ವರ್ಗಾವಣೆ ಸಂಭ್ರಮಿಸಲು ಮುಂದಾಗಿ ಅಮಾನತುಗೊಂಡ ಪೊಲೀಸ್ ಅಧಿಕಾರಿ
ಯುವ ಜನರಲ್ಲಿ ಇಂಟರ್‌ನೆಟ್ ಹುಚ್ಚು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಬೇಕೆಂಬ ಉದ್ದೇಶದಿಂದ ಚಿತ್ರ ವಿಚಿತ್ರ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ಇಂಟರ್‌ನೆಟ್ ಹುಚ್ಚು ಕೆಲವೊಮ್ಮೆ ಅವರಿಗೆ ತಿರುಗುಬಾಣವಾಗುತ್ತಿದೆ.

ಈ ಹುಚ್ಚು ಯುವಕರಲ್ಲಿ ಮಾತ್ರವಲ್ಲದೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ಅಧಿಕಾರಿಗಳಲ್ಲಿಯೂ ಮನೆ ಮಾಡಿದೆ. ಇದರಿಂದಾಗಿ ಆ ಅಧಿಕಾರಿಗಳು ತಮ್ಮ ಸ್ಥಾನಮಾನ, ಹೆಸರು ಹಾಗೂ ಖ್ಯಾತಿಯನ್ನು ಕಳೆದುಕೊಳ್ಳುವಂತಾಗಿದೆ. ಇದೇ ರೀತಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಕರೋನಾ ವೈರಸ್‌ಗೆ ಯಾವುದೇ ಲಸಿಕೆಯನ್ನು ಕಂಡು ಹಿಡಿದಿಲ್ಲ. ವೈರಸ್ ಹರಡದಂತೆ ತಡೆಯುವುದೇ ಇದಕ್ಕಿರುವ ಮದ್ದು. ಈ ಕಾರಣಕ್ಕೆ ವೈರಸ್ ಹರಡುವುದನ್ನು ತಡೆಯಲು ಫೇಸ್ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇವುಗಳ ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಪೊಲೀಸರೇ ಇವುಗಳನ್ನು ಮರೆತಿದ್ದಾರೆ. ಇತ್ತೀಚಿಗೆ ಉತ್ತರಪ್ರದೇಶದ ಮನೋಜ್ ಕುಮಾರ್ ಸಿಂಗ್ ಎಂಬ ಎಸ್‌ಹೆಚ್‌ಒರವರನ್ನು ಬಾಸ್ಖರಿ ಠಾಣೆಯಿಂದ ಜೈದ್‌ಪುರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ವರ್ಗಾವಣೆಗೊಂಡ ಮನೋಜ್ ಕುಮಾರ್‌ರವರಿಗೆ ಅವರ ಸಹೋದ್ಯೋಗಿಗಳು ಬೀಳ್ಕೊಡುಗೆ ನೀಡಿದರು. ಸಹೋದ್ಯೋಗಿಗಳು ನೀಡಿದ ಬೀಳ್ಕೊಡುಗೆ ಹಾಗೂ ಮನೋಜ್ ಕುಮಾರ್‌ರವರು ನಡೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬಾಸ್ಖರಿ ಠಾಣೆಯಿಂದ ಜೈದ್ಪುರ ಠಾಣೆಗೆ ತೆರಳುವಾಗ ಮನೋಜ್ ಕುಮಾರ್‌ರವರನ್ನು ಪೊಲೀಸ್ ಬೆಂಗಾವಲು ಪಡೆಯಲ್ಲಿ ಕರೆತರಲಾಯಿತು. ಮನೋಜ್ ಕುಮಾರ್‌ರವರು ತೆರೆದ ಜೀಪಿನಲ್ಲಿ ಹೂವಿನ ಹಾರ ಧರಿಸಿ ನಿಂತಿದ್ದರೆ, ಅವರ ಮುಂದೆ ಪೊಲೀಸ್ ಬೈಕ್‌ಗಳು ಚಲಿಸುತ್ತಿದ್ದವು.

ಮನೋಜ್ ಕುಮಾರ್ ಸೇರಿದಂತೆ ಯಾವುದೇ ಪೊಲೀಸರು ಫೇಸ್ ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜೊತೆಯಲ್ಲಿಯೇ ಪೊಲೀಸ್ ವಾಹನಗಳಲ್ಲಿ ಸಾಗಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪೊಲೀಸರು ಹೀಗೆ ಸಾಗುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊ ವೈರಲ್ ಆದ ನಂತರ ಅಂಬೇಡ್ಕರ್‌ನಗರದ ಎಸ್‌ಪಿ ಅಲೋಕ್ ಪ್ರಿಯದರ್ಶಿರವರು ಮನೋಜ್ ಕುಮಾರ್‌ರವರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.

ಕಾನೂನು ಕಾಪಾಡಬೇಕಾದ ಪೊಲೀಸರೇ ಕಾನೂನು ಉಲ್ಲಂಘಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನರು ಈ ವೀಡಿಯೊ ಬಗ್ಗೆ ಪ್ರತಿಕ್ರಿಯೆ ನೀಡಿ ಪೊಲೀಸರ ವರ್ತನೆಯನ್ನು ಖಂಡಿಸುತ್ತಿದ್ದಾರೆ.


Click it and Unblock the Notifications