ದುಬಾರಿ ಕಾರಿನಲ್ಲಿ ಬಂದು ಮನೆ ಮುಂದಿನ ಹೂಕುಂಡ ಕದ್ದೊಯ್ದ ಯುವತಿಯರು! ಕಾರಣ?
ಇತ್ತೀಚೆಗೆ ಹೈ ಎಂಡ್ ಕಾರಿನಲ್ಲಿ ಬಂದು ಹೂವಿನ ಕುಂಡ ಕದ್ದು ಪರಾರಿಯಾಗುವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಇಬ್ಬರು ಯುವತಿಯರು ಅತ್ಯಾಧುನಿಕ ಕಾರಿನಲ್ಲಿ ಬಂದು ಒಂದು ಮನೆಯ ಮುಂದೆ ಇಳಿದರು. ನಿಧಾನಕ್ಕೆ ಗೇಟ್ ಬಳಿ ಬಂದವರೇ ಅಲ್ಲಿಯೇ ಇದ್ದ ಹೂಕುಂಡಗಳನ್ನು ಎಗರಿಸಿದರು. ಓಡುತ್ತಲೇ ಕಾರು ಹತ್ತಿ ಪರಾರಿಯೂ ಆದ ಈ ಹೈಟೆಕ್ ಜನರ ಕಳ್ಳತನದ ವೀಡಿಯೋ ವೈರಲ್ ಆಗಿದೆ.
ಹೈ ಎಂಡ್ ಕಾರಿನಲ್ಲಿ ಬಂದು ಹೂವಿನಕುಂಡ (Flowerpots) ಕದ್ದು ಪರಾರಿಯಾದ ಘಟನೆಯು ಪಂಜಾಬ್‌ನ ಮೊಹಾಲಿ ನಗರದಲ್ಲಿ ವರದಿಯಾಗಿದೆ. ಮೊಹಾಲಿ ನಗರದ 78 ಸೆಕ್ಟ್ರರ್‌ನ ಮನೆಯೊಂದರ ಮುಂಭಾಗದಲ್ಲಿದ್ದ ಹೂಕುಂಡಗಳು ಕಾಣಿಯಾಗಿತ್ತು. ಮನೆ ಮುಂದಿನ ಹೂಕುಂಡಗಳು ಕಾಣಿಯಾಗಿರುವುದನ್ನು ಪತ್ತೆ ಮಾಡಲು ಮನೆಯವರು ಸಿಸಿಕ್ಯಾಮರಾವನ್ನು ಪರೀಕ್ಷಿಸಿದರು. ಅಗ ಮನೆಯವರಿಗೆ ಕಳ್ಳಿಯರ ಕೈಚಕ ಕಂಡು ಬಂದಿದೆ.

ಈ ಘಟನೆಯನ್ನು ವಿವರವಾಗಿ ಹೇಳುವುದಾದರೆ, ಅಂದು ರಾತ್ರಿ ಸಮಯ ಮನೆಯ ಮುಂದೆ ಹೈಟಿಕ್ ಹ್ಯುಂಡೈ ಔರಾ (Hyundai Aura) ಕಾರೊಂದು ಬಂದಿತು. ಮನೆಯ ಮುಂದೆ ನಿಧಾನವಾಗಿ ದಾಟಿ ಸ್ವಲ್ಪವೇ ದೂರದಲ್ಲಿ ಕಾರು ನಿಂತಿತು. ಈ ಕಾರಿನಿಂದ ನಿಧಾನವಾಗಿ ಇಳಿದ ಎತಡೂ ಯುವತಿಯರು ನಿಧಾನವಾಗಿ ಕಾರಿನಿಂದ ಒಂದೇ ರೀತಿಯ ಡ್ರೆಸ್ ಹಾಕಿಕೊಂಡಿದ್ದ ಇಬ್ಬರು ಯುವತಿಯರು ಕಾರಿನಿಂದ ಇಳಿಯುತ್ತಾರೆ. ನಂತರ ಮನೆಯ ಮುಂದೆ ಇದ್ದ ಹೂಕುಂಡಕವನ್ನು ಕದ್ದುಕೊಂಡು ಹೋದರು.
ಈ ಎಲ್ಲಾ ಘಟನೆಯು ನಡೆದಿರುವುದು ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ನಡೆದಿರುವುದು. ಇನ್ನು ಈ ಹಿಂದೆ ಅಂದರೆ, ಈ ವರ್ಷದ ಆರಂಭದಲ್ಲಿ ಇಬ್ಬರು ವ್ಯಕ್ತಿಗಳು ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಆಂಬಿಯೆನ್ಸ್ ಮಾಲ್‌ನ ಮುಂಭಾಗದಲ್ಲಿ ಇರಿಸಲಾಗಿದ್ದ ಹೂಕುಂಡಗಳನ್ನು ಕದ್ದು ಎಸ್‌ಯುವಿಯಲ್ಲಿ ಹಾಕುತ್ತಿದ್ದ ಘಟನೆ ವರದಿ ಆಗಿತ್ತು. ಈ ಪ್ರಕರಣದಲ್ಲಿ ಗುರುಗ್ರಾಮ್‌ನಿಂದ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತು.

ದುಬಾರಿ ಕಿಯಾ ಕಾರ್ನೀವಲ್ ಕಾರಿನಲ್ಲಿ ಬಂದು ಬ್ಬರು ವ್ಯಕ್ತಿಗಳು ವಾಹನದೊಳಗೆ ಹೂವಿನ ಕುಂಡಗಟ್ಳನ್ನು ಇಡುತ್ತಿರುವುದನ್ನು ಒಬ್ಬ ಪ್ರೇಕ್ಷಕ ವೀಡಿಯೋ ಸೆರೆಹಿಡೆಯುತ್ತಾನೆ. ಇಬ್ಬರೂ ಹೂವಿನ ಕುಂಡಗಳನ್ನು ಪರೀಕ್ಷಿಸಿ ತಮ್ಮೊಂದಿಗೆ ತೆಗೆದುಕೊಳ್ಳಲು ಉತ್ತಮವಾದವುಗಳನ್ನು ಆಯ್ಕೆ ಮಾಡುಕೊಳ್ಳುತ್ತಾರೆ. ಅವರು ಕೆಲವು ಮಡಕೆಗಳನ್ನು ಲೋಡ್ ಮಾಡಿದ ನಂತರ, ಅವರು MPV ಯ ಎಲೆಕ್ಟ್ರಾನಿಕ್-ಕಂಟ್ರೋಲ್ ಟೈಲ್‌ಗೇ ಅನ್ನು ಮುಚ್ಚುತ್ತಾರೆ
DLF ಹಂತ 3 ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಅಪರಾಧಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಇದಲ್ಲದೆ, ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ನಂತರ ಬಂಧಿಸಲಾಯಿತು. ಇಂತಹ ಘಟನೆಗಳು ದೇಶದಾದ್ಯಂತ ನಡೆಯುತ್ತವೆ. ಆದರೆ ಕೆಲವು ಮಾತ್ರ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕ ಆಸ್ತಿಯನ್ನು ಕದಿಯುವ ಜನರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಹಿಂದೆ ಕೇಂದ್ರ ಸರ್ಕಾರ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಯುವತಿಯರು ಬಂದ ಹ್ಯುಂದೈ ಔರಾ ಕಾರಿನ ಬಗ್ಗೆ ಹೇಳುವುದಾದರೆ, ಔರಾದಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು 83 hp ಗರಿಷ್ಠ ಪವರ್ ಮತ್ತು 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಅಲ್ಲದೆ, ಔರಾದ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಫ್ಯಾಕ್ಟರಿಯಲ್ಲಿ ಫಿಟ್ ಮಾಡಿದ CNG ಕಿಟ್ ಹೊಂದಿರುವ ಆವೃತ್ತಿಯು 69 hp ಗರಿಷ್ಠ ಪವರ್ ಮತ್ತು 95.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಫೇಸ್‌ಲಿಫ್ಟ್ ಔರಾ ನಾಲ್ಕು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, E, S, SX ಮತ್ತು SX(O). ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಕಾರು, ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಔರಾ ಫೇಸ್‌ಲಿಫ್ಟ್ ನಾಲ್ಕು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ABS ಮತ್ತು EBD, ಜೊತೆಗೆ ISOFIX ಆಂಕಾರೇಜ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಆಟೋಮೆಟಿಕ್ ಹೆಡ್‌ಲ್ಯಾಂಪ್‌ಗಳನ್ನು ಪಡೆದಿದೆ ಎಂದು ಹೇಳಬಹುದು. ಇನ್ನು 8.0 ಇಂಚಿನ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ರೇರ್ ಎಸಿ ವೆಂಟ್‌ಗಳು, ಅಡ್ಜಸ್ಟ್ ಮಾಡಬಹುದಾದ ಹಿಂಭಾಗದ ಹೆಡ್‌ರೆಸ್ಟ್‌ಗಳು, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಹೊಂದಿದೆ.


Click it and Unblock the Notifications