Vande Bharat: ದಕ್ಷಿಣ ಭಾರತಕ್ಕೆ ಮತ್ತೊಂದು ವಂದೇ ಭಾರತ್ ರೈಲು: ಮಂಗಳೂರಿಗೆ ಭರ್ಜರಿ ಗಿಫ್ಟ್
ಪಾಲಕ್ಕಾಡ್-ದಕ್ಷಿಣ ರೈಲ್ವೆಗೆ ಮಂಜೂರು ಮಾಡಲಾದ ಎರಡನೇ ವಂದೇ ಭಾರತ್ ರೈಲು ಶುಕ್ರವಾರ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ ಮಂಗಳೂರಿಗೆ ಹೊರಟಿರುವುದಾಗಿ ವರದಿಯಾಗಿದೆ. ಈ ರೈಲನ್ನು ಪಾಲಕ್ಕಾಡ್-ದಕ್ಷಿಣ ರೈಲ್ವೆಗೆ ನಿಗದಿಪಡಿಸಲಾದ ವಂದೇ ಭಾರತ್ ರೈಲು ಎನ್ನಲಾಗಿದ್ದು, ಶುಕ್ರವಾರ ಚೆನ್ನೈ ಫ್ಯಾಕ್ಟರಿಯಿಂದ ಹೊರಟು ಮಂಗಳೂರಿಗೆ ತಲುಪಿದೆ.
ಕೇರಳಕ್ಕೆ ರೈಲು ಮಂಜೂರು ಮಾಡಿರುವುದು ದೃಢಪಟ್ಟಿದೆ, ಶುಕ್ರವಾರ ರಾತ್ರಿ 8.42ಕ್ಕೆ ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್) ಪಾಲಕ್ಕಾಡ್ ವಿಭಾಗದ ಎಂಜಿನಿಯರ್‌ಗಳಿಗೆ ಹಸ್ತಾಂತರಿಸಲಾಯಿತು. ರೈಲು ಶನಿವಾರ ಮಂಗಳೂರು ತಲುಪಿದ್ದು, ವಿನ್ಯಾಸದಲ್ಲಿ ಬದಲಾವಣೆಯೊಂದಿಗೆ ಹೊಸ ರೈಲನ್ನು ಮಂಗಳೂರಿಗೆ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೈಲನ್ನು ಪಾಲಕ್ಕಾಡ್ ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದರೂ, ಮಾರ್ಗಗಳು ಇನ್ನೂ ಅಂತಿಮಗೊಂಡಿಲ್ಲ. ವರದಿಗಳ ಪ್ರಕಾರ, ಒಂದು ವಾರದಲ್ಲಿ ಮಾರ್ಗಗಳನ್ನು ಖಚಿತಪಡಿಸಲಾಗುವುದು. ಮಂಗಳೂರು-ತಿರುವನಂತಪುರಂ, ಮಂಗಳೂರು-ಎರ್ನಾಕುಲಂ, ಮಂಗಳೂರು-ಕೊಯಮತ್ತೂರು ಮತ್ತು ಗೋವಾ-ಎರ್ನಾಕುಲಂ ಸೇರಿದಂತೆ ಸಂಭಾವ್ಯ ಮಾರ್ಗಗಳನ್ನು ಪರಿಗಣಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಚೆನ್ನೈನಲ್ಲಿ ವಂದೇ ಭಾರತ್ ಲೋಕೋ ಪೈಲಟ್‌ಗಳಿಗೆ ತರಬೇತಿ ಕೂಡ ಆರಂಭವಾಗಿದೆ. ಮಂಗಳೂರಿನಲ್ಲಿ ಪಿಟ್‌ಲೈನ್ ಕೂಡ ಸ್ಥಾಪಿಸಲಾಗಿದೆ. ಈಗಾಗಲೇ ಸೇವೆಯಲ್ಲಿರುವ ಮೊದಲ ಕೇರಳದ ವಂದೇ ಭಾರತ್ (20634) ತಿರುವನಂತಪುರದಿಂದ ಬೆಳಿಗ್ಗೆ 5:20 ಕ್ಕೆ ಹೊರಟು ಮಧ್ಯಾಹ್ನ 1:20 ಕ್ಕೆ ಕಾಸರಗೋಡು ತಲುಪುತ್ತದೆ. ವರದಿಗಳ ಪ್ರಕಾರ, ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರಿನಿಂದ ಅದೇ ಸಮಯದಲ್ಲಿ ತನ್ನ ಪ್ರಯಾಣವನ್ನು ಪುನರಾರಂಭಿಸುತ್ತದೆ.

ಮಂಗಳೂರಿನಲ್ಲಿ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿರ್ವಹಣಾ ಘಟಕ ತಲೆ ಎತ್ತಲಿದೆ ಎಂದು ಕೂಡ ಹೇಳಲಾಗುತ್ತಿದೆ. ತಿರುವನಂತಪುರಂ - ಮಂಗಳೂರು ನಡುವೆ ಶೀಘ್ರದಲ್ಲೇ ಕಾರ್ಯಚರಣೆ ಶುರುವಾಗುವ ನೀರಿಕ್ಷೆಯಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಮುಖ್ಯವಾಗಿ, ತಿರುವನಂತಪುರಂ-ಕಣ್ಣೂರು ಶತಾಬ್ದಿ (ರೈಲು ಸಂಖ್ಯೆ 12082) ಮತ್ತು ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ (ಗಾಡಿ ಸಂಖ್ಯೆ 16307) ರೈಲುಗಳ ಸಮಯ ಪರಿಷ್ಕರಣೆಯಾಗಿದೆ.
ಮಂಗಳೂರು - ಬೆಂಗಳೂರು ಮಧ್ಯೆ 90 ಕಿಲೋಮೀಟರ್ ವಿದ್ಯುದ್ದೀಕರಣ ಕಾಮಗಾರಿ ಮುಕ್ತಾಯಗೊಂಡ ಬಳಿಕ, ಈ ಮಾರ್ಗದಲ್ಲಿಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟದ ನಡೆಸಲಿದೆ. ಮಂಗಳೂರು - ಗೋವಾ ನಡುವೆಯು ಈ ರೈಲು ಸಂಚರಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಒಪ್ಪಿಗೆ ನೀಡಿದ್ದಾರೆ' ಎಂದು ನಳಿನ್ ಕುಮಾರ್ ಕಟೀಲ್ ಈ ಹಿಂದೆ ತಿಳಿಸಿದ್ದರು.

ಕರ್ನಾಟಕದಲ್ಲಿ ಈಗಾಗಲೇ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವೆ ಓಡಾಡುವ ರೈಲು ಮಂಗಳವಾರ ಹೊರತುಪಡಿಸಿ, ಉಳಿದ ಎಲ್ಲ ದಿನಗಳಲ್ಲಿ ಕಾರ್ಯಚರಣೆ ನಡೆಸುತ್ತಿದೆ. ಮತ್ತೊಂದು ರೈಲು ಚೆನ್ನೈ - ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸಂಚಾರ ಮಾಡುತ್ತಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶದ ರೈಲ್ವೆ ವಲಯದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇವು, ಸಾಮಾನ್ಯ ಎಕ್ಸ್‌ಪ್ರೆಸ್ ಗಳಿಗಿಂತ ಗರಿಷ್ಠ ವೇಗದಲ್ಲಿ ಸಂಚರಿಸುವುದರಿಂದ ನಿಗದಿತ ನಿಲ್ದಾಣವನ್ನು ಒಂದಷ್ಟು ಗಂಟೆ ಬೇಗನೇ ತಲುಪುತ್ತವೆ. ಸ್ವಯಂ ಚಾಲಿತ ಬಾಗಿಲು, ಸಂಪೂರ್ಣ ಎಸಿ ವ್ಯವಸ್ಥೆ ಹೊಂದುವ ಮೂಲಕ ಪ್ರೀಮಿಯಂ ರೈಲು ಎಂಬ ಹೆಗ್ಗಳಿಕೆಗೆ ವಂದೇ ಭಾರತ್ ಪಾತ್ರವಾಗಿವೆ. ಆದರೆ, ಪದೇ - ಪದೇ ಕಲ್ಲು ತೂರಾಟ ಕೇಸ್ ವರದಿಯಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳ ಮೂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications