ಕಾನ್ಸ್‌ಟೇಬಲ್ ಮನೆನೋಡಿ ಬೆಚ್ಚಿಬಿದ್ದ ಅಧಿಕಾರಿಗಳು: 12 ರೂಮ್‌ನ 5 ಕೋಟಿಯ ಬಂಗಲೆ, Audi-BMW
ಸರ್ಕಾರದ ಕೆಲಸ ದೇವರ ಕೆಲಸ ಎಂಬುದು ಕೇವಲ ನಾಮಕಾವಸ್ತೆಗೆ ಅಷ್ಟೆ. ಈ ಮಾತು ಕೇವಲ ಮಾತಾಗಿಯೇ ಉಳಿದಿದೆ ಎಂಬುದು ಇಂದಿನ ರಾಜಕಾರಣಿಗಳನ್ನು ನೋಡಿದರೆ ತಿಳಿಯುತ್ತದೆ. ಹೀಗೆನ್ನಲು ಪ್ರಮುಖ ಕಾರಣ ಪ್ರತಿ ದಿನ ಮಾಧ್ಯಮಗಳಲ್ಲಿ ಭ್ರಷ್ಟಾಚಾರದ ಅಧಿಕಾರಿಗಳನ್ನು ಸೆರೆ ಹಿಡಿದುದರ ಕುರಿತಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು.
ಇಲ್ಲೊಂದು ಕಡೆ ಸಾಧಾರಣ ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಭೂಪನೊಬ್ಬನ ಮನೆಗೆ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದು ಕೋಟ್ಯಾಂತರ ಬೆಲೆ ಬಾಳುವ ಆಸ್ತಿಗಳನ್ನು. ಇಂದಿನ ಈ ಲೇಖನದಲ್ಲಿ ಆ ಕಾನ್ಸ್‌ಟೇಬಲ್ ಯಾರು ಮತ್ತು ಆತನಿಂದ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಆಸ್ತಿ ವಿವರ ಮತ್ತು ಲಕ್ಷುರಿ ವಾಹನಗಳ ಕುರಿತಾಗಿ ನೋಡಲಿದ್ದು, ಲೇಖನವನ್ನು ಕೊನೆಯವರೆಗೆ ಓದಿ.

ಉತ್ತರ ಪ್ರದೇಶದ ಶ್ಯಾಮ್ ಸುಶೀಲ್ ಮಿಶ್ರಾ ಎಂಬ ಕಾನ್ಸ್‌ಟೇಬಲ್ ಒಬ್ಬ ಆ್ಯಂಟಿ ಕರಪ್ಷನ್ ವಿಂಗ್ ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದು, ಈತನ ಆಸ್ತಿಯನ್ನು ನೋಡಿ ಸ್ವತಃ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಹೌದು, ಮಾಹಿತಿಗಳ ಪ್ರಕಾರ ಈ ವ್ಯಕ್ತಿ ಸುಮಾರು 12 ರೂಮ್‌ಗಳುಳ್ಳ ಎರಡು ಮಹಡಿಯ ಮನೆಯನ್ನು ಕಟ್ಟಿಸಿದ್ದಾನೆ. ಈ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಸಹ ಇದ್ದು, ಈ ಮನೆಯ ಒಟ್ಟು ವೆಚ್ಚ ಬರೋಬ್ಬರಿ 5 ಕೋಟಿ ರೂಪಾಯಿಗಳು ಎಂದು ತಿಳಿದು ಬಂದಿದೆ.
ಇದರ ಜೊತೆಗೆ ಈ ಸುಶೀಲ್ ಮಿಶ್ರಾನ ಬಳಿ ಬಿಎಂಡಬ್ಲ್ಯೂ, ಆಡಿ ಸೇರಿದಂತೆ ಐಷಾರಾಮಿ ಕಾರುಗಳು ಸೇರಿದಂತೆ ಫಾರ್ಚೂನರ್ ಮತ್ತು ಇತರ ಕಂಪನಿಯ ಸೆಡಾನ್, ಹ್ಯಾಚ್‌ಬಾಕ್‌ಗಳನ್ನು ಸಹ ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಇಷ್ಟು ಮಾತ್ರವಲ್ಲದೇ ಈತನ ಎಲ್ಲಾ ಪ್ರೀಮಿಯಂ ವಾಹನದ ನಂಬರ್ ಪ್ಲೆಟ್‌ಗಳಲ್ಲಿ ವಿಐಪಿ ನಂಬರ್‌ಗಳನ್ನು ಹಾಕಿಸಿದ್ದು, ನಂಬರ್ ಪ್ಲೇಟ್‌ಗೂ ಈತ ಲಕ್ಷಗಟ್ಟಲೆ ಹಣವನ್ನು ಸುರಿದಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಇಷ್ಟೆಲ್ಲಾ ಐಷಾರಾಮಿ ಆಸ್ತಿಗೆ ವಾರಸುದಾರ ಒಬ್ಬ ಕಾನ್ಸ್‌ಟೇಬಲ್ ಎಂದು ತಿಳಿದಾಗ ಸ್ವತಃ ಬೆಚ್ಚಿ ಬಿದ್ದು ಈತನ ಮೇಲೆ ಕ್ರಮವನ್ನು ಕೈಗೊಂಡಿದ್ದಾರೆ. ಕೇವಲ ಕಾನ್ಸ್‌ಟೇಬಲ್ ಇಷ್ಟೆಲ್ಲಾ ಆಸ್ತಿಗಳನ್ನು ಗಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದು ಈ ಎಲ್ಲಾ ಪ್ರಶ್ನೆಗಳಿಗೂ ಯಾವ ಉತ್ತರವನ್ನು ನೀಡಬೇಕು ಎಂದು ತಿಳಿಯದ ಶ್ಯಾಮ್ ಸುಶೀಲ್ ಮಿಶ್ರಾ ಮೌನವಾಗಿದ್ದ ಎಂದು ತಿಳಿದು ಬಂದಿದೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಚತುರ್ ಸಿಂಗ್ ಈತನ ಮೇಲೆ ದೂರು ದಾಖಲಿಸಿ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮನೆಗೆ ಸುಮಾರು 5 ಕೋಟಿ ರೂಪಾಯಿಗಳನ್ನು ಸುರಿದಿರುವ ಈ ಕಾನ್ಸ್‌ಟೇಬಲ್ ಶ್ಯಾಮ್ ಸುಶೀಲ್ ಮಿಶ್ರಾ ಇನ್ನು ಅದೆಲ್ಲೆಲ್ಲಿ ತನ್ನ ಅಕ್ರಮ ಹಣವನ್ನು ಕೂಡಿ ಇಟ್ಟಿದ್ದಾನೆ ಎಂಬ ಸಂಶಯ ಎಲ್ಲರಿಗೂ ಮೂಡಿದ್ದು ಈ ಕುರಿತಾಗಿ ಸಂಪೂರ್ಣ ತನಿಖೆಯನ್ನು ನಡೆಸುವುದಾಗಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ ಈ ಶ್ಯಾಮ್ ಸುಶೀಲ್ ಮಿಶ್ರಾ 1987 ರಲ್ಲಿ ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರ್ಪಡೆಯಾಗಿದ್ದ. ಈತನ ಮೇಲೆ ಮೊದಲಿನಿಂದಲೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿತ್ತು. ಆದರೆ ಈ ಮಟ್ಟಿಗೆ ಈತ ತನ್ನನ್ನು ತಾನು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದ ಎಂದು ಯಾರೂ ಸಹ ಊಹಿಸಿರಲಿಲ್ಲ ಎಂದು ಈತನನ್ನು ಹತ್ತಿರದಿಂದ ಬಲ್ಲ ಈತನ ಸಹೋದ್ಯೋಗಿಗಳು ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications