ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹುಚ್ಚಾಟಕ್ಕೆ ಬೆಚ್ಚಿದ ಜನ..!

ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ರಸ್ತೆ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೂ ಯಾವುದೇ ಭರವಿಲ್ಲ. ಸಂಚಾರಿ ನಿಯಮವನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ದ ಟ್ರಾಫಿಕ್ ಪೊಲೀಸರು ದಿನನಿತ್ಯ ಸಾವಿರಾರು ಪ್ರಕರಣಗಳನ್ನು ದಾಖಲಿಸುತ್ತಿದ್ದು, ಇದು ಕೆಲವೊಮ್ಮೆ ವಾಹನ ಸವಾರರು ಮತ್ತು ಪೊಲೀಸರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಮೊನ್ನೆಯಷ್ಟೇ ದಾವಣಗೆರೆಯಲ್ಲಿ ನಡೆದ ಟ್ರಾಫಿಕ್ ಪೊಲೀಸರ ಮೇಲೆ ದ್ವಿಚಕ್ರ ವಾಹನ ಸವಾರನ ಹಲ್ಲೆ ಪ್ರಕರಣ ಮಾಸುವ ಮುನ್ನುವೇ ಇಲ್ಲಿ ಮತ್ತೊಂದು ವಿಚಿತ್ರ ಪ್ರಕರಣ ನಡೆದಿದ್ದು, ಬೈಕ್ ಕೀ ಕಿತ್ತುಕೊಂಡ ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕನೊಬ್ಬ ವಿದ್ಯುತ್ ಕಂಬ ಏರಿದ್ದಲ್ಲದೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಅಂದಹಾಗೆ ಈ ಘಟನೆ ನಡೆದಿರುವುದು ತಮಿಳುನಾಡಿನ ತುತುಕೂಡಿಯಲ್ಲಿ. ಬೈಕ್ ಸವಾರಿ ಮಾಡುತ್ತಿದ್ದ ಜೋದಿ ರಮೇಶ್ ಎಂಬಾತನೇ ಪೊಲೀಸರ ಕ್ರಮ ವಿರೋಧಿಸಿ ವಿದ್ಯುತ್ ಕಂಬ ಏರಿ ಹುಚ್ಚಾಟ ಮಾಡಿದ್ದು, ರಮೇಶ್ ವರ್ತನೆ ಕಂಡು ಸ್ಥಳೀಯರು ಮತ್ತು ಪೊಲೀಸರೇ ತಬ್ಬಿಬ್ಬಾದ ಘಟನೆ ನಡೆದಿದೆ.

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ವಾಹನಗಳ ತಪಾಸಣೆಗಾಗಿ ನಿಂತಿದ್ದ ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಜೋದಿ ರಮೇಶ್‌ನನ್ನು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಬೈಕಿಗೆ ಸಂಬಂಧಿಸಿದ ದಾಖಲೆಗಳು ಸರಿ ಇಲ್ಲದ ಕಾರಣ ಬೈಕಿನ ಕೀ ಕಿತ್ತುಕೊಂಡಿದ್ದಾರೆ.

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಇದರಿಂದ ಕೂಪಿತನಾದ ಜೋದಿ ರಮೇಶ್ ಟ್ರಾಫಿಕ್ ಪೊಲೀಸರೊಂದಿಗೆ ಕೆಲಹೊತ್ತು ವಾಗ್ವಾದ ಮಾಡಿದ್ದಲ್ಲದೇ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬವನ್ನು ಏರುವ ಮೂಲಕ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾನೆ.

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಬೈಕ್ ಕೀ ಈಗಲೇ ಕೋಡಬೇಕು ಇಲ್ಲವಾದ್ರೆ ಇಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ತನ್ನ ಮೇಲೆ ಇದುವರೆಗೆ ದಾಖಲಾಗಿರುವ ಕೇಸ್‌ಗಳನ್ನು ತೆಗದುಹಾಕುವಂತೆ ಕೂಡಾ ಬೇಡಿಕೆ ಇಟ್ಟಿದ್ದಾನೆ.

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಇದರಿಂದ ಬೈಕ್ ಸವಾರನ ಹುಚ್ಚಾಟ ಕಂಡು ತಬ್ಬಿಬ್ಬಾದ ಪೊಲೀಸರು ರಮೇಶ್‌ನನ್ನು ಕೆಳಗೆ ಇಳಿಸಲು ಎಷ್ಟೇ ಪ್ರಯತ್ನ ಮಾಡಿದ್ರು ಸಾಧ್ಯವಾಗಿಲ್ಲ. ಈ ವೇಳೆ ಸ್ಥಳೀಯರು ಕೂಡಾ ರಮೇಶ್ ಮನವೊಲಿಸಲು ಮುಂದಾದ್ರು ಪ್ರಯೋಜವಾಗಲಿಲ್ಲ.

MOST READ: ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಕೊನೆಗೆ ಅಗ್ನಿಶಾಮಕ ದಳ ಸಿಬ್ಬಂದಿಯನ್ನೇ ಕರೆತಂದ ಪೊಲೀಸರು ಬೈಕ್ ಸವಾರ ರಮೇಶ್‌ನನ್ನು ಸುರಕ್ಷಿತವಾಗಿ ಕೆಳಕ್ಕೆ ಇರಿಸಿ ವಶಕ್ಕೆ ಪಡೆದುಕೊಂಡಿದ್ದು, ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆಗೆ ಯತ್ನ ಕೇಸ್ ಜಡಿದು ಕಂಬಿ ಹಿಂದೆ ಕೂರಿಸಿದ್ದಾರೆ.

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಇದು ಮೊದಲಲ್ಲಾ..!

ಹೌದು, ವಿದ್ಯುತ್ ಕಂಬ ಏರಿ ಪೊಲೀಸರನ್ನೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದ ಬೈಕ್ ಸವಾರ ರಮೇಶ್ ವಿದ್ಯುತ್ ಕಂಬ ಏರುತ್ತಿರುವುದು ಇದು ಮೊದಲಲ್ಲಾ. ಈ ಹಿಂದೆಯು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ಮೂರು ಬಾರಿ ಟವರ್ ಏರಿದ್ದನಂತೆ.

MOST READ: ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಟ್ರಾಫಿಕ್ ಪೊಲೀಸರ ಕ್ರಮ ವಿರೋಧಿಸಿ ಯುವಕ ಮಾಡಿದ ಹಚ್ಚಾಟಕ್ಕೆ ಬೆಚ್ಚಿದ ಜನ..!

ಆದ್ರೆ ಅದೇನೆ ಆಗಲಿ. ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುವುದು ಮೊದಲೇ ತಪ್ಪು. ಅಂತ್ರದಲ್ಲಿ ಹೀಗೆಲ್ಲಾ ಮಾಡಿ ಜೀವಕ್ಕೆ ಸಂಚಕಾರ ತಂದುಕೊಳ್ಳುವುದು ಯಾರಿಗೆ ನಷ್ಟ ಹೇಳಿ? ಹೀಗಾಗಿ ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಿ. ಅದು ನಿಮಗೆ ಅಷ್ಟೇ ಅಲ್ಲ ಇತರರಿಗೂ ಒಳ್ಳೆಯದು.

Source: tamil.news18

Most Read Articles

Kannada
Read more on off beat
English summary
Tuticorin Youngster Protest Against Police For Taking Key From Bike.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more