ಬಡ ಪೆಟ್ರೋಲ್ ಬಂಕ್ ನೌಕರನಿಗೆ TVS ಬೈಕ್ ಗಿಫ್ಟ್ ಕೊಟ್ಟ ಟಿವಿ ಸ್ಟಾರ್: ಸಂತೋಷಕ್ಕೆ ಕಣ್ಣುಗಳು ತುಂಬಿ ಬಂದವು!

ವಿಜಯ್ ಟಿವಿಯ 'ಚಳಕಬ್ ಪೋವಾಟು ಯಾರು' ಶೋ ವಿಜೇತ ಕೆಪಿವೈ ಬಾಲಾ ತಮಿಳುನಾಡಿನಾದ್ಯಂತ ದೊಡ್ಡಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. 'ಕುಕ್ ವಿತ್ ಕೋಮಾಲಿ' ಕಾರ್ಯಕ್ರಮದ ನಂತರ, ಬಾಲಾ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಕೂಡ ಒದಗಿಬಂದವು. ಸದ್ಯ ನಿರೂಪಕರಾಗಿ ಫುಲ್ ಬ್ಯುಸಿಯಾಗಿದ್ದಾರೆ.

ಜನಪ್ರಿಯ ಟಿವಿ ಸ್ಟಾರ್ ಆಗಿರುವ ಕೆಪಿವೈ ಬಾಲಾ (KPY Bala), ತಮ್ಮ ಸಮಾಜ ಸೇವೆ ಮೂಲಕವೇ ಮನೆಮಾತಾಗಿದ್ದಾರೆ. 2023ರಲ್ಲಿ ಈರೋಡ್ ಬಳಿಯ ಗುಡ್ಡಗಾಡು ಪ್ರದೇಶವಾದ ಕಡಂಬೂರು ಜನರ ಅನುಕೂಲಕ್ಕಾಗಿ ಆಂಬ್ಯುಲೆನ್ಸ್ ಅನ್ನು ನೀಡಿದ್ದರು. ಕಳೆದ ಜನವರಿಯಲ್ಲಿ ಅನಕಾಪುತ್ತೂರು ಗ್ರಾಮದ ನಿವಾಸಿಗಳಿಗೆ ವಿಶೇಷವಾಗಿ ಅಂಗವಿಕಲರು ಹಾಗೂ ಗರ್ಭಿಣಿಯರಿಗೆ ನೆರವಾಗುವ ಸಲುವಾಗಿ ಆಟೋ ಸೇವೆಯನ್ನು ಪ್ರಾರಂಭಿಸಿದ್ದರು.

TV Actor KPY Bala Gifted TVS Star City Plus To Poor Petrol Bunk Employee

ನಿನ್ನೆ (ಮಾರ್ಚ್ 17) ಬಡ ಪೆಟ್ರೋಲ್ ಪಂಪ್ ನೌಕರನೊಬ್ಬನಿಗೆ ಕೆಪಿವೈ ಬಾಲಾ, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus) ಬೈಕ್‌ನ್ನು ಉಡೊಗೊರೆಯಾಗಿ ನೀಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ಕೆಪಿವೈ ಬಾಲಾ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ದಿನಗಳಿಂದ ಇನ್ಸ್ಟಾಗ್ರಾಮ್ ನಲ್ಲಿ ರೀಲ್ ವೊಂದು ಸಖತ್ ಟ್ರೆಂಡ್ ಆಗುತ್ತಿದೆ. ಅದರಲ್ಲಿ ಬೈಕ್ ಸವಾರನೊಬ್ಬ ಬಂಕ್​ಗೆ ಪೆಟ್ರೋಲ್ ಹಾಕಿಸಲು ಹೋದಾಗ ಅಲ್ಲಿ ಕೆಲಸ ಮಾಡುವ ಯುವಕ, ಈ ಮೋಟಾರ್‌ಸೈಕಲ್ ಬೆಲೆ ಎಷ್ಟೆಂದು ಪ್ರಶ್ನಿಸುತ್ತಾನೆ. ಬೈಕ್ ಸವಾರ ರೂ.43,000 ಎಂದು ಉತ್ತರಿಸುತ್ತಾನೆ. ತಕ್ಷಣವೇ ಆ ಯುವಕ ನಗುಲೇ ನಮ್ಮ ಮನೆಯಲ್ಲಿ ಹೊಸ ಬೈಕ್ ಖರೀದಿಸಲು ರೂ.10,000 ಕೇಳಿದರೂ ಬೈಯುತ್ತಾರೆ ಎಂದು ಅಸಹಾಯಕತೆಯನ್ನು ತೋರಿಸುತ್ತಾನೆ.

TV Actor KPY Bala Gifted TVS Star City Plus To Poor Petrol Bunk Employee

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ಹಲವಾರು ಆತನ ಬಗ್ಗೆ ಮರುಕವನ್ನು ವ್ಯಕ್ತಪಡಿಸುತ್ತಾರೆ. ಆದರೆ ಟಿವಿ ಸ್ಟಾರ್ ಕೆಪಿವೈ ಬಾಲಾ, ಆ ಯುವಕನಿಗೆ ಬೈಕ್ ಉಡುಗೊರೆಯಾಗಿ ನೀಡುವ ಮೂಲಕ ಸಂತೋಷ ಪಡಿಸಿದ್ದಾರೆ. ಯುವಕನಿಗೆ ಬೈಕ್ ಗಿಫ್ಟ್ ನೀಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಬಾಲಾ, 'ನಾನು ಆತನ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ನೋಡಿದೆ. ಅದು ನನ್ನ ಮನಸ್ಸನ್ನು ಕಲುಕಿತು. ಹಾಗಾಗಿ ಬೈಕ್ ಉಡುಗೊರೆಯಾಗಿ ನೀಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ಕೆಪಿವೈ ಬಾಲಾ ಪೆಟ್ರೋಲ್ ಬಂಕ್ ನೌಕರನಿಗೆ ಉಡುಗೊರೆಯಾಗಿ ಕೊಟ್ಟಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್, ದೇಶೀಯ ಮಾರುಕಟ್ಟೆಯಲ್ಲಿ ರೂ.77,138 ಲಕ್ಷದಿಂದ ರೂ.80,288 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಈ ಬೈಕ್ 109ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 4-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಒಳಗೊಂಡಿದೆ.

ಈ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ 90 ಕೆಎಂಪಿಹೆಚ್ ಟಾಪ್ ಸ್ವೀಡ್ ಪಡೆಯಲಿದೆ. 68 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಎಲ್ಇಡಿ ಹೆಡ್‌ಲ್ಯಾಂಪ್, ಯುಎಸ್‌‍ಬಿ ಮೊಬೈಲ್ ಚಾರ್ಜರ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 115 ಕೆಜಿ ತೂಕ ಹಾಗೂ 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 18, 2024, 15:19 [IST]
English summary
Tv actor kpy bala gifted tvs star city plus to poor petrol bunk employee
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+