TVS iQube: ಟಿವಿಎಸ್-ಝೊಮ್ಯಾಟೋ ಪಾರ್ಟ್ನರ್‌ಶಿಪ್: ರಸ್ತೆಗಿಳಿಯಲಿದೆ 10 ಸಾವಿರ ಐಕ್ಯೂಬ್ ಸ್ಕೂಟರ್‌ಗಳು
ಭಾರತದ ಜನಪ್ರಿಯ ಬೈಕ್ ನಿರ್ಮಾಣ ಕಂಪನಿಯಾದ ಟಿವಿಎಸ್ ಒಂದು ಹೊಸ ಹೆಜ್ಜೆ ಇಟ್ಟಿದೆ. ಭಾರತದ ಹೆಸರಾಂತ ಫುಡ್ ಡೆಲಿವರಿ ಕಂಪನಿಯಾದ ಝೊಮ್ಯಾಟೊ ಜೊತೆಗೂಡಿ ಈ ಹೊಸ ಹೆಜ್ಜೆ ಇಡುವ ಯೋಜನೆ ಮಾಡುತ್ತಿದ್ದು, ಇದರಿಂದ ಟಿವಿಎಸ್ ಮತ್ತು ಝೊಮ್ಯಾಟೋ ಈ ಎರಡೂ ಕಂಪನಿಗಳಿಗೆ ಲಾಭವಾಗಲಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಟಿವಿಎಸ್ ಕಂಪನಿಯು 10000 ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಝೋಮ್ಯಾಟೋ ಒಡಗೂಡಿ ತಯಾರಿಸಲು ಯೋಜನೆ ರೂಪಿಸಿದ್ದು ಇದರ ಕುರಿತಾಗಿ ಈಗಾಗಲೇ ಟಿವಿಎಸ್ ಘೋಷಣೆಯನ್ನು ಮಾಡಿದೆ. ಈ ಯೋಜನೆಯಿಂದಾಗಿ ಝೋಮ್ಯಾಟೋದ ಲಾಸ್ಟ್ ಮೈಲ್ ಡೆಲಿವರಿ ಯೋಜನೆಗೆ ಆನೆ ಬಲ ಬರಲಿದೆ ಎಂದು ಕಂಪನಿ ತಿಳಿಸಿದೆ.

ಈಗಾಗಲೇ ಟಿವಿಎಸ್ ಈ ಯೋಜನೆಗೆ ಝೊಮ್ಯಾಟೋವನ್ನು ಪಾರ್ಟ್ನರ್ ಮಾಡಿಕೊಂಡಿದ್ದು, ಇದರ ಭಾಗವಾಗಿ ಮೊದಲ ಘಟ್ಟದಲ್ಲಿ ಸುಮಾರು ಹತ್ತು ಸಾವಿರ ಟಿವಿಎಸ್ ಐಕ್ಯೂಬ್ ಸ್ಕೂಟರ್‌ಗಳನ್ನು ಮುಂದಿನ ಎರಡು ವರ್ಷ ಕಾಲದ ಒಳಗಾಗಿ ಬಿಡುಗಡೆ ಮಾಡಲಿದೆ. ಇಷ್ಟು ಮಾತ್ರವಲ್ಲದೇ ಇದೇ ಯೋಜನೆಯ ಭಾಗವಾಗಿ ಟಿವಿಎಸ್‌ನ ಚಾರ್ಜಿಂಗ್ ಸ್ಟೇಷನ್ ನ ಆಕ್ಸೆಸ್ ಸಹ ಲಭಿಸಲಿದೆ ಎಂದು ತಿಳಿಸಿದೆ.
ಇನ್ನು ಈ ವಿಚಾರದ ಕುರಿತಾಗಿ ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಸೀನಿಯರ್ ವೈಸ್ ಪ್ರೆಸಿಡೆಂಟ್ ಮನು ಸಕ್ಸೇನಾ, ಈ ಸ್ಟ್ರಾಟೆರ್ಜಿಕ್ ಪಾರ್ಟ್ನರ್‌ಶಿಪ್‌ನ ಸಹಾಯದಿಂದ ನಾವು ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಇದು ನಮ್ಮ ಇವಿ ವಾಹನದ ಉದ್ಯಮಕ್ಕೆ ಉತ್ತೇಜನ ನಿಡುವುದರ ಜೊತೆಗೆ ಪರಿಸರದ ಮಾಲಿನ್ಯವನ್ನೂ ಸಹ ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.
ಇನ್ನು ಈ ಸ್ಕೂಟರ್ ಖರೀದಿಸುವ ಡೆಲಿವರಿ ಪಾರ್ಟ್ನರ್‌ಗಳಿಗೆ ಇತರರಿಗೆ ಹೋಲಿಸಿದರೆ ಕಡಿಮೆ ಸರ್ವೀಸ್ ಕಾಸ್ಟ್ ನಲ್ಲಿ ಸೇವೆಗಳನ್ನು ಒದಗಿಸಲಿದ್ದೇವೆ ಎಂದು ಅವರು ಇದೇ ಸಂಧರ್ಭದಲ್ಲಿ ತಿಳಿಸಿದ್ದಾರೆ. ಇದರಿಂದ ಡೆಲಿವರಿ ಕೆಲಸಗಾರರಿಗೆ ಹೆಚ್ಚಿನ ಸಹಾಯವಾಗಲಿದೆ. ಇನ್ನು ಈ ಕುರಿತಾಗಿ ಝೊಮ್ಯಾಟೋ ಕಂಪನಿಯೂ ಸಹ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ.
ಟಿವಿಎಸ್‌ನ ಈ ಪಾರ್ಟ್ನರ್‌ಶಿಪ್‌ನೊಂದಿಗೆ ನಾವು ಒಟ್ಟು 50 ಕ್ಕೂ ಅಧಿಕ ಇವಿ ಕಂಪನಿಗಳೊಂದಿಗೆ ಕೈ ಜೋಡಿಸಿದ್ದೇವೆ. ಇದರ ಮೂಲಕ ಸುಮಾರು ಒಂದು ಲಕ್ಷಕ್ಕೂ ಅಧಿಕ ಇವಿ ಡೆಲಿವರಿ ಪಾರ್ಟ್ನರ್ ವ್ಯವಸ್ಥೆಯನ್ನು ಹೊಂದುವ ಗುರಿಯನ್ನು ಹೊಂದಿದ್ದೇವೆ ಎಂದು ಝೊಮ್ಯಾಟೋನಾ ಚೀಫ್ ಓಪರೇಷನ್ ಆಫಿಸರ್ ಆಗಿರುವ ರಿನ್ಷುಲ್ ಚಂದ್ರ ತಿಳಿಸಿದ್ದಾರೆ.
ಇನ್ನು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ನೋಡುವುದಾದರೆ ಈಗ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಈ ಟಿವಿಎಸ್ ಐಕ್ಯೂಬ್ ಸಹ ಒಂದು. ಎಸ್, ಎಸ್‌ಟಿ ಸೇರಿ ಒಟ್ಟು ಮೂರು ವೇರಿಯಂಟ್ ನಲ್ಲಿ ಈ ಟಿವಿಎಸ್ ಐಕ್ಯೂಬ್ ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications