ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಜನಪ್ರಿಯ ಕ್ಯಾಬ್ ಸೇವಾ ಕಂಪನಿಯಾದ ಉಬರ್ ತನ್ನ ಗ್ರಾಹಕರನ್ನು ಕೋವಿಡ್ 19ನಿಂದ ರಕ್ಷಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಉಬರ್ ಕಂಪನಿಯು ಕೋವಿಡ್ 19 ಬಗ್ಗೆ ತನ್ನ ಪಾಲುದಾರರಿಗೆ ಜಾಗೃತಿ ಮೂಡಿಸುತ್ತಿದೆ.

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ತಮ್ಮ ವಾಹನಗಳನ್ನು ಉಬರ್ ಅಡಿಯಲ್ಲಿ ಸೇವೆಗೆ ನೀಡುವ ಚಾಲಕರಿಗೆ ಕರೋನಾ ವೈರಸ್ ಹರಡದಂತೆ ತಡೆಯುವುದು ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕೋವಿಡ್ 19 ಹರಡಲು ಶುರು ಮಾಡಿದ ದಿನದಿಂದ ಉಬರ್ ಈ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಇದರ ಜೊತೆಗೆ ಕರೋನಾ ವೈರಸ್ ಹರಡುವುದನ್ನು ತಡೆಯಲು ತನ್ನ ಕ್ಯಾಬ್ ಗಳಲ್ಲಿ ಪ್ರೊಟೆಕ್ಟಿವ್ ಶೀಲ್ಡ್ ಗಳನ್ನು ಅಳವಡಿಸಿದೆ.

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಕರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಬರ್ ಕಂಪನಿಯು ಹೊಸ ಕ್ರಮಕ್ಕೆ ಮುಂದಾಗಿದೆ. ಉಬರ್ ಕ್ಯಾಬ್ ಗಳಲ್ಲಿ ಪ್ರಯಾಣ ಬೆಳೆಸುವ ಮುನ್ನ ಎಲ್ಲಾ ಗ್ರಾಹಕರು ಫೇಸ್ ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಲು ಹೊಸ ಯೋಜನೆಯನ್ನು ಆರಂಭಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಉಬರ್ ಕ್ಯಾಬ್ ಬಳಸಲು ಬಯಸುವವರು ತಮ್ಮ ಹಿಂದಿನ ಪ್ರಯಾಣದಲ್ಲಿ ಫೇಸ್ ಮಾಸ್ಕ್ ಧರಿಸಿರುವ ಬಗ್ಗೆ ದೃಢೀಕರಿಸಬೇಕು. ಮೊದಲ ಬಾರಿಗೆ ಪ್ರಯಾಣಿಸುತ್ತಿರುವವರು ಫೇಸ್ ಮಾಸ್ಕ್ ಧರಿಸಿರುವ ಬಗ್ಗೆ ಸೆಲ್ಫಿ ತೆಗೆದು ದೃಢೀಕರಿಸಬೇಕು.

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಇದರಿಂದಾಗಿ ಉಬರ್ ಗ್ರಾಹಕರು ಮುಂದಿನ ಪ್ರಯಾಣವನ್ನು ಯಾವುದೇ ತೊಂದರೆಗಳಿಲ್ಲದೇ ಕೈಗೊಳ್ಳಬಹುದು ಎಂದು ಉಬರ್ ಹೇಳಿದೆ. ಉಬರ್ ಕಂಪನಿಯು ಅಭಿವೃದ್ಧಿ ಪಡಿಸಿರುವ ಸಾಫ್ಟ್‌ವೇರ್ ಮೂಲಕ ಸೆಲ್ಫಿ ತೆಗೆದು ಮುಂದಿನ ಸವಾರಿಗಾಗಿ ಉಬರ್ ಅಪ್ಲಿಕೇಶನ್-ಬಿಲ್ ಅನ್ನು ಅಪ್ ಡೇಟ್ ಮಾಡಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಉಬರ್ ಈ ಹೊಸ ಯೋಜನೆಯನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಉಬರ್ ಕಂಪನಿಯ ಪಾಲುದಾರರು ದೂರು ನೀಡಿದ ಹಿನ್ನೆಲೆಯಲ್ಲಿ ಉಬರ್ ಕಂಪನಿಯು ಈ ಕ್ರಮಕ್ಕೆ ಮುಂದಾಗಿದೆ. ತನ್ನ ಗ್ರಾಹಕರ ಸುರಕ್ಷತೆಗಾಗಿ ಕಂಪನಿಯು ಈ ಯೋಜನೆಯನ್ನು ಜಾರಿಗೆ ತಂದಿದೆ.

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಹೆಚ್ಚಿನ ಸಂಖ್ಯೆಯ ಗ್ರಾಹಕರು ಫೇಸ್ ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಫೇಸ್ ಮಾಸ್ಕ್ ಧರಿಸದೇ ಇರುವುದು ಉಬರ್‌ನ ಪಾಲುದಾರರಿಗೆ ಮಾತ್ರವಲ್ಲದೇ ಗ್ರಾಹಕರಿಗೂ ಸಂಕಷ್ಟವನ್ನು ತಂದೊಡ್ಡಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಈ ಹಿಂದೆ ಪ್ರತಿ ಟ್ರಿಪ್ ಗೂ ಮುನ್ನ ಫೇಸ್ ಮಾಸ್ಕ್ ಧರಿಸಿ ಸೆಲ್ಫಿ ತೆಗೆದುಕೊಳ್ಳುವಂತೆ ತನ್ನ ಪಾಲುದಾರರಿಗೆ ತಿಳಿಸಲಾಗಿತ್ತು. ಅದರನ್ವಯ ಇದುವರೆಗೂ 17.44 ಮಿಲಿಯನ್ ಚಾಲಕರು ತಮ್ಮ ಸೆಲ್ಫಿಗಳನ್ನು ಶೇರ್ ಮಾಡಿದ್ದಾರೆ.

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಗ್ರಾಹಕರು ಸಹ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಈ ಸೆಲ್ಫಿ ಯೋಜನೆಗೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಉಬರ್ ಕ್ಯಾಬ್ ಗಳಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರಿಗೂ ಸುರಕ್ಷತೆಯನ್ನು ಒದಗಿಸಿದಂತಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪ್ರಯಾಣಕ್ಕೂ ಮುನ್ನ ಸೆಲ್ಫಿ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ ಜನಪ್ರಿಯ ಕ್ಯಾಬ್ ಕಂಪನಿ

ಉಬರ್ ಕಂಪನಿಯು ಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಸಾವಿರಾರು ಎಲೆಕ್ಟ್ರಿಕ್ ವಾಹನಗಳನ್ನು ತನ್ನ ಸೇವೆಗೆ ಸೇರ್ಪಡೆಗೊಳಿಸಿಕೊಂಡಿದೆ.

Most Read Articles

Kannada
English summary
Uber mandates selfie with face mask for its customers. Read in Kannada.
Story first published: Monday, October 19, 2020, 20:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X