ಲೋಕಲ್ ಟ್ರೈನ್‌ನಲ್ಲಿ ಫೈವ್‌ಸ್ಟಾರ್ ರೆಸ್ಟಾರೆಂಟ್: ಮುಂಬೈ ಜನರ ಸಂತಸಕ್ಕೆ ಪಾರವೇ ಇಲ್ಲ
ಕೆಲವೊಂದು ವಿಭಿನ್ನವಾದ ಪ್ರಯತ್ನಗಳಿಂದ ಜನರ ಮನಸ್ಸನ್ನು ತುಂಬಾ ಸುಲಭವಾಗಿ ಸೆಳೆಯಬಹುದಾಗಿದೆ. ಆದರೆ ಆ ಪ್ರಯತ್ನಗಳು ಅದೇ ಜನರಿಗೆ ಸಹಾಯವಾಗುವ ರೀತಿಯದ್ದು ಆಗಿದ್ದರೆ ಅದು ಜನರ ಮನಸಲ್ಲಿ ಅಜರಾಮರವಾಗಿ ಉಳಿಯುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದಿದೆ. ಇದೇ ರೀತಿಯ ಪ್ರಯತ್ನವೊಂದು ಇದೀಗ ಮುಂಬೈ ಜನರ ಮನನಸ್ಸನ್ನು ಗೆದ್ದಿದೆ.
ಮುಂಬೈನ ಲೋಕಲ್ ಟ್ರೈನ್‌ಗಳನ್ನು ಮುಂಬೈನ ಹೃದಯವೆಂದೇ ಬಣ್ಣಿಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ, ಶೇ 50ಕ್ಕಿಂತ ಅಧಿಕ ಜನ ಮುಂಬೈನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ಈ ಲೋಕಲ್ ರೈಲಿನ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿರುವುದು. ಮುಂಬೈನ ಸ್ಥಳೀಯರಿಂದ ಹಿಡಿದು ಪ್ರವಾಸಿಗರವರೆಗೂ ಈ ರೈಲನ್ನು ಪ್ರತಿನಿತ್ಯ ತಮ್ಮ ಪ್ರಯಾಣದ ಅಗತ್ಯತೆಗಳಿಗಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.

ಇನ್ನು ಮುಂಬೈನ ಲೋಕಲ್ ಟ್ರೈನ್‌ನಲ್ಲಿ ದಿನಕ್ಕೆ ಲೆಕ್ಕವಿಲ್ಲದಷ್ಟು ಜನ ಪ್ರಯಾಣಿಸುವುದರಿಂದ ಸೌಲಭ್ಯಗಳ ವ್ಯವಸ್ಥೆ ಕೊಂಚ ಕಮ್ಮಿ ಎಂದರೆ ತಪ್ಪಾಗಲಾರದು. ಪ್ಲಾಟ್‌ಫಾರ್ಮ್‌ನಲ್ಲಿ ಜನರಿಗೆ ಬೇಕಾದ ಸ್ನ್ಯಾಕ್ಸ್‌ಗಳು ಲಭ್ಯವಿದೆ. ಕೆಲವೊಮ್ಮೆ ಹಲವರಿಗೆ ಪ್ರಯಾಣದ ಮಧ್ಯೆ ಏನಾದರು ತಿನ್ನಬೇಕು ಎಂದು ಅನಿಸಿದರೆ ಅದು ಸಾಧ್ಯವಾಗುವುದಿಲ್ಲ. ಇದೇ ಅವಕಾಶವನ್ನು ತಲೆಯಲ್ಲಿಟ್ಟುಕೊಂಡು ಇಬ್ಬರು ಯುವಕರು ಒಂದು ಹೊಸ ಐಡಿಯಾ ತಂದಿದ್ದಾರೆ.
ಇಬ್ಬರು ಯುವಕರು ಅವರ ಇನ್ಸ್ಟಾಗ್ರಾಂ ಹ್ಯಾಂಡಲ್ ಮೂಲಕ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. ಅದು ಏನೆಂದರೆ ಮುಂಬೈ ಲೋಕಲ್ ಟ್ರೈನ್‌ನಲ್ಲಿ ರೆಸ್ಟಾರೆಂಟ್ ಅನ್ನು ಆರಂಭಿಸಿರುವುದು. ಆರ್ಯನ್ ಕಟಾರಿಯ ಮತ್ತು ಸಾರ್ಥಕ್ ಸಾಚ್‌ದೇವಾ ಎಂಬ ಯುವಕರು ಮುಂಬೈನ ಸ್ಥಳೀಯರಿಗೆ ಈ ಅವಕಾಶವನ್ನು ಮುಂದಿಟ್ಟಿದ್ದಾರೆ. ಈ ಸುದ್ದಿಯನ್ನು ತಿಳಿದ ಪ್ರಯಾಣಿಕರ ಹಲವಾರು ರಿಯಾಕ್ಷನ್‌ಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಇಲ್ಲಿಯತನಕ ಮುಂಬೈನ ಲೋಕಲ್ ಟ್ರೈನ್‌ನಲ್ಲಿ ಈ ರೀತಿಯೂ ಮಾಡಬಹುದು ಎಂದು ಯಾರೂ ಸಹ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂಬುದು ವಾಸ್ತವ. ವಿಡಿಯೋದಲ್ಲಿ ಕಾಣುವಂತೆ ಲೋಕಲ್ ಟ್ರೈನ್‌ನಲ್ಲಿ ಫೈವ್‌ಸ್ಟಾರ್ ಕಿಚನ್ ಸೆಟ್‌ಅಪ್ ಮಾಡಿದ ನಂತರ ಡಿಸೈನ್‌ಗಳನ್ನು ಸಿದ್ದಗೊಳಿಸಿ, ರೈಲಿನ ಪ್ರಯಾಣಿಕರ ಬಳಿ ಇವರು ತೆರಳಿ, ವಿಷಯ ಮುಟ್ಟಿಸಿ ತಮ್ಮ ಹೊಸ ರೆಸ್ಟಾರೆಂಟ್‌ನ ಉದ್ಘಾಟನೆಗೆ ಕರೆದಿದ್ದಾರೆ.
ಈ ಇನ್ವಿಟೇಷನ್‌ನಲ್ಲಿ ರೆಸ್ಟಾರೆಂಟ್ ಓಪನಿಂಗ್‌ನ ಸಮಯ, ದಿನಾಂಕ ಮತ್ತು ಯಾವ ಬೋಗಿ ಎಂಬೆಲ್ಲಾ ವಿವರಗಳು ಇದ್ದು, ಇಷ್ಟ ಇರುವವರು ಅಲ್ಲಿಗೆ ತೆರಳಿ ಆಹಾರವನ್ನು ಸವಿಯಬಹುದಾಗಿದೆ. ಇನ್ನು ಇದರಲ್ಲಿನ ಇಂಟರೆಸ್ಟಿಂಗ್ ವಿಷಯ ಏನು ಎಂದರೆ ಇನ್ವಿಟೇಷನ್ ನೋಡಿದ ಬಳಿಕ ಅಲ್ಲಿನ ಜನರಿಗೆ ಇದನ್ನು ನಂಬಲು ಸಾಧ್ಯವಾಗಿಲ್ಲ ಎಂಬುದು. ಅವರ್ಯಾರೂ ಸಹ ಮುಂಬೈ ಲೋಕಲ್ ಟ್ರೇನ್‌ನಲ್ಲಿ ಈ ರೀತಿಯ ಒಂದು ವಿಷಯ ನಡೆಯಬಹುದು ಎಂದು ಯೋಚಿಸಿಯೂ ಇರಲಿಲ್ಲ.
ವಿಡಿಯೋದಲ್ಲಿ ಆಹಾರವನ್ನು ನೀಡಿದ ಬಳಿಕ ಗ್ರಾಹಕರಿಂದ ಫೀಡ್‌ಬ್ಯಾಕ್‌ಗಳನ್ನು ಸಹ ಪಡೆದುಕೊಂಡಿದ್ದು, ಜನರಿಂದ ಇವರ ಈ ಹೊಸ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿಯವರೆಗೆ ಈ ರೀತಿಯ ಒಂದು ಸೇವೆಯನ್ನು ಪಡೆದುಕೊಳ್ಳದೇ ಇದ್ದ ಪ್ರಯಾಣಿಕರು ಈ ಹೊಸ ಪ್ರಯತ್ನದಿಂದ ಖುಷಿಯಾಗಿರುವುದಂತೂ ಖಂಡಿತ. ಇದರಿಂದ ಇದೇ ರೀತಿಯ ಹಲವಾರು ಪ್ರಯತ್ನಗಳು ನಮ್ಮ ಕಣ್ಣ ಮುಂದೆ ಬರುವುದಂತೂ ಖಂಡಿತ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications