ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ದೇಶದ ಎಲ್ಲೆಡೆ ಕರೋನಾ ವೈರಸ್ ಆರ್ಭಟಿಸುತ್ತಿದೆ. ಮೊದಲ ಅಲೆಗಿಂತ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ವೈರಸ್ ಹರಡುವಿಕೆ ಪ್ರಮಾಣ ಸದ್ಯಕ್ಕೆ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ.

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಎರಡನೇ ಅಲೆಯಲ್ಲಿ ಕರೋನಾ ಸೋಂಕಿಗೆ ಒಳಗಾಗುತ್ತಿರುವವರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇಶದೆಲ್ಲೆಡೆ ಆಕ್ಸಿಜನ್ ಕೊರತೆ ಎದುರಾಗಿದೆ. ಸೋಂಕಿತರಿಗೆ ನೆರವಾಗಲು ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು, ಆಟೋ ಮೊಬೈಲ್ ಕಂಪನಿಗಳು, ಉದ್ಯಮಿಗಳು, ಸಾರ್ವಜನಿಕರು ಕೈ ಜೋಡಿಸಿದ್ದಾರೆ.

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಈಗ ಸೋಂಕಿತರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿರುವ ಯುವತಿಯ ಬಗ್ಗೆ ವರದಿಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಅಗತ್ಯವಿರುವವರಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

26 ವರ್ಷದ ಆರ್ಷಿ ಉತ್ತರ ಪ್ರದೇಶದ ಶಹಜಹಾನ್ಪುರಕ್ಕೆ ಸೇರಿದವಳು. ಉತ್ತರ ಪ್ರದೇಶದ ಜನರು ಆಕೆಯನ್ನು ಸಿಲಿಂಡರ್ ಬಿಟಿಯಾ ಅಂದರೆ ಸಿಲಿಂಡರ್ ಮಗಳು ಎಂದು ಕರೆಯುತ್ತಿದ್ದಾರೆ.

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಕೆಲವು ದಿನಗಳ ಹಿಂದೆ ಆರ್ಷಿಯ ತಂದೆಗೆ ಕರೋನಾ ವೈರಸ್ ಸೋಂಕು ತಗುಲಿತ್ತು. ಈ ವೇಳೆ ಆಕೆ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಳು. ಆದರೆ ಹಾಸಿಗೆಗಳ ಕೊರತೆಯಿಂದಾಗಿ ಆಸ್ಪತ್ರೆಯ ಆಡಳಿತವು ಆಕೆಯ ತಂದೆಯನ್ನು ಮನೆಯಲ್ಲಿ ಪ್ರತ್ಯೇಕವಾಗಿಡಲು ಸೂಚಿಸಿತ್ತು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಆಕೆಯ ತಂದೆಗೆ ಆಕ್ಸಿಜನ್ ಅಗತ್ಯವಾಗಿತ್ತು. ಹಲವು ಕಡೆ ಪ್ರಯತ್ನಿಸಿದರೂ ಆಕ್ಸಿಜನ್ ಸಿಗಲಿಲ್ಲ. ನಂತರ ಉತ್ತರಾಖಂಡದ ಚಾರಿಟಿಯೊಂದು ಅರ್ಷಿಯ ತಂದೆಗೆಆಕ್ಸಿಜನ್ ಸಿಲಿಂಡರ್ ಒದಗಿಸಿತು.

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಇದರಿಂದ ಆರ್ಷಿಯ ತಂದೆ ಕೆಲವೇ ದಿನಗಳಲ್ಲಿ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾದರು. ತನ್ನ ತಂದೆಗೆ ಎದುರಾದ ಪರಿಸ್ಥಿತಿ ಬೇರೆಯವರಿಗೆ ಬರಬಾರದು ಎಂಬ ಕಾರಣಕ್ಕೆ ಆರ್ಷಿ ತಾನು ವಾಸಿಸುವ ಸುತ್ತ ಮುತ್ತಲ ಪ್ರದೇಶದ ಜನರಿಗೆ ನೆರವಾಗಲು ಮುಂದಾದಳು.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಆರ್ಷಿ ಅಗತ್ಯವಿರುವವರಿಗೆ ಆಕ್ಸಿಜನ್ ಸಿಲಿಂಡರ್ ವಿತರಿಸುತ್ತಿದ್ದಾಳೆ. ಈ ಸೇವೆಯನ್ನು ನೀಡಲು ಆಕೆ ಯಾವುದೇ ಶುಲ್ಕವನ್ನು ಪಡೆಯದೇ ಸಂಪೂರ್ಣವಾಗಿ ಉಚಿತವಾಗಿ ಮಾಡುತ್ತಿದ್ದಾಳೆ ಎಂಬುದು ಗಮನಾರ್ಹ.

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಆರ್ಷಿ ತನ್ನ ತಂದೆಯ ಜೀವ ಉಳಿಸಲು ನೆರವಾದ ಉತ್ತರಾಖಂಡ್ ಚಾರಿಟಿಯೊಂದಿಗೆ ಕೈ ಜೋಡಿಸಿದ್ದಾಳೆ. ಈ ಚಾರಿಟಿಯಿಂದ ಆಕ್ಸಿಜನ್ ಸಿಲಿಂಡರ್'ಗಳನ್ನು ಪಡೆಯುವ ಆಕೆ ಅವುಗಳನ್ನು ಅಗತ್ಯವಿರುವ ಬಡ ಜನರಿಗೆ ಪೂರೈಸುತ್ತಿದ್ದಾಳೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಅಂದ ಹಾಗೆ ಆರ್ಷಿ ಆಕ್ಸಿಜನ್ ಸಿಲಿಂಡರ್'ಗಳನ್ನು ಪೂರೈಸಲು ತನ್ನ ಹೋಂಡಾ ಆಕ್ಟಿವಾ ಸ್ಕೂಟರ್ ಬಳಸುತ್ತಿದ್ದಾಳೆ. ಈ ಸ್ಕೂಟರ್ ಉತ್ತಮ ಮೈಲೇಜ್ ನೀಡುವ ಕಾರಣ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲವೆಂದು ಆಕೆ ಹೇಳಿದ್ದಾಳೆ.

ಅಗತ್ಯವಿರುವವರ ಮನೆ ಬಾಗಿಲಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದಾಳೆ ಈ ಯುವತಿ

ಈ ಸ್ಕೂಟರಿನ ಮುಂಭಾಗದಲ್ಲಿ ಹೆಚ್ಚು ಸ್ಥಳಾವಕಾಶ ಇರುವುದರಿಂದ ಎರಡು ಸಿಲಿಂಡರ್‌ಗಳನ್ನು ಒಂದೇ ಬಾರಿ ಸಾಗಿಸಬಹುದೆಂದು ಆಕೆ ಹೇಳಿದ್ದಾಳೆ. ಹೀಗೆ ಇದುವರೆಗೂ 45 ಸಿಲಿಂಡರ್‌ಗಳನ್ನು ಪೂರೈಸಲಾಗಿದೆ.

Most Read Articles

Kannada
English summary
Uttar Pradesh lady delivering oxygen cylinder on Honda Activa scooter. Read in Kannada.
Story first published: Thursday, May 20, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X