Just In
- 3 hrs ago
ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳಲ್ಲಿ ಮಾತ್ರ ರಿಜನರೇಟಿವ್ ಬ್ರೇಕಿಂಗ್ ಏಕೆ ಲಭ್ಯವಿದೆ: ಇದರ ಉಪಯೋಗವೇನು?
- 3 hrs ago
ಹೊಸ ನವೀಕರಣಗಳೊಂದಿಗೆ ಸಿಎಫ್ಮೋಟೋ 150ಎನ್ಕೆ ಬೈಕ್ ಬಿಡುಗಡೆ
- 5 hrs ago
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
- 5 hrs ago
ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತನೆಗೊಂಡು ಮಿಂಚುತ್ತಿದೆ 1954ರ ಫಿಯೆಟ್ ಕಾರು
Don't Miss!
- Sports
MI ಆಡುವ 11ರ ಬಳಗದಲ್ಲಿ ಮಗನಿಗೆ ಅವಕಾಶ ಸಿಗದ ಕುರಿತು ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
- News
ವಿಡಿಯೋ: ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಕಾರು ಅಪಘಾತ
- Lifestyle
ಮೇ. 30ಕ್ಕೆ ಶನಿ ಜಯಂತಿ: ಶನಿ ಧೈಯ್ಯಾ, ಶನಿ ದೋಷವಿದ್ದರೆ ಈ ಪರಿಹಾರಗಳನ್ನು ಮಾಡಿ
- Finance
ಮೇ 24ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
- Technology
ಭಾರತದಲ್ಲಿ ಎಲ್ಜಿ OLED 2022 ಸ್ಮಾರ್ಟ್ ಟಿವಿ ಸರಣಿ ಅನಾವರಣ!
- Education
BSF Recruitment 2022 : 281 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಯಾಣಿಕರ ಸಮಸ್ಯೆಗಳನ್ನು ಅರಿಯಲು ಕ್ಯಾಬ್ ಚಾಲಕರಾದ ಉಬರ್ ಇಂಡಿಯಾ ಮುಖ್ಯಸ್ಥ
ಪ್ರಸ್ತುತ ದಿನಗಳಲ್ಲಿ ಕ್ಯಾಬ್‌ಗಳಿಲ್ಲದ ನಗರಗಳನ್ನು ಊಹಿಸುವುದು ಅಸಾಧ್ಯ. ರಾಜಧಾನಿ ಬೆಂಗಳೂರಿನಲ್ಲೂ ಓಲಾ, ಊಬರ್‌ನಂತಹ ವಾಹನಗಳು ದಿನನಿತ್ಯ ಸಾವಿರಾರು ಜನರಿಗೆ ಸೇವೆ ನೀಡುತ್ತಿವೆ. ವಾಹನ ಚಾಲಕರು ಕೂಡ ಪ್ರಯಾಣಿಕರೊಂದಿಗೆ ಉತ್ತಮವಾಗಿ ವ್ಯವಹರಿಸುವುದರಿಂದ ಆಟೋಗಳಿಗೆ ಹೋಲಿಸಿಕೊಂಡರೆ ಬಹಳಷ್ಟು ಮಂದಿ ಕ್ಯಾಬ್‌ಗಳನ್ನೇ ಬಳಸುತ್ತಿದ್ದಾರೆ.

ಈ ನಡುವೆಯೂ ಇಂತಹ ವಾಹನ ಸೇವಾ ಸಂಸ್ಥೆಗಳ ಮಾಲೀಕರು ತಮ್ಮ ಸೇವೆಯಲ್ಲಿ ಏನೆಲ್ಲಾ ಸುಧಾರಣೆ ತರಬಹುದು ಎಂಬ ನಿಟ್ಟಿನಲ್ಲಿ ಆಗಾಗ ಜನರ ಮಧ್ಯೆಗೆ ಬರುತ್ತಿರುತ್ತಾರೆ. ಇದೀಗ ವಾಹನ ಸೇವಾ ಸಂಸ್ಥೆಯೊಂದರ ಉಸ್ತುವಾರಿ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಪ್ರಯಾಣಿಕರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಒಂದು ದಿನದ ಸಾಮಾನ್ಯ ಚಾಲಕನಂತೆ ಕ್ಯಾಬ್ ಅನ್ನು ಓಡಿಸಿದ್ದಾರೆ.

ಉಬರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಬ್ಜಿತ್ ಸಿಂಗ್ ಅವರು ಒಂದು ದಿನ ಕ್ಯಾಬ್ ಓಡಿಸಿ ಸಾಮಾನ್ಯರನ್ನು ಆಶ್ಚರ್ಯಗೊಳಿಸಿದ್ದಾರೆ. ಪ್ರಬ್ಜಿತ್ ಸಿಂಗ್ ಅವರು ಇತ್ತೀಚೆಗೆ ಉಬರ್ ಅನ್ನು ಇಡೀ ದಿನ ಓಡಿಸಲು ನಿರ್ಧರಿಸಿದ್ದರಂತೆ. ಈ ಮೂಲಕ ಉಬರ್ ಗ್ರಾಹಕರ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಅವರ ಉದ್ದೇಶವಾಗಿತ್ತು.

ಪ್ರಬ್ಜಿತ್ ಸಿಂಗ್ ಅವರ ಈ ನಿರ್ಧಾರವು ಹಲವರನ್ನು ಪ್ರಭಾವಿತಗೊಳಿಸಿದೆ, ಸಾಮಾನ್ಯವಾಗಿ ದೊಡ್ಡ ನಿಗಮಗಳ ಅತ್ಯುನ್ನತ ಸ್ಥಾನಗಳಲ್ಲಿರುವವರು ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವುದು ಅತಿ ವಿರಳ. ಈ ಕಾರ್ಯಾಚರೆಣೆ ಮೂಲಕ ನೆಲಮಟ್ಟದಲ್ಲಿ ಇರುವ ಸಮಸ್ಯೆಗಳ್ನು ಅರ್ಥಮಾಡಿಕೊಳ್ಳಬಹುದು. ಇನ್ನು ಪ್ರಬ್ಜಿತ್ ಸಿಂಗ್ ಗ್ರಾಹಕರಿಗಾಗಿ ತೆಗೆದುಕೊಂಡಿರುವ ಈ ವಿಭಿನ್ನ ನಿರ್ಧಾರ ಪ್ರಶಂಸೆಗೆ ಪಾತ್ರವಾಗಿದೆ.

ಪ್ರಬ್ಜಿತ್ ಸಿಂಗ್ ಅವರು ಉಬರ್ ಇಂಡಿಯಾದ ದೈನಂದಿನ 'ಕ್ಯಾಬ್' ಎಂದು ನೋಂದಾಯಿಸಲಾದ ಮಾರುತಿ ಸುಜುಕಿ ಡಿಸೈರ್‌ನಲ್ಲಿ, ದೆಹಲಿ ಮತ್ತು ಗುರ್ಗಾಂವ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಾಲಕರಾಗಿ ಒಂದು ದಿನ ಸಂಚರಿಸಿದ್ದಾರೆ. ಇದಕ್ಕಾಗಿ ಉತ್ತಮ ಚಾಲಕರ ನಡವಳಿಕೆಗಳನ್ನು ಅಭ್ಯಸಿಸಿ ಗ್ರಾಹಕರೊಂದಿಗೆ ಉತ್ತಮ ವ್ಯವಹಾರವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಹಕರು ಮಾಡಿದ ಬುಕ್ಕಿಂಗ್ ಅನ್ನು ಒಪ್ಪಿಕೊಂಡ ಪ್ರಬ್ಜಿತ್ ಸಿಂಗ್ ನೇರವಾಗಿ ಅವರ ಸ್ಥಳಕ್ಕೆ ಹೋಗಿ, ಅವರ ಸ್ಥಳವನ್ನು ತಲುಪಿದ ನಂತರ, ಪ್ರಬ್ಜಿತ್ ಸಿಂಗ್ ತಮ್ಮನ್ನು ಉಬರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಈ ವೇಳೆ ಪ್ರಬ್ಜಿತ್ ಅವರನ್ನು ಗುರುತುಹಿಡಿದ ಹಲವರು ಪ್ರಯಾಣಿಕರು ಅಚ್ಚರಿಗೊಂಡಿದ್ದಾರೆ.

ಕೆಲವು ಪ್ರಯಾಣಿಕರು ಈ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿದ್ದಾರೆ. ಇನ್ನೂ ಕೆಲವರು ಡ್ರೈವರ್ ಪ್ರಬ್ಜಿತ್ ಸಿಂಗ್ ಎಂದು ಹೇಳುತ್ತಿರುವುದು ನಿಜವೇ? ಎಂದು ಗೂಗಲ್ ಸಹಾಯದಿಂದ ಕ್ರಾಸ್ ಚೆಕ್ ಮಾಡಿಕೊಂಡಿದ್ದಾರೆ. ಬಳಿಕ ಪ್ರಬ್ಜಿತ್ ಸಿಂಗ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಪ್ರಬ್ಜಿತ್ ಸಿಂಗ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಮಹಾಪೂರವೇ ಬರುತ್ತಿದೆ.

ತಳಮಟ್ಟದಲ್ಲಿ ಗ್ರಾಹಕರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಕಂಪನಿಗಳ ಉನ್ನತ ವ್ಯಕ್ತಿಗಳು ಏನೆಲ್ಲಾ ಮಾಡಬಹುದು ಎಂಬುದನ್ನು ಪ್ರಬ್ಜಿತ್ ಸಿಂಗ್ ಅವರು ತೋರಿಸಿಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಹೊಗಳುತ್ತಿದ್ದಾರೆ. ಅಲ್ಲದೇ ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಬ್ಜಿತ್ ಸಿಂಗ್ ಅವರು ತಮ್ಮ ಹುದ್ದೆಯ ಹೊರತಾಗಿಯೂ ಕಣಕ್ಕೆ ಇಳಿದಿರುವುದು ನಿಜವಾಗಿಯೂ ಆಶ್ಚರ್ಯಕರ ಮತ್ತು ಅಪರೂಪದ ಘಟನೆ. ಪ್ರಬ್ಜಿತ್ ಸಿಂಗ್ ಮಾತ್ರವಲ್ಲ, ಉಬರ್ ಇಂಡಿಯಾ ಕೂಡ ಈ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಗಳಿಸಿದೆ ಎಂಬುದು ಗಮನಾರ್ಹ.

ಉಬರ್ ಪ್ರಸ್ತುತ ಭಾರತದ ವಿವಿಧ ನಗರಗಳಲ್ಲಿ ತನ್ನ ಸೇವೆಗಳನ್ನು ಒದಗಿಸುತ್ತಿದೆ. ಇಂತಹ ಕ್ರಮಗಳಿಂದ ಉಬರ್ ಕ್ಯಾಬ್‌ಗಳನ್ನು ಬಳಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುವ ಅನುಭವವು ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಬ್ಜಿತ್ ಸಿಂಗ್‌ಗೆ ಸಹಕರಿಸಲಿದೆ ಎಂದು ಹೇಳಬಹುದು.

ಇನ್ನು ಉಬರ್ ಸಂಸ್ಥೆಯು ಭಾರತದಲ್ಲಿ ಬೋಟ್ ಸರ್ವಿಸ್ ಕೂಡ ನೀಡುತ್ತಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪ್ ಆಧಾರಿತ ಬೋಟ್‌ಗಳ ಸೇವೆಗಳು ಇವೆ. ಕ್ಯಾಬ್ ಬುಕ್ ಮಾಡುವ ರೀತಿಯಲ್ಲೇ ಉಬರ್ ಬೋಟ್ ಸೇವೆಗಳಿಗಳಿಗೂ ಆ್ಯಪ್ ಮೂಲಕವೇ ಬುಕ್ ಮಾಡಬಹುದಾಗಿದ್ದು, ಮುಂಬೈನ ಗೇಟ್ ವೇ ಇಂಡಿಯಾದಿಂದ ಎಲಿಪಾಂಟ್ ಐಲ್ಯಾಂಡ್ ಹಾಗೂ ಗೇಟ್ ವೇ ಇಂಡಿಯಾದಿಂದ ಮಂದ್ವಾ ಜೆಟ್ಟಿ ರೋಡ್ ಪಾಯಿಂಟ್ ತನಕ ಬೋಟ್ ಸೇವೆಗಳು ಲಭ್ಯವಿದೆ.

ಬೋಟಿಂಗ್ ಸೇವಗಳೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಭದ್ರತೆ ಒದಗಿಸಿರುವ ಉಬರ್ ಸಂಸ್ಥೆಯು, ಪ್ರಯಾಣಿಕರಿಗೆ ಲೈಫ್ ಜಾಕೇಟ್, ತುರ್ತು ಕರೆ ಸೌಲಭ್ಯ, ಸುರಕ್ಷಾ ಕ್ರಮಗಳ ಮಾಹಿತಿ ಪಟ್ಟಿ ಮತ್ತು ಅಗ್ನಿ ಅವಘಡಗಳಿಂದ ತಪ್ಪಿಸಿಕೊಳ್ಳಲು ಹಲವು ಆಧುನಿಕ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.