ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಮುಂದಿನ ಆರು ತಿಂಗಳಲ್ಲಿ ಆಟೋ ಮೊಬೈಲ್ ಕಂಪನಿಗಳು 100% ನಷ್ಟು ಜೈವಿಕ ಇಂಧನದಲ್ಲಿ ಚಾಲನೆಯಾಗುವ ವಾಹನಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿರಾದ ಸಚಿವ ನಿತಿನ್ ಗಡ್ಕರಿ ಆಗಸ್ಟ್ 31 ರಂದು ಹೇಳಿಕೆ ನೀಡಿದ್ದಾರೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಸಚಿವ ನಿತಿನ್ ಗಡ್ಕರಿ ರವರು ಈ ಕ್ರಮದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಗ್ರಾಹಕರು ಈಗ ಒಂದು ಲೀಟರ್ ಪೆಟ್ರೋಲ್‌ಗೆ 110 ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ. ಆದರೆ ಒಂದು ಲೀಟರ್ ಬಯೋ ಎಥೆನಾಲ್'ಗೆ 65 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರಿಂದ ವಾಹನ ಸವಾರರಿಗೆ ಖಂಡಿತ ಅನುಕೂಲವಾಗಲಿದೆ ಎಂದು ಹೇಳಿದರು.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವ ನಿತಿನ್ ಗಡ್ಕರಿ, ಫ್ಲಕ್ಸ್ ಎಂಜಿನ್ ನಿಯಮಾವಳಿಗಳನ್ನು ಪಾಲಿಸುವ ವಾಹನಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಅವುಗಳನ್ನು ಕಡ್ಡಾಯಗೊಳಿಸುವುದನ್ನು ನಿರ್ಧರಿಸಲಾಗಿದೆ. ಇದರಿಂದ ಫ್ಲಕ್ಸ್ ಎಂಜಿನ್ ವಾಹನಗಳ ಬಳಕೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಸಚಿವ ನಿತಿನ್ ಗಡ್ಕರಿ ರವರ ಈ ಹೇಳಿಕೆಯನ್ನು ವಾಹನ ಸವಾರರು ಸ್ವಾಗತಿಸಿದ್ದಾರೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ವಿಶ್ವದ 3 ನೇ ಅತಿದೊಡ್ಡ ರಾಷ್ಟ್ರವಾಗಿದೆ. ಇದರಿಂದ ಭಾರತಕ್ಕೆ ವಿವಿಧ ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿವೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸುತ್ತಿದೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಎಥೆನಾಲ್ ಅನ್ನು ಕಬ್ಬು, ಆಲೂಗಡ್ಡೆ ಹಾಗೂ ಜೋಳದಿಂದ ತಯಾರಿಸಲಾಗುತ್ತದೆ. ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ಭಾರತೀಯ ರೈತರಿಗೂ ಅನುಕೂಲವಾಗುತ್ತದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ ರವರು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಮುಂದಿನ ಒಂದು ವರ್ಷದಲ್ಲಿ ಭಾರತೀಯ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಗಳಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಭಾರತವು ವಿಶ್ವದ ಮುಂಚೂಣಿಯ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಬೇಕೆಂದು ಬಯಸುತ್ತೇನೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಭಾರತವು ಎಲ್ಲಾ ರೀತಿಯ ಇಂಧನಗಳಲ್ಲಿ ಚಾಲನೆಯಲ್ಲಿರುವ ವಾಹನಗಳನ್ನು ಜಗತ್ತಿಗೆ ಒದಗಿಸಬೇಕು ಎಂದು ಅವರು ಹೇಳಿದ್ದಾರೆ. ಸಚಿವ ನಿತಿನ್ ಗಡ್ಕರಿ ಹೇಳಿರುವಂತೆ ಭಾರತೀಯ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಶೀಘ್ರದಲ್ಲಿಯೇ ಹೆಚ್ಚಳವಾಗುವುದನ್ನು ನಾವು ನಿರೀಕ್ಷಿಸಬಹುದು. ಈಗ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಕೆಲವು ದಿನಗಳ ಹಿಂದಷ್ಟೇ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಾದ Ola ಎಲೆಕ್ಟ್ರಿಕ್ ಸ್ಕೂಟರ್ ಹಾಗೂ Simple One ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಇನ್ನು Tata Motors ಕಂಪನಿಯು ತನ್ನ Tigor ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಮುಂಬರುವ ದಿನಗಳಲ್ಲಿ ಇನ್ನೂ ಹಲವು ಎಲೆಕ್ಟ್ರಿಕ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ . ಅವುಗಳಲ್ಲಿ Tata Altroz Electric, Mahindra XUV 300 ಎಲೆಕ್ಟ್ರಿಕ್ ಕಾರುಗಳು ಸೇರಿವೆ. MG ZS ಎಲೆಕ್ಟ್ರಿಕ್ ಕಾರಿನ ಹೊಸ ಮಾದರಿಯು ಸಣ್ಣ ಬ್ಯಾಟರಿಯನ್ನು ಹೊಂದಿದ್ದು ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು, ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಜೊತೆಗೆ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ನೀಡುತ್ತಿರುವ ಪ್ರೋತ್ಸಾಹವು ಸಹ ಕಾರಣವಾಗಿದೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಫೇಮ್ ಇಂಡಿಯಾ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತಿದೆ. ಇನ್ನು ದೆಹಲಿ, ಗುಜರಾತ್ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಗಳನ್ನು ಜಾರಿಗೊಳಿಸಿವೆ. ವಿವಿಧ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡುತ್ತಿವೆ.

ಬಯೋ ಫ್ಯೂಯಲ್ ವಾಹನ ಒದಗಿಸುವ ಮೂಲಕ ವಾಹನ ಸವಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

ಈ ಯೋಜನೆಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದರೆ ಪೆಟ್ರೋಲ್, ಡೀಸೆಲ್ ಆಮದು ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೆ ವಾಯು ಮಾಲಿನ್ಯ ಉಂಟಾಗುವುದನ್ನು ತಡೆಯಬಹುದು. ಸರ್ಕಾರಗಳು ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದು ಸಹ ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಾಗಲು ನೆರವಾಗಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government to mandate auto companies to offer bio fuel vehicles soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X