100 ಕಿ.ಮೀ ವೇಗದಲ್ಲಿ ಎರಡು ಬೈಕ್‌ಗಳು ಡಿಕ್ಕಿ: ಹೆದ್ದಾರಿ ಸವಾರರೇ ಯಾಮಾರಿಸುತ್ತಾರೆ ಎಚ್ಚರ!
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ನಡೆದ ಎರಡು ಬೈಕ್‌ಗಳ ನಡುವಿನ ಅಪಘಾತವೊಂದು ತುಂಬಾ ವೈರಲ್ ಆಗಿದೆ. ಕವಾಸಕಿ ನಿಂಜಾ ZX10R ಹಾಗೂ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ನಡುವೆ ಭೀಕರ ಅಪಘಾತವಾಗಿದ್ದು, ಕವಾಸಕಿ ನಿಂಜಾ ZX10R ಸವಾರನ ಹೆಲ್ಮೆಟ್‌ನಲ್ಲಿ ಅಳವಡಿಸಿಕೊಂಡಿದ್ದ ಕ್ಯಾಮರಾ ಸಂಪೂರ್ಣ ಅಪಘಾತ ದೃಶ್ಯಗಳನ್ನು ಸೆರೆಹಿಡಿದಿದೆ.
ವೀಡಿಯೊದಲ್ಲಿ, ಕವಾಸಕಿ ನಿಂಜಾ ZX10R ಹೆದ್ದಾರಿಯಲ್ಲಿ 100 ಕಿ.ಮೀ ವೇಗದಲ್ಲಿ ಹೋಗುವುದನ್ನು ನೋಡಬಹುದು. ಇದೇ ವೇಗದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ರಾಯಲ್ ಎನ್‌ಫೀಲ್ಡ್ ಸವಾರ ರಸ್ತೆ ದಾಟುತ್ತಾ ಅಡ್ಡಲಾಗಿ ಬಂದಿದ್ದು, ಕವಾಸಕಿ ನಿಂಜಾ ZX10R ಡಿಕ್ಕಿಯಾಗಿದೆ. ಇಲ್ಲಿ ರಾಯಲ್ ಎನ್‌ಫೀಲ್ಡ್ ಸವಾರ ನಿಂಜಾ ZX10R ವೇಗವಾಗಿ ಬರುವುದನ್ನು ಗುರುತಿಸಿದ್ದರು ಮುಂದೆ ಬಂದಿದ್ದಾನೆ.

ನಮೆಗೆ ತಿಳಿದಿರುವಂತೆ ರಾಯಲ್ ಎನ್‌ಫಿಲ್ಡ್ ಸವಾರ ಅಂತಹ ಹೆಚ್ಚಿನ ವೇಗವನ್ನು ನಿರೀಕ್ಷಿಸಿರಲಿಲ್ಲ ಅನಿಸುತ್ತದೆ. ಹಾಗಾಗಿ ರಸ್ತೆ ದಾಟಲು ಮುಂದಾಗಿದ್ದಾನೆ, ಈ ವೇಳೆ ನಿಂಜಾ ಸವಾರ ಬ್ರೇಕ್ ಹಾಕಲು ಪ್ರಯತ್ನಿಸಿದ್ದಾನಾದರೂ ಬೈಕ್ ನಿಯಂತ್ರಣವಾಗದೇ ಡಿಕ್ಕಿ ಹೊಡೆದಿದೆ. ಏಕೆಂದರೆ ಆ ವೇಗದಲ್ಲಿ ಬ್ರೇಕ್ ಹಾಕಿದ್ರೂ ಅಪಘಾತವಾಗುವ ಸ್ಥಳಕ್ಕೆ ತೀರಾ ಹತ್ತಿರವಿದ್ದರಿಂದ ಬೈಕ್ ಸಮಕ್ಕೆ ನಿಂತಿಲ್ಲ.
ಅಷ್ಟರಲ್ಲಿ ಬುಲೆಟ್ ಸವಾರ ಕೂಡ ಗಾಬರಿಗೊಂಡು ರಸ್ತೆಯ ಮಧ್ಯದಲ್ಲಿಯೇ ನಿಲ್ಲಿಸಿದ್ದಾನೆ. ನಿಂಜಾ ಬುಲೆಟ್‌ನ ಮುಂಭಾಗದ ಟೈರ್‌ಗೆ ಡಿಕ್ಕಿ ಹೊಡೆದಿದದ್ದು ಅಪಘಾತದಲ್ಲಿ ಎರಡೂ ವಾಹಗಳು ಜಖಂಗೊಂಡಿವೆ. ಅಪಘಾತ ಸ್ಥಳಕ್ಕೆ ಸ್ಥಳೀಯರು ಜಮಾಯಿಸಿ ನಿಂಜಾ ZX10R ಸವಾರನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದರಿಂದ ಅಪಘಾತದ ನಂತರ ಭಯಾನಕ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎಂದು ಸವಾರ ಹೇಳಿಕೊಂಡಿದ್ದಾನೆ.

ಸವಾರ ಕುಡಿದಿದ್ದಾನೆ ಎಂದು ಆರೋಪಿಸಿ ಥಳಿಸಲು ಮುಂದಾಗಿದ್ದಾರೆ. ಆದರೆ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದರಿಂದ ಅವರು ಇತ್ಯರ್ಥಕ್ಕೆ ಬಂದರು, ನಂತರ ಇಬ್ಬರೂ ಸವಾರರು ಸ್ಥಳದಿಂದ ತೆರಳಿದ್ದಾರೆ. ಭಾರತೀಯ ರಸ್ತೆಗಳಲ್ಲಿ ಅತಿ ವೇಗದಲ್ಲಿ ಸವಾರಿ ಮಾಡುವುದು ಏಕೆ ಅಪಾಯಕಾರಿ ಎಂದು ವೀಡಿಯೊ ತೋರಿಸುತ್ತದೆ. ಹೆದ್ದಾರಿಯಾದರೂ ಸ್ಥಳೀಯರು ಬೇಜವಾಬ್ದಾರಿಯಿಂದ ರಸ್ತೆ ದಾಟುವುದು ಸಾಮಾನ್ಯವಾಗಿಬಿಟ್ಟಿದೆ.
ಭಾರತೀಯ ರಸ್ತೆಗಳಲ್ಲಿ ಸಾಮಾನ್ಯ: ದಾರಿತಪ್ಪಿ ಪ್ರಾಣಿಗಳು, ದನಕರುಗಳು ಮತ್ತು ಪಾದಚಾರಿಗಳು ರಸ್ತೆ ದಾಟುವುದು ತುಂಬಾ ಸಾಮಾನ್ಯವಾಗಿದೆ. ಅಲ್ಲದೆ ತಪ್ಪಾಗಿ ಚಾಲನೆ ಮಾಡುವುದು, ಇಂಡಿಕೇಟರ್‌ಗಳನ್ನು ಬಳಸದೆ ನಿರ್ಲಕ್ಷಿಸುವ ವಾಹನ ಚಾಲಕರೂ ಇದ್ದಾರೆ. ಆದ್ದರಿಂದ, ಭಾರತೀಯ ರಸ್ತೆಗಳಲ್ಲಿ ಸುರಕ್ಷಿತ ವೇಗದ ಮಿತಿಗಳನ್ನು ಅನುಸರಿಸುವುದು ನಿರ್ಣಾಯಕವಾಗಿದೆ.

ಮುಖ್ಯವಾಗಿ ರಸ್ತೆ ದಾಟುವಿಕೆಯನ್ನು ಸಮೀಪಿಸುವಾಗ ವೇಗವನ್ನು ಕಡಿಮೆ ಮಾಡಬೇಕು, ಅದೇ ರೀತಿ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ನಗರಗಳು ಮತ್ತು ಹಳ್ಳಿಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಹಾದುಹೋಗುವಾಗ ವೇಗವನ್ನು ಕಡಿಮೆ ಮಾಡುವುದು ಉತ್ತಮ. ಗೊತ್ತುಪಡಿಸಿದ ಪಾದಚಾರಿ ದಾಟುವಿಕೆಗಳಿದ್ದರೂ ಸಹ, ಅನೇಕ ಜನರು ಅವುಗಳನ್ನು ಬಳಸುವುದಿಲ್ಲ. ಸಮಯವನ್ನು ಉಳಿಸುವ ಪ್ರಯತ್ನದಲ್ಲಿ ಹೆದ್ದಾರಿಗಳಲ್ಲಿ ಅಲೆದಾಡುತ್ತಾರೆ.
ಒಂದು ವೇಳೆ ಅವರಿಗೆ ಡಿಕ್ಕಿಯಾದಲ್ಲಿ ಸ್ಥಳೀಯರು ನಮ್ಮ ಮೇಲೆ ತಿರುಗಿ ಬೀಳುತ್ತಾರೆ. ಈಗಾಗಲೇ ಇಂತಹ ಘಟನೆಗಳು ನಡೆದ ಹಲವು ಉದಾಹರಣೆಗಳು ಇವೆ. ಈ ಪ್ರದೇಶಗಳಲ್ಲಿ ದಾರಿತಪ್ಪಿ ಪ್ರಾಣಿಗಳು ಮತ್ತು ದನಕರುಗಳು ಎದುರಾಗುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ಹೆದ್ದಾರಿಗಳಲ್ಲಿ ಸುರಕ್ಷಿತ ವೇಗವನ್ನು ಕಾಪಾಡಿಕೊಳ್ಳಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications