ್ರ ನಿರ್ಣಾಯಕವೆನಿಸಿದೆ.
ಹಾರ್ಲೆ ಅಂದರೆ ಕೇವಲ ಒಂದು ವಿ ಟ್ವಿನ್ ಎಂಜಿನ್, ಏರ್ ಫ್ಲೋ ಬಾಕ್ಸ್, ಕಸ್ಟಮೈಸ್ಡ್ ಪೈಂಟ್, ಓಪನ್ ಎಕ್ಸಾಸ್ಟ್ ಪೈಪ್ ಅಥವಾ ಕ್ರೋಮ್ ಸ್ಪರ್ಶಕ್ಕೆ ಮಾತ್ರ ಸೀಮಿತವಾಗದೆ ಓರ್ವ ಪರಿಪೂರ್ಣ ಚಾಲಕನು ಮಾಡಬೇಕಾದ ಕರ್ಮಗಳೇನು ಎಂಬುದನ್ನು ಕಲಿಸಿಕೊಡುತ್ತದೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಸ್ಥಳೀಯ ಹಾರ್ಲೆ ಮೋಟಾರುಸೈಕಲ್ ವಿತರಕರಾದ ಟಸ್ಕರ್ ಹಾರ್ಲೆ ಡೇವಿಡ್ಸನ್ ಪಾತ್ರ ಮಹತ್ವದೆನಿಸಿದೆ. ಬೆಂಗಳೂರಿನಲ್ಲಿ ಟಸ್ಕರ್ ಹಾರ್ಲೆ ಡೇವಿಡ್ಸನ್ ಮಾಲಿಕರಾಗಿರುವ ಶ್ರೀನಿವಾಸ್ ರೆಡ್ಡಿ ಅವರು ಟಸ್ಕರ್ ಹಾರ್ಲೆ ಡೇವಿಡ್ಸನ್ ಮಾಲಿಕರ ಸ್ಥಳೀಯ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸುತ್ತಾರೆ.
ಇತರ ಗ್ರೂಪ್ ಗಳಿಗಿಂತಲೂ ವಿಭಿನ್ನವಾಗಿ ಬೆಂಗಳೂರಿನ ರೈಡಿಂಗ್ ಪ್ರಿಯರ ಭವಿಷ್ಯವನ್ನು ಟಸ್ಕರ್ ಹಾರ್ಲೆ ಡೇವಿಡ್ಸನ್ ಹೇಗೆ ಬದಲಾಯಿಸುತ್ತದೆ ಎಂಬುದಕ್ಕಿಂತ ಮೊದಲು ಈ ಸ್ಥಳೀಯ ಕಾರ್ಯಕ್ರಮಗಳ (local chapter) ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಅಗತ್ಯ.

ಹಾರ್ಲೆ ಡೇವಿಡ್ಸನ್ ಉತ್ಸಾಹಿಗಳನ್ನು ಒಂದುಗೂಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸ್ನೇಹಿತರನ್ನು ಭೇಟಿಯಾಗಿ ಕೇವಲ ಒಂದು ಮೋಜು ರೈಡಿಂಗ್ ಗಾಗಿ ಮಾತ್ರ ಸೀಮಿತಗೊಲ್ಲದೆ ಸಮಾಜ ಸೇವೆಯನ್ನು ಇದು ಗುರಿಯಾಗಿರಿಸಿಕೊಂಡಿದೆ.
ಈ ನಡುವೆ ಟಸ್ಕರ್ ಹಾರ್ಲೆ ಡೇವಿಡ್ಸನ್ ಮಾಲಿಕರ ಸಂಸ್ಥೆಯನ್ನು ಭೇಟಿಯಾಗುವ ಸುವರ್ಣಾವಕಾಶವು ನಮ್ಮ ಡ್ರೈವ್ ಸ್ಪಾರ್ಕ್ ತಂಡಕ್ಕೆ ಒದಗಿ ಬಂದಿತ್ತು. ಮೊದಲೇ ಬೈಕ್ ಪ್ರೇಮಿಗಳಾದ ನಮಗೆ ಖಂಡಿತವಾಗಿಯೂ ಹೊಸತನದ ಅನುಭವ ಸಿಗಲಿದೆ ಎಂಬ ನಂಬಿಕೆಯಿತ್ತು. ನಮ್ಮ ಊಹೆ ತಪ್ಪಾಗಿರಲಿಲ್ಲ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿತ್ತು.
ಇಲ್ಲಿ ಓರ್ವ ಬೈಕ್ ಚಾಲಕನಾದವನು ತುರ್ತು ಪರಿಸ್ಥಿತಿಯಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸಾ ಉಪಚಾರದಿಂದ ಹಿಡಿದು ಜೀವನ ಶೈಲಿಯ ಬಗ್ಗೆ ಅಮೂಲ್ಯ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಪ್ರತಿಯೊಬ್ಬ ಬೈಕ್ ಚಾಲಕನೂ ಇದನ್ನರಿತುಕೊಳ್ಳುವುದು ಅತಿ ಮುಖ್ಯ. ಇದನ್ನಿಲ್ಲಿ ಅರ್ಥವಾಗುವ ರೀತಿಯಲ್ಲಿ ಪ್ರಾಯೋಗಿಕವಾಗಿ ಅತ್ಯಂತ ಸರಳ, ಸುಲಭ ರೀತಿಯಲ್ಲಿ ಹೇಳಿಕೊಡಲಾಗುತ್ತಿದೆ.

ಚಿತ್ರದಲ್ಲಿ (ಎಡದಿಂದ ಬಲಕ್ಕೆ): ಶ್ರೀನಿವಾಸ್ ರೆಡ್ಡಿ, ಟಸ್ಕರ್ ಹಾರ್ಲೆ ಡೇವಿಡ್ಸನ್ ಡೀಲರ್ ಶಿಪ್ ಮಾಲಿಕ, ಡಾ. ದಿನಾಕರ್, ಲೈಫ್ ಸಪೋರ್ಟ್ ಮತ್ತು ಸುರಕ್ಷತಾ ಮಾರ್ಗದರ್ಶಕ ಮತ್ತು ಫಾರೂಕ್ ಅಹ್ಮದ್, ಟಸ್ಕರ್ ಎಚ್ ಒಜಿ (H.O.G) ಚಾಪ್ಟರ್ ನಿರ್ದೇಶಕ. ಫೋಟೊ ಕೃಪೆ: ರಾಜ್ ಕಮಲ್ (ಡ್ರೈವ್ ಸ್ಪಾರ್ಕ್)

ಈ ಸಂದರ್ಭದಲ್ಲಿ ಬಹಳ ಉಪಯುಕ್ತ ಸಮಯವನ್ನು ನಮ್ಮ ಜೊತೆ ಹಂಚಿಕೊಂಡ ಡಾ. ದಿನಾಕರ್ ಅಪತ್ಕಾಲದಲ್ಲಿ ಜೀವ ಉಳಿಸುವ ತಂತ್ರಗಾರಿಕೆಯ ಬಗ್ಗೆ ಚಾಲಕರ ಉಪಸ್ಥಿತಿಯಲ್ಲೇ ಕುಟುಂಬ ಸದಸ್ಯರಿಗೆ ಹೇಳಿಕೊಟ್ಟರು. ಅಪಘಾತ ಸಂದರ್ಭದಲ್ಲಿ ಹೃದಯಾಘಾತದಂತಹ ಸನ್ನಿವೇಶ ಎದುರಾದ್ದಲ್ಲಿ ಮಾಡಬೇಕಾದ ತುರ್ತು ಸೇವೆಯ ಬಗ್ಗೆ ಹೇಳಿಕೊಡಲಾಯಿತು.

ಯಾವುದೇ ಅಪಘಾತವನ್ನು ಪರಿಗಣಿಸಿದರೂ ಬೈಕ್ ಅಪಘಾತ ಅತ್ಯಂತ ಅಪಾಯಕಾರಿಯಾಗಿದ್ದು, ಸಾವು-ನೋವು ಸಂಭವಿಸುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ. ಅಲ್ಲದೆ ಗಾಯ ಅಥವಾ ಮುರಿತಕ್ಕೊಳಗಾದ ಸಂದರ್ಭದಲ್ಲಿ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬುದರ ಬಗ್ಗೆ ಹೇಳಿಕೊಡಲಾಯಿತು.
ಅಂತಿಮ ತೀರ್ಪು:
ಕೊನೆಗೆ ಹೊರ ಬಂದ ನಮ್ಮಲ್ಲಿ ಒಂದು ಸಾಧಾರಣಕ್ಕಿಂತ ವಿಭಿನ್ನವಾಗಿ ಏನೋ ಹೊಸತನವನ್ನು ಕಲಿತ ಅನುಭವವಾಗಿತ್ತು. ಇದಕ್ಕಾಗಿ ಟಸ್ಕರ್ ಬೆಂಗಳೂರಿಗೆ ನಾವು ಕೃತಜ್ಞತೆ ಸಲ್ಲಿಸಲೇಬೇಕು. 350ಕ್ಕೂ ಹಾರ್ಲೆ ಡೇವಿಡ್ಸನ್ ಸಕ್ರಿಯ ಮಾಲಿಕರೊಂದಿಗೆ ಸದಾ ಕ್ರಿಯಾಮಗ್ನವಾಗಿರುವ ಈ ತಂಡ ಸುರಕ್ಷತೆಯ ಬಗ್ಗೆ ಹೇಳಿಕೊಡುತ್ತಿರುವ ಪಾಠ ನಿಜಕ್ಕೂ ಶ್ಲಾಘನೀಯವಾಗಿದೆ.
ಅಂತಿಮವಾಗಿ ನಮ್ಮಲ್ಲಿ ಮೂಡಿರುವ ಭಾವನೆ, ಯಾವತ್ತಾದರೂ ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸುವುದಾದ್ದಲ್ಲಿ ನಿಸ್ಸಂಶಯವಾಗಿಯೂ ಈ ಕುಟುಂಬದ ಸದಸ್ಯನಾಗಬೇಕು. ಅಂತೆಯೇ ನೀವು ಕೂಡಾ ಇದರ ಅಂಗವಾಗಬೇಕು ಎಂಬುದು ನಮ್ಮ ಆಶಯವಾಗಿದೆ.

2015 ಟಸ್ಕರ್ ಹಾರ್ಲೆ ಡೇವಿಡ್ಸನ್ ಚಾಪ್ಟರ್ ರುವಾರಿಗಳು:
ಶ್ರೀನಿವಾಸ್ ಮತ್ತು ಕುಮಾರ್ ರೆಡ್ಡಿ
ಟಸ್ಕರ್ ಹಾರ್ಲೆ ಡೇವಿಡ್ಸನ್ ಡೀಲರ್ ಶಿಪ್ ಮಾಲಿಕ
ಚಾಲನೆ ಮಾಡುವ ಬೈಕ್: ಸೂಪರ್ ಗ್ಲೈಡ್ ಮತ್ತು ಫಾಟ್ ಬಾಯ್
ಫಾರೂಕ್ ಅಹ್ಮದ್
ಟಸ್ಕರ್ ಎಚ್ ಒಜಿ ಚಾಪ್ಟರ್
ಚಾಲನೆ ಮಾಡುವ ಬೈಕ್: ನೈಟ್ ರಾಡ್
ವಿನಾಯಕ್ ನಾಯಕ್
ಸಹಾಯಕ ನಿರ್ದೇಶಕ
ಚಾಲನೆ ಮಾಡುವ ಬೈಕ್: ಫಾಟ್ ಬಾಯ್
ಪ್ರಣಮ್ ವಿಶ್ವನಾಥ್
ಚಾಪ್ಟರ್ ವ್ಯವಸ್ಥಾಪಕ
ಚಾಲನೆ ಮಾಡುವ ಬೈಕ್: ಐಯನ್ 883
ಸುಲ್ತಾನ್ ನಸ್ಸೂರ್
ಕಾರ್ಯದರ್ಶಿ
ಚಾಲನೆ ಮಾಡುವ ಬೈಕ್: ಫೋರ್ಟಿಎಯಿಟ್
ಶಿರ್ಲೆ ಜಾರ್ಜ್
ಖಜಾಂಜಿ
ಚಾಲನೆ ಮಾಡುವ ಬೈಕ್: ಫಾಟ್ ಬಾಬ್
ಆರತಿ ಚೆಲ್ಲಪ್ಪ
ಸಂಪಾದಕಿ
ಚಾಲನೆ ಮಾಡುವ ಬೈಕ್: ಫಾಟ್ ಬಾಬ್
ಸಂಚಯ್ ಸಿನ್ಹಾ
ಕಾರ್ಯಶೀಲ ಅಧಿಕಾರಿ
ಚಾಲನೆ ಮಾಡುವ ಬೈಕ್: ಫಾಟ್ ಬಾಯ್
ವಿನಯ್ ಕುಮಾರ್
ಕಾರ್ಯಶೀಲ ಅಧಿಕಾರಿ
ಚಾಲನೆ ಮಾಡುವ ಬೈಕ್: ಫಾಟ್ ಬಾಬ್
ವಿಶಾಲ್ ವಾಸು
ರೋಡ್ ಕ್ಯಾಪ್ಟನ್
ಚಾಲನೆ ಮಾಡುವ ಬೈಕ್: ಸ್ಟ್ರೀಟ್ 750
ಅಜಯ್ ಹಂಡಾ
ರೋಡ್ ಕ್ಯಾಪ್ಟನ್
ಚಾಲನೆ ಮಾಡುವ ಬೈಕ್: ಐಯನ್ 883
ಮಕ್ಸೂದ್
ರೋಡ್ ಕ್ಯಾಪ್ಟನ್
ಚಾಲನೆ ಮಾಡುವ ಬೈಕ್: ಫಾಟ್ ಬಾಯ್

ಡಾ. ದಿನಾಕರ್ ಅವರು ನಡೆಸಿಕೊಟ್ಟಿರುವ ಈ ಉಪಯುಕ್ತ ಕಾರ್ಯಕ್ರಮದ ವೀಡಿಯೋವನ್ನು ಸದ್ಯದಲ್ಲೇ ಟಸ್ಕರ್ ಹಾರ್ಲೆ ಡೇವಿಡ್ಸನ್ ಗ್ರೂಪ್ ಚಾಪ್ಟರ್ ತನ್ನ ಇತರೆ ಎಚ್ ಒಜಿ ಹಾಗೂ ಮೋಟಾರು ಗ್ರೂಪ್ ಗಳೊಂದಿಗೆ ಹಂಚಿಕೊಳ್ಳಲಿದೆ.


Click it and Unblock the Notifications








