ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಪರಿಸ್ಥಿತಿಗೆ ತಕ್ಕಂತೆ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯವು ಬದಲಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಮೌಲ್ಯವು ಬದಲಾದಂತೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಯೂ ಏರು ಪೇರಾಗುತ್ತದೆ.

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಇದೇ ರೀತಿಯ ಪರಿಸ್ಥಿತಿ ಟೆಸ್ಲಾ ಕಂಪನಿಯ ಸಂಸ್ಥಾಪಕರು ಹಾಗೂ ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್'ರವರಿಗೆ ಎದುರಾಗಿದೆ. ಅವರ ಒಂದು ಟ್ವಿಟರ್ ಪೋಸ್ಟ್ ಅವರನ್ನು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕೆಳಗಿಳಿಯುವಂತೆ ಮಾಡಿದೆ.

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಈ ವರ್ಷದ ಆರಂಭದಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿತ್ತು. ಟೆಸ್ಲಾ ಕಾರುಗಳನ್ನು ಬಿಟ್‌ಕಾಯಿನ್ ಮೂಲಕ ಖರೀದಿಸಬಹುದು ಎಂದು ಕಂಪನಿಯು ಕೆಲವು ದಿನಗಳ ಹಿಂದೆ ತಿಳಿಸಿತ್ತು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಈ ಮೂಲಕ ವಹಿವಾಟಿನಲ್ಲಿ ಬಿಟ್‌ಕಾಯಿನ್ ಅಳವಡಿಸಿಕೊಂಡ ವಿಶ್ವದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಕೆಗೆ ಟೆಸ್ಲಾ ಪಾತ್ರವಾಗಿತ್ತು. ಇದೇ ವೇಳೆ ಟೆಸ್ಲಾದಂತಹ ವಿಶ್ವ ವಿಖ್ಯಾತ ಕಂಪನಿಯೇ ಬಿಟ್‌ಕಾಯಿನ್‌ ಬಳಕೆಗೆ ಮನ್ನಣೆ ನೀಡಿದ ಕಾರಣ ಬಿಟ್‌ಕಾಯಿನ್‌ಗಳ ಮೌಲ್ಯ ಗಗನಕ್ಕೇರಿತ್ತು.

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಕಳೆದ ವಾರದ ವೇಳೆಗೆ ಬಿಟ್‌ಕಾಯಿನ್‌ ಮೌಲ್ಯ ಸುಮಾರು ರೂ.41 ಲಕ್ಷಗಳಾಗಿದೆ. ಆದರೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಟ್ವೀಟ್ ಮಾಡಿರುವ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಬಿಟ್‌ಕಾಯಿನ್‌ನ ಉತ್ಪಾದನಾ ವ್ಯವಸ್ಥೆಯು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಇದರಿಂದ ಟೆಸ್ಲಾ ಕಾರುಗಳನ್ನು ಬಿಟ್‌ಕಾಯಿನ್‌ ಮೂಲಕ ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರು ಈ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಬಿಟ್‌ಕಾಯಿನ್‌ಗಳ ಮೌಲ್ಯವು 30%ನಷ್ಟು ಕುಸಿಯಿತು.

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಇದು ಎಲಾನ್ ಮಸ್ಕ್‌ರವರಿಗೆ ಭಾರಿ ಹೊಡೆತ ನೀಡುವುದರ ಜೊತೆಗೆ ಟೆಸ್ಲಾ ಕಂಪನಿಯ ಷೇರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಕುಸಿಯುತ್ತಿದ್ದಂತೆ ಎಲಾನ್ ಮಸ್ಕ್ ಅವರ ಆಸ್ತಿ ಮೌಲ್ಯವು ಸಹ ಕುಸಿದಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಇದರಿಂದ ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಎಲಾನ್ ಮಸ್ಕ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಫ್ರಾನ್ಸ್'ನ ಬರ್ನಾರ್ಡ್ ಅರ್ನಾಲ್ಡ್ ಹಾಗೂ ಅವರ ಕುಟುಂಬವು ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತರ ಸ್ಥಾನಕ್ಕೇರಿದೆ.

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಅಮೆಜಾನ್‌ ಕಂಪನಿಯ ಜೆಫ್ ಬೆಜೋಸ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಮುನ್ನ ಟೆಸ್ಲಾ ಕಂಪನಿಯು ಬಿಟ್‌ಕಾಯಿನ್‌ ಮೂಲಕ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಬಹುದು ಎಂದು ಹೇಳಿತ್ತು.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಒಂದೇ ಒಂದು ಟ್ವಿಟರ್ ಪೋಸ್ಟ್ ಮೂಲಕ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಎಲಾನ್ ಮಸ್ಕ್

ಆದರೆ ಈಗ ಕೆಲವೇ ದಿನಗಳಲ್ಲಿಯೇ ಕಂಪನಿಯ ಸಿಇಒ ಎಲಾನ್ ಮಸ್ಕ್ ಬಿಟ್‌ಕಾಯಿನ್ ಬಳಕೆ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅಂದ ಹಾಗೆ ಟೆಸ್ಲಾ ಕಂಪನಿಯು ಶೀಘ್ರದಲ್ಲಿಯೇ ಭಾರತದಲ್ಲಿ ತನ್ನ ಮೊದಲ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ.

Most Read Articles

Kannada
English summary
Twitter post pushes Elon Musk to third richest man in the world. Read in Kannada.
Story first published: Saturday, May 22, 2021, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X