ಉಡುಪಿ: ವಿಧಿ ನೀನೆಷ್ಟು ಕ್ರೂರಿ, 1 ಸೆಕೆಂಡ್ ಸಮಯವಿದ್ರು ಬೈಕ್ ಸವಾರ ಬದುಕುತ್ತಿದ್ದ.. ಮನಕಲಕುವ ವಿಡಿಯೋ
ಜೀವನವೆಂದರೇ ಹಾಗೇ ಅಲ್ವಾ.. ಸಾವು ಯಾರಿಗೆ, ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು, ತಮ್ಮ ತಪ್ಪೇ ಇಲ್ಲದಿದ್ದರೂ ಪ್ರಕೃತಿಯ ವಿಪರ್ಯಾಸದಿಂದ ಪ್ರಾಣವನ್ನೇ ಕಳೆದುಕೊಂಡು ಬಿಡುತ್ತಾರೆ. ಸದ್ಯ, ಅದೇ ರೀತಿಯ ಘಟನೆ ಉಡುಪಿಯಲ್ಲಿ ನಡೆದಿದ್ದು, ಮನಕಲುಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಅದರಲ್ಲೂ ಉಡುಪಿಯಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ನಿನ್ನೆ ರಾತ್ರಿ ಧಾರಾಕಾರ ಮಳೆಗೆ ಜಿಲ್ಲೆಯ ಕಾರ್ಕಳದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ರಾತ್ರಿ 9 ಗಂಟೆ ಸುಮಾರಿಗೆ ಬೆಳ್ಮಣ್ ಬಸ್ ನಿಲ್ದಾಣ ಸಮೀಪ ಬೃಹತ್ ಆಲದ ಮರದ ಕೊಂಬೆಯೊಂದು ಬಿದ್ದು, ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿವೆ.

ಮರ ಬಿದ್ದ ಕೊಡಲೇ ಬೈಕ್ ಸವಾರ ಅದರಡಿ ಸಿಲುಕಿಕೊಂಡಿದ್ದಾನೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಆತನ ಸಹಾಯಕ್ಕೆ ಧಾವಿಸಿದ್ದು, ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಸಾನನಪ್ಪಿದ್ದಾನೆ. ಮೃತನನ್ನು ಪ್ರವೀಣ್ ಆಚಾರ್ಯ ಎಂದು ಗುರುತಿಸಲಾಗಿದೆ. ಈ ಭಯಾನಕ ವಿಡಿಯೋವನ್ನು ನೋಡಿದರೆ ಎಂತಹವರಿಗೂ ಒಮ್ಮೆ ಕರುಳು ಕಿತ್ತು ಬರುತ್ತದೆ.
ಈ ಘಟನೆ ಬಳಿಕ, ಕೆಲವು ಗಂಟೆಗಳ ಕಾಲ ಕಾರ್ಕಳ ಹಾಗೂ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಮರವನ್ನು ತೆರೆವುಗೊಳಿಸಿ, ಇತರೆ ವಾಹನಗಳು ಓಡಾಡಲು ರಸ್ತೆಯನ್ನು ಸುಗಮಗೊಳಿಸಿದ್ದಾರೆ. ಘಟನೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದಿವರಿಸಿದ್ದಾರೆ.
Tree fall incident in Belmannu Karkala caught on CCTV camera. A person has died in this incident#Udupi #Rain @XpressBengaluru pic.twitter.com/EXONcxxK0T
— Prakash (@prakash_TNIE) July 7, 2023
ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರು ಒಂದಷ್ಟು ಮುನ್ನೆಚೆರಿಕೆ ತೆಗೆದುಕೊಂಡಿರೇ ಅಪಘಾತವಾಗುವುದನ್ನು ತಪ್ಪಿಸಬಹುದು. ಇಂಧನ ಚಾಲಿತ ವೆಹಿಕಲ್ ಗಳ ಆಯಿಲ್ ರಸ್ತೆಯಲ್ಲಿ ಬಿದ್ದು, ಬಿಸಿಲಿಗೆ ಗಟ್ಟಿಯಾಗಿರುತ್ತದೆ. ಮಳೆಗಾಲದಲ್ಲಿ ಅದು ದ್ರವ ರೂಪಕ್ಕೆ ತಿರುಗಿ, ಚದುರುತ್ತದೆ. ಅಂತಹ ರಸ್ತೆಯಲ್ಲಿ ವೇಗವಾಗಿ ಹೊಂದ್ರೆ, ಸ್ಕಿಡ್ ಆಗಿ ಬೀಳಬಹುದು. ಆದ್ದರಿಂದ ನಿಧಾನವಾಗಿ ವಾಹನ ಚಲಾಯಿಸಿರಿ.
ಮಳೆ ಬರುವಾಗ ಪಕ್ಕದಲ್ಲಿ ಚಲಿಸುವ ವಾಹನಗಳೊಂದಿಗೆ ಸೂಕ್ತ ಅಂತರವಿರಲಿ. ರಸ್ತೆಗಳು ಒದ್ದೆಯಾಗಿರುತ್ತವೆ. ಅಂತಹ ಸಂದರ್ಭದಲ್ಲಿ ಬ್ರೇಕ್ ಹಾಕಿದ್ದಾಗ ನಿಮ್ಮ ಬೈಕ್ ಅಥವಾ ಸ್ಕೂಟರ್ ಸ್ಕಿಡ್ ಆಗಿ ಬೇರೆ ವಾಹನಗಳಿಗೆ ಡಿಕ್ಕಿಯಾಗಬಹುದು. ಮಳೆ ಬಂದಾಗ ಕತ್ತಲೆ ರೀತಿಯಲ್ಲಿ ವಾತಾವರಣವಿರುತ್ತದೆ. ಇಂತಹ ವೇಳೆ, ತುಂಬಾ ಎಚ್ಚರಿಕೆ ಅಗತ್ಯ. ಜೊತೆಗೆ ಗುಂಡಿಗಳ ಬಗ್ಗೆಯು ಜಾಗೃತೆ ಇರಲಿ.
ಕಾರ್ಕಳದಲ್ಲಿ ನಡೆಡಿರುವ ಘಟನೆ ನಿಜಕ್ಕೂ ದುರದೃಷ್ಟಕರ. ಕೇವಲ ಒಂದು ಸೆಕೆಂಡು ಆಚೆ, ಈಚೆ ಆಗಿದ್ದರೂ ಆ ಬೈಕ್ ಸವಾರನ ಪ್ರಾಣ ಉಳಿಯುತ್ತಿತ್ತು. ಮಳೆಗಾಲದ ಸಂದರ್ಭದಲ್ಲಿ ಬೆಳಕಿರುವ ಅವಧಿಯಲ್ಲೇ ಕತ್ತಲು ಅವರಿಸಿಕೊಂಡು, ಮುಂಬರುವ ವಾಹನಗಳೇ ಕಾಣುವುದಿಲ್ಲ. ಇನ್ನೂ ರಾತ್ರಿ ಹೇಳಬೇಕೇ.. ಜೊತೆಗೆ ಮರಗಳ ಬೇರು ಕೂಡ ಸಡಿಲವಾಗಿ ಗಾಳಿ, ಮಳೆಗೆ ಬೀಳುವುದು ಸಾಮಾನ್ಯ. ಈ ಕಾರಣಕ್ಕೆ ಆದಷ್ಟು ಗೋಚರತೆ ಇರುವಾಗಲೇ ವಾಹನಗಳನ್ನು ಓಡಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications