ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಮೆರಿಕಾದ ನ್ಯಾಯಾಲಯವೊಂದು ಕಾರು ಮಾರಾಟಗಾರನಿಗೆ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 4 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿದೆ. ಯಾವ ಕಾರಣಕ್ಕೆ ನ್ಯಾಯಾಲಯವು ಕಾರು ಮಾರಾಟಗಾರನಿಗೆ ಶಿಕ್ಷೆ ವಿಧಿಸಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಕಾರು ಡೀಲರ್ ಕಾರಿನಲ್ಲಿದ್ದ ಓಡೋ ಮೀಟರ್ ಅನ್ನು ಹಾಳು ಮಾಡಿದ ಕಾರಣಕ್ಕೆ ಆತನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 4 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.30 ಕೋಟಿಗಳಾಗುತ್ತದೆ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಮೆರಿಕಾ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಕಿಯೋ ಎ. ಮಾಟ್ಸುಮೊಟೊರವರು ಈ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಓಡೋ ಮೀಟರ್ ಹಗರಣದಲ್ಲಿ ಶ್ಮುಯೆಲ್ ಹಾಗೂ ಆತನ ಸಹೋದರ ಸೀಮ್ ಎಂಬುವವರು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಇವರಿಬ್ಬರೂ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು. ಹೆಚ್ಚಿನ ಲಾಭ ಗಳಿಸುವ ಸಲುವಾಗಿ, ಅವರು ಕಾರುಗಳು ಹೆಚ್ಚು ದೂರ ಚಲಿಸಿದ್ದರೂ ಕಡಿಮೆ ದೂರ ಚಲಿಸಿರುವಂತೆ ಕಾರುಗಳಲ್ಲಿದ್ದ ಓಡೋ ಮೀಟರ್'ಗಳನ್ನು ಮಾರ್ಪಡಿಸಿದ್ದರು.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಇದರ ಜೊತೆಗೆ ಕಾರುಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಫೋರ್ಜರಿ ಮಾಡಿದ್ದರು. ಈ ಅಪರಾಧಗಳಿಗಾಗಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ ಡೀಲರ್'ಗೆ ನ್ಯಾಯಾಲಯವು ಗರಿಷ್ಠ ಶಿಕ್ಷೆ ವಿಧಿಸಿದೆ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಈ ಇಬ್ಬರು ಸಹೋದರರು ಜೊತೆಗೂಡಿ ಒಟ್ಟು 690 ವಾಹನಗಳನ್ನು ವಂಚಿಸಿದ್ದಾರೆ. ಅವರು 2006ರಿಂದ 2011ರವರೆಗೆ ವಾಹನಗಳಿಗೆ ಸಂಬಂಧಿಸಿದ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಈಗ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿರುವ ಬಿಡಿ ಭಾಗಗಳನ್ನು ತಿರುಚಿ ವಂಚಿಸುವ ಘಟನೆಗಳು ಅಮೆರಿಕಾದಲ್ಲಿ ಮಾತ್ರವಲ್ಲದೇ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ನಡೆಯುತ್ತದೆ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಭಾರತದಲ್ಲಿಯೂ ಇದೇ ರೀತಿಯ ಹಲವು ಘಟನೆಗಳು ನಡೆಯುತ್ತವೆ. ಆದರೆ ಇವುಗಳನ್ನು ತಡೆಗಟ್ಟಲು ಭಾರತದಲ್ಲಿ ಕಠಿಣ ಕಾನೂನುಗಳಿಲ್ಲ ಎಂದು ವಾಹನ ತಜ್ಞರು ಹೇಳುತ್ತಾರೆ. ಇದರಿಂದಾಗಿ ಓಡೋ ಮೀಟರ್'ಗೆ ಸಂಬಂಧಿಸಿದ ಹಗರಣಗಳು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ನಡೆಯುತ್ತಲೇ ಇರುತ್ತವೆ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಇದರ ಜೊತೆಗೆ ಅಪಘಾತಗಳನ್ನು ಮರೆಮಾಚುವುದು, ವಾಹನಗಳ ಡೇಟಾವನ್ನು ನಾಶಪಡಿಸುವುದು ಸೇರಿದಂತೆ ವಿವಿಧ ರೀತಿಯ ವಂಚನೆಗಳು ಹೆಚ್ಚಾಗುತ್ತಿವೆ. ಇವುಗಳ ಬಗ್ಗೆ ಅರಿವಿರದ ಜನರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಓಡೋ ಮೀಟರ್ ಮಾರ್ಪಡಿಸಿದ ಕಾರು ಮಾರಾಟಗಾರನಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಭಾರತದಲ್ಲಿ ಈಗ ಸೆಕೆಂಡ್ ಕಾರುಗಳಿಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಜೊತೆಗೆ ಈ ರೀತಿಯ ವಂಚನೆ ಪ್ರಕರಣಗಳು ವಿವಿಧೆಡೆ ವರದಿಯಾಗುತ್ತಿವೆ. ಈ ಕಾರಣಕ್ಕೆ ಭಾರತದಲ್ಲಿಯೂ ಕಠಿಣ ಕಾನೂನು ಜಾರಿಗೊಳಿಸಿ ಸೆಕೆಂಡ್ ಹ್ಯಾಂಡ್ ಕಾರುಗಳ ವಂಚನೆಗೆ ಕಡಿವಾಣ ಹಾಕಬೇಕು ಎಂಬುದು ಜನರ ಆಗ್ರಹ.

Most Read Articles

Kannada
English summary
US court sentences five year imprisonment for used motor vehicle dealer. Read in Kannada.
Story first published: Saturday, July 10, 2021, 10:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X