ಪೊಲೀಸರ ಮುಂದೆಯೇ ಸ್ಟಂಟ್ ಮಾಡಿದ ಸೂಪರ್ ಕಾರು ಮಾಲೀಕ ಕೊನೆಗೂ ಅಂದರ್

ಒಂದು ಕಾಲದಲ್ಲಿ ಭಾರತದಲ್ಲಿ ಸೂಪರ್ ಕಾರುಗಳನ್ನು ಕಾಣುವುದೇ ಅಪರೂಪವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಭಾರತದಲ್ಲಿ ಸೂಪರ್ ಕಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದ ಪ್ರತಿಯೊಂದು ನಗರದಲ್ಲಿ ಕನಿಷ್ಠ ಒಂದಾದರೂ ಸೂಪರ್ ಕಾರ್ ಅನ್ನು ಕಾಣಬಹುದು.

ಪೊಲೀಸರ ಮುಂದೆಯೇ ಸ್ಟಂಟ್ ಮಾಡಿದ ಸೂಪರ್ ಕಾರು ಮಾಲೀಕ ಕೊನೆಗೂ ಅಂದರ್

ಸೂಪರ್ ಕಾರುಗಳನ್ನು ಶ್ರೀಮಂತರು ತಮ್ಮ ಪ್ರತಿಷ್ಟೆಗಾಗಿ ಖರೀದಿಸುತ್ತಾರೆ. ಆದರೆ ಸರಿಯಾದ ಮುನ್ಸೂಚನೆ ಹಾಗೂ ರಕ್ಷಣಾತ್ಮಕ ಕ್ರಮಗಳಿಲ್ಲದೆ ಬಲಶಾಲಿ ಸೂಪರ್‌ಕಾರ್‌ಗಳನ್ನು ಚಾಲನೆ ಮಾಡಿದರೆ ಅಪಾಯ ಖಚಿತ. ಆದರೆ ಕೆಲವು ಸೂಪರ್ ಕಾರು ಮಾಲೀಕರು ಇದರ ಬಗ್ಗೆ ಗಮನ ಹರಿಸುವುದಿಲ್ಲ. ಸಾರ್ವಜನಿಕ ರಸ್ತೆಗಳಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ.

ಪೊಲೀಸರ ಮುಂದೆಯೇ ಸ್ಟಂಟ್ ಮಾಡಿದ ಸೂಪರ್ ಕಾರು ಮಾಲೀಕ ಕೊನೆಗೂ ಅಂದರ್

ಇದೇ ರೀತಿಯ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಫೆರಾರಿ ಸೂಪರ್ ಕಾರ್ ಮಾಲೀಕ ಸ್ಟಂಟ್ ನಲ್ಲಿ ಭಾಗಿಯಾಗಿದ್ದ. ಅದೂ ಸಹ ಪೊಲೀಸರ ಮುಂದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪೊಲೀಸರ ಮುಂದೆಯೇ ಸ್ಟಂಟ್ ಮಾಡಿದ ಸೂಪರ್ ಕಾರು ಮಾಲೀಕ ಕೊನೆಗೂ ಅಂದರ್

ಪೊಲೀಸರು ಸೂಪರ್ ಕಾರು ಮಾಲೀಕನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾನ್ಪುರ್ ನಗರದ ಗಂಗಾ ಬರಾಜ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಫೆರಾರಿ ಕ್ಯಾಲಿಫೋರ್ನಿಯಾ ಜಿಟಿ ಕಾರಿನಲ್ಲಿ ಶರತ್ ಕೆಮ್ಕರ್ ಎಂಬಾತನೇ ಸ್ಟಂಟ್ ಮಾಡಿ ಸಿಕ್ಕಿ ಬಿದ್ದಿರುವವನು.

ಪೊಲೀಸರ ಮುಂದೆಯೇ ಸ್ಟಂಟ್ ಮಾಡಿದ ಸೂಪರ್ ಕಾರು ಮಾಲೀಕ ಕೊನೆಗೂ ಅಂದರ್

ಈತ ಗುಟ್ಕಾ ಕಂಪನಿಯ ಮಾಲೀಕನೆಂದು ತಿಳಿದು ಬಂದಿದೆ. ತಮ್ಮ ಸೂಪರ್ ಕಾರಿನಲ್ಲಿ ಜನನಿಬಿಡ ರಸ್ತೆಯಲ್ಲಿ ಪ್ರದಕ್ಷಿಣೆ ಹಾಕಿ, ಸ್ಟಂಟ್ ಮಾಡಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವೀಡಿಯೊ ಮಾಡಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೊಲೀಸರ ಮುಂದೆಯೇ ಸ್ಟಂಟ್ ಮಾಡಿದ ಸೂಪರ್ ಕಾರು ಮಾಲೀಕ ಕೊನೆಗೂ ಅಂದರ್

ಈ ವೀಡಿಯೊದಲ್ಲಿ ಪೊಲೀಸರು ಇರುವುದನ್ನು ಕಾಣಬಹುದು. ಪೊಲೀಸರು ಇದ್ದರೂ ಸಹ ಫೆರಾರಿ ಕಾರಿನ ಮಾಲೀಕ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಫೆರಾರಿ ಕಾರಿನ ರಿಜಿಸ್ಟ್ರೇಷನ್ ನಂಬರ್ ಮೂಲಕ ಪೊಲೀಸರು ಕಾರು ಮಾಲೀಕನನ್ನು ಪತ್ತೆ ಹಚ್ಚಿ ಆತನ ಮನೆಯಲ್ಲಿಯೇ ಬಂಧಿಸಿದ್ದಾರೆ. ಕಾರನ್ನು ವಶಕ್ಕೆ ಪಡೆದು ನಿಯಮ ಉಲ್ಲಂಘಿಸಿದ ಕಾರು ಮಾಲೀಕನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪೊಲೀಸರ ಮುಂದೆಯೇ ಸ್ಟಂಟ್ ಮಾಡಿದ ಸೂಪರ್ ಕಾರು ಮಾಲೀಕ ಕೊನೆಗೂ ಅಂದರ್

ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದ ಸೂಪರ್ ಕಾರು ಹಾಗೂ ಹೈಸ್ಪೀಡ್ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Most Read Articles

Kannada
English summary
Uttar Pradesh police arrests super car owner for doing stunts in public road. Read in Kannada.
Story first published: Wednesday, August 19, 2020, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X