ಲಾಕ್‌ಡೌನ್ ಸಡಿಲಿಕೆ: ಕುಡಿದ ಮತ್ತಿನಲ್ಲಿ ಮಗನನ್ನೇ ಕೆಳಕ್ಕೆ ಕೆಡವಿದ ಪಾಪಿ ತಂದೆ
ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಭಾರತದಲ್ಲಿ ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ಡೌನ್ ಕಾರಣಕ್ಕೆ ಜನರು ಅನಗತ್ಯವಾಗಿ ಹೊರ ಹೋಗುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಕಳೆದ ಕೆಲವು ವಾರಗಳಿಂದ ರಸ್ತೆ ಅಪಘಾತಗಳ ಪ್ರಮಾಣವು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ರಸ್ತೆ ಅಪಘಾತಗಳ ಪ್ರಮಾಣವು ಕಡಿಮೆಯಾಗಲು ಮತ್ತೊಂದು ಒಂದು ಕಾರಣವೆಂದರೆ ಮದ್ಯದಂಗಡಿಗಳನ್ನು ಮುಚ್ಚಿರುವುದು. ಈಗ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಇದರಿಂದಾಗಿ ವಾಹನ ಸಂಚಾರವು ಮತ್ತೆ ಆರಂಭವಾಗಿದೆ. ಮದ್ಯದಂಗಡಿಗಳನ್ನು ಸಹ ತೆರೆಯಲಾಗಿದೆ. ಇದರಿಂದ ಮತ್ತೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.

ಸಾರ್ವಜನಿಕರ ಪ್ರತಿಭಟನೆಯ ನಡುವೆಯೂ ತಮಿಳುನಾಡಿನಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಮದ್ಯದಂಗಡಿಗಳನ್ನು ಮುಚ್ಚಿದ್ದ ಕಾರಣಕ್ಕೆ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು. ಮದ್ಯದಂಗಡಿಗಳನ್ನು ತೆರೆಯುವುದರಿಂದ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಲಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ತಮಿಳುನಾಡಿನ ಅರಿಯಲೂರು ಬಳಿ ನಡೆದ ಘಟನೆಯಲ್ಲಿ ಕುಡಿದ ಅಮಲಿನಲ್ಲಿ ತಂದೆಯೊಬ್ಬ ಬೈಕ್ ಚಾಲನೆ ಮಾಡುತ್ತಾ ಮಗನನ್ನು ಕೆಳಕ್ಕೆ ಬೀಳಿಸಿದ್ದಾನೆ. ತಾನೂ ಗಾಯಗೊಂಡಿದ್ದು, ಮಗನಿಗೂ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡಿರುವ ಸೆಲ್ವಂ ಅರಿಯಲೂರು ಜಿಲ್ಲೆಯ ಜಯಂಕೊಂಡಂ ಬಳಿಯ ತಿರುಮಂಗಲಂ ಗ್ರಾಮಕ್ಕೆ ಸೇರಿದವನು.

ಸಂಬಂಧಿಕರ ಮನೆಯ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಸೆಲ್ವಂ ಮೇ 19ರಂದು ತನ್ನ ದ್ವಿಚಕ್ರ ವಾಹನದಲ್ಲಿ ಹೋಗಿದ್ದ. ಅಲ್ಲಿ ತುಸು ಹೆಚ್ಚು ಎನಿಸುವಷ್ಟು ಮದ್ಯ ಸೇವಿಸಿದ್ದಾನೆ. ಇದರಿಂದ ಮೈ ಮೇಲೆ ಪ್ರಜ್ಞೆ ಕಳೆದುಕೊಂಡಿದ್ದಾನೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆದರೂ ಬೈಕ್ ಚಾಲನೆ ಮಾಡಿಕೊಂಡು ತನ್ನ ಮನೆ ಕಡೆಗೆ ಹೊರಟಿದ್ದಾನೆ. ತನ್ನ ಮಗನನ್ನು ಸಹ ತನ್ನೊಂದಿಗೆ ಕರೆದೊಯ್ದಿದ್ದಾನೆ. ಐದು ವರ್ಷ ವಯಸ್ಸಿನ ಆತನ ಮಗನನ್ನು ಬೈಕಿನ ಮುಂದೆ ಕೂರಿಸಿ ಬೈಕ್ ಸವಾರಿ ಮಾಡಿದ್ದಾನೆ.

ಪುದುಕ್ಕವಾಡಿಯನ್ನು ಸಮೀಪ ಬಂದಾಗ ಆತನ ಮಗ ಬೈಕಿನಿಂದ ಜಾರಿ ಕೆಳಗೆ ಬಿದ್ದಿದ್ದಾನೆ. ಆತನ ತಲೆಗೆ ಪೆಟ್ಟು ಬಿದ್ದಿದ್ದೆ. ಆದರೆ ತನ್ನ ಮಗ ಕೆಳಗೆ ಬಿದ್ದಿರುವುದನ್ನು ಅರಿಯದೇ ಬೈಕ್ ಚಾಲನೆ ಮಾಡಿದ್ದಾನೆ. ಸೆಲ್ವಂ ವಿಪರೀತ ಕುಡಿದ್ದಿದೇ ಈ ಅನಾಹುತಕ್ಕೆ ಕಾರಣ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ವಲ್ಪ ದೂರ ಹೋದ ನಂತರ ಆತನೂ ಸಹ ಅಪಘಾತಕ್ಕೀಡಾಗಿದ್ದಾನೆ. ಆತನ ಮಗ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಪಾಲಿಮರ್ ನ್ಯೂಸ್ ವರದಿ ಮಾಡಿದೆ.

ಕುಡಿದು ವಾಹನ ಚಾಲನೆ ಮಾಡುವುದು ಎಷ್ಟು ದೊಡ್ಡ ತಪ್ಪು ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ. ಹೆಚ್ಚು ಕುಡಿಯುವುದರಿಂದ ಮೈ ಮೇಲೆ ಪ್ರಜ್ಞೆ ಕಳೆದುಕೊಳ್ಳಬಹುದು ಇಂತಹ ಪರಿಸ್ಥಿತಿಯಲ್ಲಿ ವಾಹನ ಚಾಲನೆ ಮಾಡಿದರೆ ಅಪಘಾತಗಳು ಹೆಚ್ಚಾಗುತ್ತವೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕುಡಿದಿರುವ ಸಂದರ್ಭದಲ್ಲಿ ವಾಹನ ಚಾಲನೆ ಮಾಡುವ ಬದಲು ಕ್ಯಾಬ್ ಮೂಲಕ ಪ್ರಯಾಣಿಸುವುದು ಸೂಕ್ತ. ಕುಡಿದಿರುವಾಗ ಯಾರೊಂದಿಗೂ ಜಗಳವಾಡದೇ ಇರುವುದು ಬಹಳ ಮುಖ್ಯ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಭಾರತದಲ್ಲಿ ಸಂಭವಿಸುವ ಹೆಚ್ಚಿನ ರಸ್ತೆ ಅಪಘಾತಗಳಿಗೆ ಕುಡಿದು ವಾಹನ ಚಾಲನೆ ಮಾಡುವುದೇ ಪ್ರಮುಖ ಕಾರಣ ಎಂಬುದನ್ನು ಗಮನಿಸಬೇಕು.


Click it and Unblock the Notifications