Ulta Scooter: ಈತನ ಅದ್ಬುತ ಪ್ರತಿಭೆಗೆ ಮೆಚ್ಚಲೇಬೆಕು, ಆದ್ರೆ ಪ್ರಯೋಜನವೇ ಇಲ್ಲದಂತಾಗಿದೆ!
ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಅನ್ನು ಅಸಾಂಪ್ರದಾಯಿಕ ರೀತಿಯಲ್ಲಿ ಮಾರ್ಪಾಡು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಸ್ಕೂಟರ್ ಅನ್ನು ಹಿಮ್ಮುಖವಾಗಿ ಓಡಿಸುವಂತೆ ಮಾಡಿಫೈಗೊಳಿಸಲಾಗಿದೆ, ಇದಕ್ಕಾಗಿ ವ್ಯಕ್ತಿ ತನ್ನ ಸ್ಕೂಟಿಯ ಸಂಪೂರ್ಣ ಭೌತಿಕ ಡೈನಾಮಿಕ್ಸ್ ಅನ್ನು ಬದಲಾಯಿಸಿದ್ದು, ನೋಡುಗರಿಗೆ ವಿಚಿತ್ರ ಅನುಭವ ನೀಡುತ್ತಿದೆ.
ವಾಹನ ಮಾರ್ಪಾಡುಗಳನ್ನು ಮಾಡುವುದು ತಪ್ಪಲ್ಲ, ತಮ್ಮಿಷ್ಟದಂತೆ ವಾಹನಗಳನ್ನು ಮಾಡಿಫೈಗೊಳಿಸಬಹುದು ಆದರೆ ನಿಯಮಗಳಿಗೆ ಒಳಪಟ್ಟಿರಬೇಕು. ಒಂದು ವೇಳೆ ನಿಯಮಗಳನ್ನು ಮೀರಿದರು ಸಾರ್ವಜನಿಕ ರಸ್ತೆಗಳಲ್ಲಿ ಅವುಗಳನ್ನು ಓಡಿಸುವಂತಿಲ್ಲ. ತಮ್ಮ ಖಾಸಗಿ ಸ್ಥಳಗಳಲ್ಲಿ ಅವನ್ನು ಬಳಸಿಕೊಳ್ಳಬಹುದು. ಈಗ ನಾವು ಹೇಳಲು ಹೊರಟಿರುವ ಸ್ಕೂಟರ್ ಕೂಡ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸುವಂತಿಲ್ಲ. ಏಕೆಂದರೆ ಈ ಸ್ಕೂಟರ್‌ನಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು.

ಉಲ್ಟಾ ಸ್ಕೂಟರ್ (Ulta Scooter) : ಸ್ಕೂಟರ್ ಸೀಟ್ ಬದಲಾಯಿಸಿ ಹೆಚ್ಚಿನ ಫೀಚರ್‌ಗಳನ್ನು ನೀಡುವ ಬದಲಿಗೆ, ಇಂಡೋನೇಷ್ಯಾದ ಅ'ರಾಫ್ ಅಬ್ದುರಹ್ಮಾನ್ ಎಂಬಾತ ತನ್ನ ಸ್ಕೂಟರ್ ಸಂಪೂರ್ಣ ವಿನ್ಯಾಸವನ್ನೇ ಬದಲಾಯಿಸಿದ್ದಾರೆ. ಅಲ್ಲಿನ ರಸ್ತೆ ಸಾರಿಗೆ ನಿಯಮಗಳು ಹೇಗಿವೆ ಎಂಬುದು ನಮಗೆ ತಿಳಿದಿಲ್ಲ. ಆದ್ರೆ ಭಾರತದಲ್ಲಿ ಇಂತಹ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸುವುದಿಲ್ಲ.
ಇದನ್ನು ಕೇವಲ ಒಂದು ವಿಶಿಷ್ಟ್ ಮಾಡಿಫೈ ವಾಹನದಂತೆ ನೋಡುವುದಾದರೆ, ಮುಂಭಾಗದ ಸೀಟಿನ ಕೆಳಗೆ ವಿರುದ್ಧ ದಿಕ್ಕಿನಲ್ಲಿ ಇರಿಸಲಾಗಿರುವ ಸ್ಕೂಟಿ ಹ್ಯಾಂಡಲ್‌ನ ಸ್ಥಾನವು ಹೆಚ್ಚು ಗಮನ ಸೆಳೆಯುವ ಅಂಶವಾಗಿದೆ. ವೀಡಿಯೋದಲ್ಲಿ, ವ್ಯಕ್ತಿಯು ಸೀಟ್ ಮತ್ತು ಹ್ಯಾಂಡಲ್ ನಡುವಿನ ಅಂತರದಲ್ಲಿ ಕುಳಿತಿರುವುದನ್ನು ನೋಡಬಹುದು. ಆ ಹ್ಯಾಂಡಲ್ ಕೂಡ ಸೀಟಿನ ಕೆಳಗೆ ಇರಿಸಲಾಗಿದೆ.

ಹಿಂಬದಿ ಚಕ್ರಕ್ಕೆ ಹ್ಯಾಂಡಲ್ ಬಾರ್ ಜೋಡಣೆ ಮಾಡಿ ಸ್ಕೂಟರ್ ಅನ್ನು ಓಡಿಸುತ್ತಿದ್ದಾನೆ. ಇದು ವಿಚಿತ್ರವಾಗಿದೆ ಎಂದು ನೋಡುತ್ತಾ ಇತರ ವಾಹನ ಸವಾರರು ಗೊಂದಲಕ್ಕೊಳಗಾಗಿ ಅಪಘಾತಗಳು ನಡೆಯುವ ಸಂಭವಗಳೇ ಹೆಚ್ಚು. ವಿಡಿಯೋದಲ್ಲಿ ನಾವು ನೊಡುವುದಾದ್ರೆ ಬಿಡುವಿಲ್ಲದ ರಸ್ತೆಯಲ್ಲಿ ಆತ ಓಡಿಸುತ್ತಿದ್ದಾನೆ. ನೋಡುಗರು ಈ ವಿಲಕ್ಷಣ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದು, ಸ್ವಲ್ಪ ಯಾಮಾರಿದ್ರು ಅಪಘಾತ ಸಂಭವಿಸಬಹುದು.
ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊಗೆ ಪ್ರತಿಕ್ರಿಯಿಸಿದ್ದು, ಕೆಲವರು ಅದನ್ನು ಪ್ರಶಂಸಿಸಿದರೆ, ಇನ್ನೂ ಕೆಲವರು ಸವಾರನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಲ್ಲಾ ಪ್ರತಿಕ್ರಿಯೆಗಳ ನಡುವೆ, ಜನನಿಬಿಡ ರಸ್ತೆಗಳಲ್ಲಿ ಇತರ ಸವಾರರಿಗೆ ತೊಂದರೆ ಕೊಡುವುದನ್ನು ತಪ್ಪಿಸಲು ಇಂತಹ ಸಾಹಸಗಳಿಗೆ ಪ್ರಯತ್ನಿಸುವುದರ ವಿರುದ್ಧ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಈ ಮಾಡಿಫೈ ಸ್ಕೂಟರ್ ಅನ್ನು ಕೇವಲ ತಮ್ಮ ಖಾಸಗಿ ಸ್ಥಳಗಳಲ್ಲಿ ಓಡಿಸುವುದು ಸೂಕ್ತವೆಂಬುದು ನಮ್ಮ ಅನಿಸಿಕೆ. ಇಂತಹ ಮಾರ್ಪಾಡು ಕೆಲಸಕ್ಕೆ ಆತನನ್ನು ಮೆಚ್ಚಲೇಬೇಕು, ಅಲ್ಲದೇ ಇದು ನೋಡುಗರ ಗಮನಸೆಳೆಯುತ್ತಿದೆ ಎಂದರೆ ಆತನ ಪ್ರತಿಭೆಯನ್ನು ಗುರ್ತಿಸಬೇಕು. ಈ ಉಲ್ಟಾ ಸ್ಕೂಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications