ನೀರಲ್ಲೂ, ನೆಲದಲ್ಲೂ ದಾಳಿಯಿಡಬಲ್ಲ ಅಮೆರಿಕನ್ ಯುದ್ಧ ವಾಹನ
ಒಂದನೇ ಹಾಗೂ ಎರಡನೇ ಲೋಕ ಮಹಾಯುದ್ಧದಲ್ಲಿ ವಿಶ್ವಕ್ಕೆ ತನ್ನ ಶಕ್ತಿ ಪ್ರದರ್ಶನ ನಡೆಸಿರುವ ಅಮೆರಿಕ ಅಪಾರ ಪ್ರಮಾಣದ ಸುಸುಜ್ಜಿತ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಜಾಗತಿಕವಾಗಿ ವಿಶ್ವದ ದೊಡ್ಡಣ್ಣ ಎಂದೇ ಗುರುತಿಸಿಲ್ಪಟ್ಟಿರುವ ಅಮೆರಿಕದ ಬಳಿ ಏಕಕಾಲಕ್ಕೆ ನೀರಲ್ಲಿ ಹಾಗೂ ನೆಲದಿಂದ ದಾಳಿ ನಡೆಸುವಂತಹ ಅತ್ಯಂತ ಶಕ್ತಿಶಾಲಿ ಯುದ್ಧ ವಾಹನವಿದೆ.
ಅದುವೇ ಅಸಾಲ್ಟ್ ಆ್ಯಂಪಿಬಿಯಸ್ ವೆಹಿಕಲ್ (Assault Amphibious Vehicle)
Also Read: ಶತ್ರು ಪಾಳಯದಲ್ಲಿ ನಡುಕ ಸೃಷ್ಟಿಸಬಲ್ಲ 10 ಅಪಾಯಕಾರಿ ಯುದ್ಧ ಟ್ಯಾಂಕರ್
ಹೆಸರಲ್ಲೇ ಸೂಚಿಸಿರುವಂತೆಯೇ ಯಾವುದೇ ರೀತಿಯ ಕರುಣೆಯಿಲ್ಲದೇ ನೆಲ ಹಾಗೂ ಜಲದಲ್ಲಿ ಶತ್ರು ಪಡೆಗಳನ್ನು ಧ್ವಂಸ ಮಾಡುವ ಶಕ್ತಿಯನ್ನು ಇದು ಹೊಂದಿದೆ.

ಯುಎಸ್ ಅಸಾಲ್ಟ್ ಉಭಯಚರ ವಾಹನವನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅತಿ ಕಡಿಮೆ ಭಾರ ಕಾಯ್ದುಕೊಳ್ಳಲಾಗಿದೆ. ಇದರಿಂದ ಹೆಚ್ಚಿನ ಗತಿ ಪಡೆಯಲು ಸಹಕಾರಿಯಾಗಲಿದೆ.

ಅದೇ ಹೊತ್ತಿಗೆ ಯಾವುದೇ ರೀತಿಯ ಗ್ರೆನೇಡ್ ಹಾಗೂ ಬಾಂಬ್ ದಾಳಿಯನ್ನು ಸಮರ್ಥವಾಗಿ ಎದುರಿಸುವಷ್ಟು ಸಾಮರ್ಥ್ಯವನ್ನು ಇದು ಹೊಂದಿದೆ.

ಪ್ರಮುಖವಾಗಿಯೂ ಅಮೆರಿಕ ರಕ್ಷಣಾ ಪಡೆಯು ಇದರ ಸೇವೆಯನ್ನು ಬಳಸುತ್ತಿದೆ. ಅಲ್ಲದೆ ಅಮೆರಿಕ ಬಳಿ 1972ನೇ ಇಸವಿಯಿಂದಲೂ ಬಳಕೆಯಲ್ಲಿದೆ.

ಮೂರರಿಂದ 21 ಸೈನಿಕರು ಇದರಲ್ಲಿ ಸಂಚರಿಸಬಹುದಾಗಿದೆ. ಅಲ್ಲದೆ ಪ್ರಮುಖವಾಗಿಯೂ ಎಂಕೆ 19 40 ಎಂಎಂ ಆಟೋಮ್ಯಾಟಿಕ್ ಗ್ರೇನೆಡ್ ಲಾಂಚರ್ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ.

ನೆಲದಲ್ಲಿ ಗಂಟೆಗೆ 24ರಿಂದ 32 ಕೀ.ಮೀ. ವೇಗದಲ್ಲಿ ಸಂಚರಿಸಬಲ್ಲ ಈ ವಾಹನ ನೀರಲ್ಲಿ ಗಂಟೆಗೆ 13.2 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಲ್ಲದೆ 480 ಕೀ.ಮೀ. ವ್ಯಾಪ್ತಿಯ ವರೆಗೂ ದಾಳಿಯಿಡಲಿದೆ.

ಅಸಾಲ್ಟ್ ಆ್ಯಂಪಿಬಿಯಸ್ ವೆಹಿಕಲ್ ಅನೇಕ ಶ್ರೇಣಿಗಳಲ್ಲಿ ಲಭ್ಯವಿದ್ದು, ಅಮೆರಿಕ ಸೇರಿದಂತೆ ಅರ್ಜೆಟೀನಾ ಸೇರಿದಂತೆ ಅನೇಕ ರಾಷ್ಟ್ರಗಳೂ ಇದರ ಸೇವೆಯನ್ನು ಬಳಸಿದೆ. 1991ರ ಗಲ್ಫ್ ಯುದ್ಧದಲ್ಲಿ ಇದರ ಬಳಕೆ ಅತ್ಯಧಿಕ ಪ್ರಮಾಣದಲ್ಲಿತ್ತು.

ಒಟ್ಟಿನಲ್ಲಿ ರಕ್ಷಣಾ ವಿಭಾಗದಲ್ಲಿ ಅಮೆರಿಕ ಮರೈನ್ ಪಡೆಗೆ ಅಸಾಲ್ಟ್ ಆ್ಯಂಪಿಬಿಯಸ್ ವಾಹನ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ದುಬೈ ನಾಗರಿಕ ರಕ್ಷಣಾ ವಿಭಾಗಕ್ಕೆ ಬಲ ತುಂಬಿದ ಜೆಟ್ ಪ್ಯಾಕ್


Click it and Unblock the Notifications








