ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಉಬರ್ ಕಂಪನಿಯು ಭಾರತದಲ್ಲಿ ತನ್ನ 1.50 ಲಕ್ಷ ಕ್ಯಾಬ್ ಚಾಲಕರಿಗಾಗಿ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ. ಆರು ತಿಂಗಳೊಳಗೆ ಕೋವಿಡ್ -19 ಲಸಿಕೆ ಪಡೆಯುವ ಚಾಲಕರಿಗೆ ಪ್ರತಿ ಲಸಿಕೆಗೆ ರೂ.400 ನೀಡುವುದಾಗಿ ಕಂಪನಿ ತಿಳಿಸಿದೆ.

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಏಪ್ರಿಲ್ 30 ಅಥವಾ ಅದಕ್ಕೂ ಮೊದಲು ಲಸಿಕೆ ತೆಗೆದುಕೊಳ್ಳುವ ಚಾಲಕರು ಸಹ ಈ ಹಣ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ. ಲಸಿಕೆ ಅಭಿಯಾನಕ್ಕಾಗಿ ಉಬರ್ ಕಂಪನಿಯು ರೂ.18.5 ಕೋಟಿ ಮೀಸಲಿಟ್ಟಿದೆ. ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾಮೂಹಿಕ ಲಸಿಕೆ ಪಡೆಯುವುದು ಮುಖ್ಯವಾಗಿದೆ.

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಶೀಘ್ರ ಕರೋನಾ ಲಸಿಕೆ ಪಡೆಯುವಂತೆ ಕ್ಯಾಬ್ ಪಾಲುದಾರರನ್ನು ಕೋರಲಾಗಿದೆ. ಚಾಲಕರು, ಪಾಲುದಾರರನ್ನು ಸಂಪರ್ಕಿಸಿ ಲಸಿಕೆ ಪಡೆಯುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಆರೋಗ್ಯ ಸಂಬಂಧಿತ ಸೇವೆಗಳನ್ನು ಪಡೆಯುವ ಗ್ರಾಹಕರಿಗೆ ಉಬರ್ ಕಂಪನಿಯು ರೂ.10 ಕೋಟಿಗಳ ಫ್ರೀ ರೈಡ್ ಒದಗಿಸಿತು. ಕರೋನಾ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಉಬರ್ ಕಂಪನಿಯು ತನ್ನ ಚಾಲಕ ಪಾಲುದಾರರಿಗೆ 9,000 ಉಚಿತ ವೈದ್ಯಕೀಯ ಸಮಾಲೋಚನೆಗಳನ್ನು ಒದಗಿಸಿದೆ.

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಲಸಿಕೆ ಹಾಕಿಸಿಕೊಳ್ಳುವ ಗ್ರಾಹಕರಿಗೆ ಉಬರ್ ಕಂಪನಿಯು ಉಚಿತ ಸವಾರಿಗಳನ್ನು ನೀಡುತ್ತಿದೆ. ಕರೋನಾ ಲಸಿಕೆ ಪಡೆಯುವ ಗ್ರಾಹಕರಿಗೆ ದೆಹಲಿಯಲ್ಲಿ ಉಚಿತ ಸವಾರಿಯನ್ನು ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಕಂಪನಿಯು ದೆಹಲಿಯಲ್ಲಿ ರೂ.1.5 ಕೋಟಿಗಳ ಉಚಿತ ಸವಾರಿ ನೀಡುತ್ತಿದೆ. ಅಂದರೆ ದೆಹಲಿಯಲ್ಲಿ ಕರೋನಾ ಲಸಿಕೆ ಪಡೆದು ಉಬರ್ ರೈಡ್ ಕಾಯ್ದಿರಿಸಿದರೆ, ಆ ಸವಾರಿಗೆ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ.

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ದೆಹಲಿ ಸರ್ಕಾರಕ್ಕೆ ಫ್ರೀ ರೈಡ್ ಪ್ಯಾಕೇಜ್ ನೀಡುವುದಾಗಿ ಕಂಪನಿ ಮಾಹಿತಿ ನೀಡಿದೆ. ಈ ಹಿಂದೆ ಉಬರ್ ಕಂಪನಿಯು ಎನ್‌ಜಿಒ ಹಾಗೂ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಗೂ ಬೆಂಬಲ ನೀಡಿತ್ತು.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ದೆಹಲಿ ಹೊರತಾಗಿ ಉಬರ್ ಈ ಸೌಲಭ್ಯವನ್ನು ಇತರ 34 ನಗರಗಳಲ್ಲಿ ನೀಡಲಿದೆ. ಇದರ ಮೂಲಕ ರೂ.10 ಕೋಟಿಗಳ ಉಚಿತ ಸವಾರಿ ನೀಡುವುದಾಗಿ ಉಬರ್ ಘೋಷಿಸಿದೆ. ಲಸಿಕೆ ಪಡೆಯಲು ಅರ್ಹರಾದವರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಲಸಿಕೆ ಪಡೆಯಲು ಹೊರಡುವವರು ಪ್ರೊಮೊ ಕೋಡ್ ಮೂಲಕ ಉಚಿತ ಸವಾರಿ ಮಾಡುವ ಸೌಲಭ್ಯವನ್ನು ಪಡೆಯಬಹುದು. ದೆಹಲಿ ಎನ್‌ಸಿಆರ್‌ನ ಎಲ್ಲಾ ಉಬರ್ಬಳಕೆದಾರರ ಅಪ್ಲಿಕೇಶನ್‌ನಲ್ಲಿ ಈ ವ್ಯಾಕ್ಸಿನೇಷನ್ ಪ್ರೊಮೊ ಕೋಡ್ ಲಭ್ಯವಿರಲಿದೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಪಿಕ್ ಅಪ್ ಅಂಡ್ ಡ್ರಾಪ್ ಸೌಲಭ್ಯ

ಉಬರ್, ಲಸಿಕೆ ಪಡೆಯುವವರಿಗೆ ಪಿಕ್ ಅಪ್ ಹಾಗೂ ಡ್ರಾಪ್ ಸೌಲಭ್ಯವನ್ನು ನೀಡುತ್ತಿದೆ. ಗ್ರಾಹಕರು ಅಪ್ಲಿಕೇಶನ್‌ನಲ್ಲಿ ಪ್ರೊಮೊ ಕೋಡ್ ಸೇರಿಸಿದ ನಂತರ ಲಸಿಕಾ ಕೇಂದ್ರಕ್ಕೆ ತೆರಳಬಹುದು.

ಲಸಿಕೆ ಅಭಿಯಾನದ ಮೂಲಕ ಚಾಲಕರಿಗೆ ನೆರವು ನೀಡಲಿದೆ ಉಬರ್

ಗ್ರಾಹಕರು ಈ ಕೋಡ್ ಬಳಸಿ ಯಾವುದೇ ಖಾಸಗಿ ಅಥವಾ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಹೋಗಬಹುದು. ಲಸಿಕಾ ಕೇಂದ್ರದಿಂದ ಹಿಂದಿರುಗುವಾಗಲೂ ಸಹ ಈ ಪ್ರೊಮೊ ಕೋಡ್ ಅನ್ವಯವಾಗಲಿದೆ.

Most Read Articles

Kannada
English summary
Uber offers cash incentives for driver partners through vaccination drive. Read in Kannada.
Story first published: Tuesday, May 4, 2021, 17:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X