ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ರೋಬೋಟ್ ಕಾರು
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಮೊಬೈಲ್ ರೋಬೋಟಿಕ್ಸ್ ವಿಭಾಗವು (ಎಂಆರ್‌ಜಿ) ಕಾರುಗಳಿಗೆ ನೂತನ ಸ್ವಯಂಚಾಲಿತ ನೇವಿಗೇಷನ್ ಸಿಸ್ಟಂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಪ್ರಸ್ತುತ ವ್ಯವಸ್ಥೆಯನ್ನು ನಿಸ್ಸಾನ್ ಲೀಫ್ ಆವೃತ್ತಿಯಲ್ಲಿ ಆಳವಡಿಸಲಾಗಿದ್ದು, ಇದರ ನೆರವಿನಿಂದ ಸಾಮಾನ್ಯವಾಗಿ ಪ್ರಯಾಣಿಸುವ ಮಾರ್ಗಗಳಲ್ಲಿ ಇದರ ಡ್ರೈವಿಂಗ್ ಘಟಕಗಳು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸಲಿದೆ.
ಈ ಸ್ವಯಂಚಾಲಿತ ನೇವಿಗೇಷನ್ ಸಿಸ್ಟಂ ದರ ನಾಲ್ಕು ಲಕ್ಷ ರುಪಾಯಿಗಳ ಅಸುಪಾಸಿನಲ್ಲಿರಲಿದೆ. ಈ ಡ್ರೈವಿಂಗ್ ತಂತ್ರಗಾರಿಕೆಯು ಕಾರು ಚಾಲನೆಗೆ ನೆರವಾಗಲಿದೆ.
ಭವಿಷ್ಯದ ದೃಷ್ಟಿಕೋನದಲ್ಲಿ ಇಂತಹದೊಂದು ರೋಬೋಟ್ ಕಾರು ಅಭಿವೃದ್ಧಿಪಡಿಸಲಾಗಿದೆ. ಇದರಂತೆ 22 ಮಂದಿ ಎಂಆರ್‌ಜಿ ಸದಸ್ಯರು ಅವಿರತ ಪ್ರಯತ್ನದ ಮೂಲಕ ನಿಸ್ಸಾನ್ ಲೀಫ್ ಕಾರಿಗೆ ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಂ ಆಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪರಿಷ್ಕೃತ ನಿಸ್ಸಾನ್ ಲೀಫ್ ಕಾರಿನಲ್ಲಿ ಪ್ರಸ್ತುತ ಆಟೋಮ್ಯಾಟಡ್ ಡ್ರೈವಿಂಗ್ ಸಿಸ್ಟಂ ಆಳವಡಿಸಲಾಗಿದೆ. ಇದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಮತ್ತೊಂದು ಸಾಧನೆಯಾಗಿದೆ.

ಸ್ವಾಯತ್ತ ಗ್ರಹಿಕೆ ತಲಹದಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಪ್ರಸ್ತುತ ವ್ಯವಸ್ಥೆಯು ರಸ್ತೆಗಳನ್ನು ಮಾನಿಟರ್ ಮಾಡಲಿದೆ.

ಹಾಗಿದ್ದರೂ ಸ್ಯಾಟಲೈಟ್ ನೇವಿಗೇಷನ್ ಸೌಲಭ್ಯ ಲಭ್ಯವಿಲ್ಲದಿದ್ದುದರಿಂದ ಇದು ಜಿಪಿಎಸ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿಲ್ಲ.

ಮೂರು ಕಂಪ್ಯೂಟರ್‌ಗಳಿಂದ ಮಾಹಿತಿ ಸ್ವೀಕರಿಸುವ ಮೂಲಕ ಸ್ವಯಂಚಾಲಿತ ಡ್ರೈವಿಂಗ್ ಸಿಸ್ಟಂಗಳು ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಐ ಪ್ಯಾಡ್ ಸೇರಿದ್ದು, ಇದರ ಮೂಖಾಂತರ ಚಾಲಕನಿಗೆ ಬೇಕಾದ ಮಾರ್ಗದರ್ಶನ ರವಾನಿಸಲಿದೆ.

ಐಪ್ಯಾಡ್ ಅನ್ನು ಲೊ ಲೆವೆಲ್ ಕಂಟ್ರೋಲರ್ (ಎಲ್‌ಎಲ್‌ಸಿ) ಮಾನಿಟರ್ ಮಾಡಲಿದ್ದು, ಬೂಟ್‌ನಲ್ಲಿ ಲಗತ್ತಿಸಲಾಗಿರುವ ಮೈನ್ ವೆಹಿಕಲ್ ಕಂಪ್ಯೂಟರ್ (ಎಂವಿಸಿ) ಹೊರೆಯನ್ನು ನಿಭಾಯಿಸಲಿದೆ.

ಮೂರು ಕಂಪ್ಯೂಟರ್‌ಗಳು ರಸ್ತೆ ಪರಿಸ್ಥಿತಿಯನ್ನು ಅವಲೋಕಿಸುವಲ್ಲಿ ವಿಫಲವಾದ್ದಲ್ಲಿ ಕಾರಿನ ವೇಗ ತಕ್ಷಣ ನಿಧಾನವಾಗಿ ಆಫ್ ಆಗಲಿದೆ.

ಸುರಕ್ಷತೆಗೂ ರೋಬೋಟ್ ಕಾರು ಹೆಚ್ಚಿನ ಮಹತ್ವ ಕೊಡುತ್ತಿದ್ದು, ಯಾವುದೇ ಅಪಾಯಕಾರಿ ಪರಿಸ್ಥಿತಿ ಎದುರಾದ್ದಲ್ಲಿ ಕಾರು ತಕ್ಷಣ ನಿಲುಗಡೆಗೊಳ್ಳಲಿದೆ.

ಪಾದಚಾರಿಗಳು ಅಚಾನಕ್ ರಸ್ತೆ ಕ್ರಾಸ್ ಮಾಡುವ ಸಂದರ್ಭದಲ್ಲಿ ಕಾರು ನಿಲುಗಡೆಯಾಗಲಿದೆ. ಒಟ್ಟಿನಲ್ಲಿ ರೋಬೋಟ್ ಕಾರು ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ವೀಡಿಯೋ

Click it and Unblock the Notifications