'ಪರಿಸರ ರಾಮ'... ಅಯೋಧ್ಯೆಯಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳು ಸೇವೆಗೆ, ರೂ.250 ಪಾವತಿಸಿ ಓಡಾಡಿ

ಅಯೋಧ್ಯೆ (Ayodhya)ಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದ್ದು, ಜನವರಿ 22 ರಂದು 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸರ್ಕಾರ, ಅಯೋಧ್ಯೆಯಲ್ಲಿ ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.

ಮೊದಲ ಹಂತವಾಗಿ ಅಯೋಧ್ಯೆ - ಲಕ್ನೋ ನಡುವೆ ಇಂಟರ್‌ಸಿಟಿ ಪ್ರಯಾಣಕ್ಕಾಗಿ 15 ಎಲೆಕ್ಟ್ರಿಕ್ ಕಾರುಗಳನ್ನು ಟ್ಯಾಕ್ಸಿ ಸೇವೆಗೆ ನಿಯೋಜಿಸಲಾಗಿದೆ. ಶೀಘ್ರ ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿಯೂ ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳು ಯಾತ್ರಿಕರಿಗೆ ಲಭ್ಯವಿರುವಂತೆ ಮಾಡಲು ಇಲ್ಲಿನ ಆಡಳಿತ ನಿರ್ಧರಿಸಿದೆ. ಸೂರಜ್ ಕುಂಡ್, ಸರಯು ನದಿ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರೂ ಮೊಬೈಲ್ ಅಪ್ಲಿಕೇಶನ್‌ ಮೂಲಕವೇ ಈ ಕಾರುಗಳನ್ನು ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲು ಯೋಜಿಸಿದೆ.

ಪರಿಸರ ರಾಮ.. ಅಯೋಧ್ಯೆಯಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳು ಸೇವೆಗೆ, ರೂ.250 ಪಾವತಿಸಿ ಓಡಾಡಿ

ಅಯೋಧ್ಯೆ ರೈಲ್ವೆ ಸ್ಟೇಷನ್ (Ayodhya Railway station)ಗೆ ಆಗಮಿಸುವ ಯಾತ್ರಿಕರಿಗಾಗಿ ಈ ಎಲೆಕ್ಟ್ರಿಕ್ ಕಾರುಗಳು ಮೂಲಕ ಪ್ರಾಯೋಗಿಕ ಸೇವೆಯನ್ನು ಆರಂಭಿಸಲಾಗಿದೆ. ಪ್ರಯಾಣಿಕರು, 10 ಕಿಲೋಮೀಟರ್‌ಗಳಿಗೆ 250 ರೂಪಾಯಿ, 20 ಕಿಲೋಮೀಟರ್‌ಗಳಿಗೆ 400 ರೂಪಾಯಿ ಹಾಗೂ 12 ಗಂಟೆಗೆ 3000 ರೂಪಾಯಿ ಬಾಡಿಗೆಯನ್ನು ಪಾವತಿಬೇಕು. ಭಕ್ತರು ಸಹ ಎಲೆಕ್ಟ್ರಿಕ್ ಕಾರು ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ, ಅಯೋಧ್ಯೆಯಲ್ಲಿ ಯಾತ್ರಿಕರಿಗಾಗಿ ಟ್ಯಾಕ್ಸಿ ಸೇವೆಗೆ ಟಾಟಾ ಟಿಗೂರ್ ಇವಿ (Tata Tigor EV) ಬಳಕೆ ಮಾಡಲಾಗುತ್ತಿದೆ. ಈ ಇವಿ ಪರಿಚಯದ ಹೊರತಾಗಿ, ಕಳೆದ ದೀಪೋತ್ಸವದಿಂದ ಇಲ್ಲಿ ಇ-ಕಾರ್ಟ್ ಸೇವೆಯೂ ಲಭ್ಯವಿದೆ. 6 ಮಂದಿ ಪ್ರಯಾಣಿಸಬಹುದಾಗಿದ್ದು, ಹನುಮಾನ್ ಗರ್ಹಿ, ಶ್ರೀರಾಮ ಜನ್ಮಭೂಮಿ, ಸೇರಿದಂತೆ ಇತರೆ ಸ್ಥಳಗಳಿಗೆ ವಯಸ್ಸಾದ ಭಕ್ತರನ್ನು ಕರೆದುಕೊಂಡು ಹೋಗಲಾಗುತ್ತದೆ.

ಪರಿಸರ ರಾಮ.. ಅಯೋಧ್ಯೆಯಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳು ಸೇವೆಗೆ, ರೂ.250 ಪಾವತಿಸಿ ಓಡಾಡಿ

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಟಿಗೂರ್ ಇವಿ ವಾಣಿಜ್ಯ ಬಳಕೆಗೆ ಮಾತ್ರ ಖರೀದಿಗೆ ಲಭ್ಯವಿದ್ದು, ರೂ.12.49 ಲಕ್ಷದಿಂದ ರೂ.13.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸ್ಇ, ಎಕ್ಸ್‌ಝಡ್‌ ಪ್ಲಸ್ ಸೇರಿದಂತೆ 4 ರೂಪಾಂತರ, ಡೇಟೋನಾ ಗ್ರೇ, ಸಿಗ್ನೇಚರ್ ಟೀಲ್ ಬ್ಲೂ ಒಳಗೊಂಡಂತೆ 3 ಮೊನೊಟೊನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಟಾಟಾ ಟಿಗೂರ್ ಇವಿ, 26 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 75 PS ಗರಿಷ್ಠ ಪವರ್, 170 Nm ಪೀಕ್ ತಾರ್ಕ್ ಉತ್ಪಾದಿಸುತ್ತದೆ. ಈ ಕಾರು, ಸಂಪೂರ್ಣ ಚಾರ್ಜ್ ನಲ್ಲಿ 315 ಕಿಲೋಮೀಟರ್ (ARAI) ರೇಂಜ್ ನೀಡುತ್ತದೆ.

ಈ ಎಲೆಕ್ಟ್ರಿಕ್ ಕಾರು, ಸ್ಟ್ಯಾಂಡರ್ಡ್ ಚಾರ್ಜರ್ ಬಳಕೆಯಲ್ಲಿ ಶೇಕಡ 0 - 80% ಚಾರ್ಜ್ ಆಗಲು 8.5 ಗಂಟೆ ಬೇಕಾಗುತ್ತದೆ. 25 kW ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಕೇವಲ 60 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ವೈಶಿಷ್ಟ್ಯದ ವಿಚಾರವಾಗಿ ಮಾತನಾಡುವುದಾದರೆ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಟಾಟಾ ಟಿಗೂರ್ ಇವಿ ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS ( ಟೈರ್ ಪ್ರೆಶರ್ ಮ್ಯಾನಿಟರಿಂಗ್ ಸಿಸ್ಟಮ್), ಟೈರ್ ಪಂಕ್ಚರ್ ರಿಪೇರ್ ಕಿಟ್ ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 4, 2024, 15:16 [IST]
English summary
Up cm yogi adityanath government introduces tata tigor evs in ayodhya fare cost 250 rupees
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+