ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಸಫಾರಿಗೆ ತೆರಳಿದ್ದ ಜೀಪನ್ನು ಹಿಂದಿನಿಂದ ಒಂದು ಆನೆ ಮತ್ತು ಮುಂಭಾಗದಿಂದ ಒಂದು ಆನೆ ಅಟ್ಟಾಡಿಸಿ ಪ್ರವಾಸಿಗರನ್ನು ನಡುಗಿಸಿದ ಘಟನೆ ಚಾಮರಾಜನಗರದ ಕೆ‌‌.ಗುಡಿಯಲ್ಲಿ ನಡೆದಿದೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ವಾಹನದಲ್ಲಿದ್ದವರು ಪಾರಗಿದ್ದಾರೆ.

ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ‌.ಗುಡಿಯ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಒಂದಷ್ಟು ಪ್ರವಾಸಿಗರು ಅರಣ್ಯ ಇಲಾಖೆಯ ವಾಹನದಲ್ಲಿ ಸಫಾರಿ ತೆರಳಿದ್ದರು. ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತ ತಮ್ಮ ಸಫಾರಿಯನ್ನು ಎಂಜಾಯ್ ಮಾಡುತ್ತಿದ್ದರು. ಆದರೆ ಕೆಲವೇ ಹೊತ್ತಲ್ಲಿ ಸಫಾರಿ ಜೀಪ್‌ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಅದಾದ 200 ಮೀಟರ್ ಅಂತರದಲ್ಲಿ ಮುಂಭಾಗದಿಂದ ಮತ್ತೊಂದು ಆನೆ ವಾಹನದ ಮೇಲೆ ದಾಳಿ ಮಾಡಲು ಯತ್ನಿಸಿದೆ.

ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಈ ವೇಳೆ ಸಫಾರಿ ಜೀಪ್ ನಲ್ಲಿ ಇದ್ದ ಪ್ರವಾಸಿಗರು ಒಂದು ಕ್ಷಣ ಬೆಚ್ಚಿಬಿದ್ದರು. ಅವರು ಭಯದಲ್ಲಿ ಕೂಗಾಡುವ ಶಬ್ದವನ್ನು ವಿಡಿಯೋದಲ್ಲಿ ಕೇಳಬಹುದು. ಆದರೆ ಇಂತಹ ಸಂದರ್ಭದಲ್ಲಿ ಚಾಲಕನ ಪಾತ್ರ ಬಹಳ ಮುಖ್ಯ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಇಲ್ಲಿ ಚಾಲಕ ನಾಗರಾಜ್ ಅವರು ದೃತಿಗೆಡದೆ ವಾಹನದ ಹೆಡ್ ಲೈಟ್ ಆನ್ ಮಾಡಿ ಹಾರ್ನ್ ಮಾಡುತ್ತಲೇ ವಾಹನ ಚಲಾಯಿಸಿದ್ದಾರೆ. ಹೀಗಾಗಿ ಬೆದರಿದ ಆನೆ ವಾಪಸಾಗುವ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಇಲ್ಲಿ ಜೀಪ್ ಚಾಲಕ ನಾಗರಾಜ್ ಅವರ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಎರಡು ಆನೆಗಳು ಹೀಗೆ‌‌ ಅಟ್ಟಾಡಿಸುವ‌ ದೃಶ್ಯವನ್ನು ಪ್ರವಾಸಿಗರೊಬ್ಬರು ಆತಂಕದ ನಡುವೆಯೂ ಸೆರೆ ಹಿಡಿದಿದ್ದು, ಅದೀಗ ಸಖತ್ ವೈರಲ್ ಆಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಕಾಡಾನೆಗಳ ದಾಳಿಯ ನಡುವೆಯೂ ಬೆದರದೇ ಜೀವ ಉಳಿಸಿದ ಪುಣ್ಯಾತ್ಮ ಚಾಲಕ ನಾಗರಾಜ್ ಎಂದು ಹಲವು ಪ್ರವಾಸಿಗರು ಸ್ಮರಿಸಿದ್ದಾರೆ. ಎಲ್ಲಾ ಪ್ರವಾಸಿಗರು ಚಾಲಕನಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಈ ಕುರಿತು, ಕೆ.ಗುಡಿ ಆರ್ ಎಫ್ ಒ ಶಾಂತಪ್ಪ ಪೂಜಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಭತ್ತದಗದ್ದೆ ಕೆರೆ ರಸ್ತೆಯಲ್ಲಿ ಒಂಭತ್ತು ಆನೆಗಳ ಗುಂಪಿದೆ ಎಂದರು‌‌. ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುವುದು ಸಹಜ ಆದರೆ, ಎರಡು ಆನೆ ಸಫಾರಿ ವಾಹನ ಅಡ್ಡಗಟ್ಟಿದ ಘಟನೆ ತೀರಾ ಅಪರೂಪವಾಗಿದೆ ಎಂದರು.

ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಚಾಲಕ ನಾಗರಾಜ್ ಅವರ ಸಮಯ ಪ್ರಜ್ಞೆಯನ್ನು ಪ್ರವಾಸಿಗರು ಪಾರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಫಾರಿ ಜೀಪನ್ನು ಅಟ್ಟಾಡಿಸಿದ ಕಾಡಾನೆಗಳು, ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಪ್ರವಾಸಿಗರು

ಇನ್ನು ಕೆಲವರು ಹೀಗೆ ಆನೆಯನ್ನು ಸಫಾರಿ ವಾಹನದಲ್ಲಿ ಬೆನ್ನಟ್ಟಿದು ಸರಿಯಲ್ಲ. ಅದು ತುಂಬ ಹೆದರಿ ಹೋಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಪ್ರವಾಸಿಗರು ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ತಾವು ಜೀವಸಹಿತ ಬಂದಿದ್ದೇ ಹೆಚ್ಚು ಎಂಬ ಅಭಿಪ್ರಾಯವನ್ನು ಪ್ರವಾಸಿಗರು ಹೇಳಿದ್ದಾರೆ.

Most Read Articles

Kannada
English summary
Two Elephants Try To Attack Safari Jeep. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X