ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ 80 ವರ್ಷದ ವೃದ್ಧನ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ಬ್ರೆಸ್ ಲೆಟ್ ಸೇರಿದಂತೆ ಹಲವಾರು ವಸ್ತುಗಳನ್ನು ಕದ್ದು ಪರಾರಿಯಾಗಿದ್ದ 11 ವರ್ಷ ಹಾಗೂ 17 ವರ್ಷದ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ.

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ವೃದ್ಧನ ಬಳಿಯಿದ್ದ ವಸ್ತುಗಳನ್ನು ದೋಚಿದ ನಂತರ ಈ ಖದೀಮರು ಹತ್ತಿರದಲ್ಲಿದ್ದ ನೀಲಿ ಬಣ್ಣದ ಸುಬಾರು ಕಾರು ಕದ್ದು, ಕದ್ದ ಕಾರಿನಲ್ಲಿಯೇ ನಗರದಾದ್ಯಂತ ಓಡಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ತನ್ನ ಮನೆಯ ಬಳಿ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಆತನ ಮೇಲೆ ದಾಳಿ ನಡೆಸಲಾಗಿದೆ.

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ಈ ದಾಳಿಯ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಗಳು ಅಮೆರಿಕಾದಲ್ಲಿ ವೈರಲ್ ಆಗಿವೆ. ವೃದ್ಧನ ಮೇಲೆ ದಾಳಿ ಮಾಡಿ ಆತನನ್ನು ಹೊಡೆದು ನೆಲಕ್ಕೆ ತಳ್ಳಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ಆತನ ಕೈ ಕಾಲುಗಳನ್ನು ಬಿಗಿಯಾಗಿ ಹಿಡಿದ ಕಾರಣ ಆತನಿಗೆ ಚಲಿಸಲು ಸಾಧ್ಯವಾಗಿಲ್ಲ. ಈ ಇಬ್ಬರು ಬಾಲಕರು ವೃದ್ಧನ ಬ್ರೆಸ್ ಲೆಟ್ ದೋಚಿ ಸುಬಾರು ಕಾರಿನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ಪೊಲೀಸರು ಈ ಬಾಲಕರನ್ನು ಸುಬಾರು ಕಾರಿನ ಸಮೇತ ಸೆರೆ ಹಿಡಿದಿದ್ದಾರೆ. ಈ ಬಾಲ ಅಪರಾಧಿಗಳು ಬೇರೆ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ವಿಚಾರಣೆ ವೇಳೆ ಬಾಲಕರು ವೃದ್ಧನ ಬಳಿ ಬ್ರೆಸ್ ಲೆಟ್ ಕದ್ದ ನಂತರ ಮತ್ತೊಬ್ಬ ಮಹಿಳೆಯಿಂದ ಪರ್ಸ್ ಕದಿಯಲು ಯತ್ನಿಸಿದ್ದನ್ನು ಒಪ್ಪಿ ಕೊಂಡಿದ್ದಾರೆ. ಬಂಧಿತ ಬಾಲಕರ ವಿರುದ್ಧ ಪೊಲೀಸರು ಯಾವ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ಕದ್ದ ಕಾರಿನಲ್ಲಿ ಬಾಲಕರು ನಗರದಾದ್ಯಂತ ಅತಿ ವೇಗವಾಗಿ ಚಲಿಸಿದ್ದಾರೆ ಎಂದು ಹೇಳಿರುವ ಕ್ಯಾಲಿಫೋರ್ನಿಯಾದ ಸ್ಯಾನ್ ಲಿಯಾಂಡ್ರೊ ಪೊಲೀಸರು, ಈ ವೇಳೆ ಯಾವುದಾದರೂ ಅಪಘಾತ ಸಂಭವಿಸಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ಭಾರತದಲ್ಲಿಯೂ ಈ ರೀತಿಯ ಕಳ್ಳತನ ಪ್ರಕರಣಗಳು ನಡೆಯುತ್ತವೆ. ಆದರೆ ಅಮೆರಿಕಾದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದೆ. ನಮ್ಮ ದೇಶದಲ್ಲಿ ಯುವ ಜನರು ಬಡತನದಿಂದಾಗಿ ಈ ರೀತಿಯ ಕೃತ್ಯಗಳಲ್ಲಿ ತೊಡಗುತ್ತಾರೆ.

ವೃದ್ಧನ ದೋಚಿ ಪರಾರಿಯಾಗಿದ್ದ ಬಾಲಕರು ಕೊನೆಗೂ ಅಂದರ್

ಆದರೆ ಅಮೆರಿಕಾದಲ್ಲಿ ಯುವಕರು ಮನರಂಜನೆಗಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ದುರದೃಷ್ಟಕರ. ಅಮೆರಿಕಾದಲ್ಲಿ 17 ವರ್ಷ ವಯಸ್ಸಿನ ಬಾಲಕ ಕಾರು ಚಾಲನೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.

Most Read Articles

Kannada
English summary
Two teenagers held for robbing 80 year old man in California. Read in Kannada.
Story first published: Sunday, May 16, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X