ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ಸ್ವಚ್ಛತೆಯನ್ನು ಕಾಪಾಡಲು ಉತ್ತರ ಪ್ರದೇಶದಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಸಚಿವ ಸಂಪುಟ ಸಭೆಯು ನಿಯಮವೊಂದನ್ನು ಅಂಗೀಕರಿಸಿದೆ. ಈ ನಿಯಮದನ್ವಯ ವಾಹನಗಳಲ್ಲಿ ಸಾಗುವವರು ರಸ್ತೆಯಲ್ಲಿ ಉಗುಳಿದರೆ ದಂಡ ವಿಧಿಸಲಾಗುತ್ತದೆ.

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಈ ನಿಯಮವನ್ನು ಜಾರಿಗೊಳಿಸುತ್ತಿರುವುದರ ಹಿಂದಿರುವ ಮುಖ್ಯ ಉದ್ದೇಶವಾಗಿದೆ ಎಂದು ಅಲ್ಲಿನ ರಾಜ್ಯ ಸರ್ಕಾರವು ಹೇಳಿದೆ. ರಸ್ತೆಯ ಮೇಲೆ ಕಾರು ಚಾಲಕರು ಉಗುಳುತ್ತಾ ಸಾಗುತ್ತಿರುವುದರಿಂದ ರಸ್ತೆಗಳ ಸ್ವಚ್ಛತೆಯು ಹಾಳಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದಾಗಿ ರಸ್ತೆಗಳನ್ನು ಸ್ವಚ್ಛಗೊಳಿಸಿದ ನಂತರವೂ ಕಲೆಗಳು ಕಂಡುಬರುತ್ತಿವೆ.

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ಸರ್ಕಾರವು ಜಾರಿಗೊಳಿಸುತ್ತಿರುವ ನಿಯಮದನ್ವಯ ರಸ್ತೆಯಲ್ಲಿ ಉಗುಳುವವರಿಗೆ ರೂ.1000ಗಳ ದಂಡ ವಿಧಿಸಲಾಗುತ್ತದೆ. ಈ ಕಾನೂನನ್ನು ಪ್ರಕಟಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಸ್ತೆಗಳ ಸೌಂದರ್ಯವನ್ನು ಕಾಪಾಡಲು ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ಹೇಳಿದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ಆಟೋಮೊಬೈಲ್ ಕಂಪನಿಗಳಿಗೆ ಉತ್ತರ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಆಹ್ವಾನ ನೀಡಲಾಗಿದೆ. ರಾಜ್ಯವನ್ನು ಆದಷ್ಟು ಬೇಗ ಮಾಲಿನ್ಯ ಮುಕ್ತಗೊಳಿಸಲು ಸರ್ಕಾರವು ಬಯಸಿದ್ದು, ಇದಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವುದು ಮುಖ್ಯ ಎಂದು ಅವರು ಹೇಳಿದರು.

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗಾಗಿ ಉತ್ತರ ಪ್ರದೇಶ ಸರ್ಕಾರವು ಶೀಘ್ರದಲ್ಲಿಯೇ ರಾಜ್ಯದಲ್ಲಿ ವಾಹನಗಳಿಗೆ ಸಂಬಂಧಿಸಿದ ಸಂಶೋಧನೆ ಹಾಗೂ ಪರೀಕ್ಷಾ ಕೇಂದ್ರವನ್ನು ತೆರೆಯಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

2021-22ರ ಸಾಲಿನ ಬಜೆಟ್‌ನಲ್ಲಿ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಅನುಷ್ಠಾನಗೊಳಿಸುವ ಕುರಿತು ಘೋಷಣೆ ಮಾಡಲಾಗಿದೆ. ಈ ನೀತಿಯನ್ವಯ ಹೆಚ್ಚು ಮಾಲಿನ್ಯವನ್ನು ಹೊರ ಸೂಸುವ ವಾಹನಗಳು ರಸ್ತೆಗಿಳಿಯುವಂತಿಲ್ಲ.

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ಸ್ಕ್ರ್ಯಾಪಿಂಗ್ ನೀತಿಯಡಿಯಲ್ಲಿ 20 ವರ್ಷ ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷ ಹಳೆಯದಾದ ಕಮರ್ಷಿಯಲ್ ವಾಹನಗಳನ್ನು ಗುರುತಿಸಿ ಸ್ಕ್ರ್ಯಾಪ್ ಮಾಡಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಕಾರ ದೇಶದಲ್ಲಿರುವ 10 ದಶಲಕ್ಷಕ್ಕೂ ಹೆಚ್ಚಿನ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ಹಳೆಯ ವಾಹನಗಳು ಹೊಸ ವಾಹನಗಳಿಗಿಂತ 12-13 ಪಟ್ಟು ಹೆಚ್ಚು ಮಾಲಿನ್ಯವನ್ನು ಹೊರಸೂಸುತ್ತವೆ. ಇದರ ಜೊತೆಗೆ ಈ ವಾಹನಗಳು ಹೆಚ್ಚು ಇಂಧನವನ್ನು ಬಳಸುತ್ತವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಸ್ತೆಯಲ್ಲಿ ಉಗುಳುವವರಿಗೆ ಬೀಳಲಿದೆ ಒಂದು ಸಾವಿರ ರೂಪಾಯಿ ದಂಡ

ಈ ವಾಹನಗಳನ್ನು ಸ್ಕ್ರಾಪ್ ಮಾಡುವುದರಿಂದ ಇಂಧನದ ಬಳಕೆಯು ಕಡಿಮೆಯಾಗುತ್ತದೆ. ಜೊತೆಗೆ ಇಂಧನ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಕೇಂದ್ರ ಸರ್ಕಾರವು ಈ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.

Most Read Articles

Kannada
English summary
Uttar Pradesh government to impose fine for car drivers for spitting in public road. Read in Kannada.
Story first published: Wednesday, February 3, 2021, 20:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X