ಇದೆಂಥಾ ವಿಕೃತಿ! ದೇಶದ ಅನ್ನ ತಿಂದು ಸ್ವದೇಶಿಗರ ಜೀವಕ್ಕೆ ಕುತ್ತು: ವಂದೇ ಭಾರತ್ ಅಪಘಾತಕ್ಕೆ ಸಂಚು
ಉದಯಪುರ - ಜೈಪುರ ಮಾರ್ಗದಲ್ಲಿ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೋಮವಾರ ಅಕ್ಟೋಬರ್ 2 ರಂದು ದೊಡ್ಡ ಅಪಘಾತದಿಂದ ಸ್ವಲ್ಪದರಲ್ಲೆ ಪಾರಾಗಿದೆ. ಕೆಲ ಕಿಡಿಗೇಡಿಗಳು ಅರೆ ಹೈಸ್ಪೀಡ್ ರೈಲಿನ ಮಾರ್ಗಕ್ಕೆ ಕಲ್ಲು ಮತ್ತು ಕಬ್ಬಿಣದ ರಾಡ್‌ಗಳನ್ನು ಹಳಿಗಳ ಮೇಲೆ ನಿಲ್ಲಿಸಿದ್ದರು ಎಂದು ವರದಿಗಳು ತಿಳಿಸಿವೆ.
ವಂದೇ ಭಾರತ್ ಆರಂಭವಾದಾಗಿನಿಂದಲೂ ಹಲವರು ರೈಲಿಗೆ ತೀವ್ರ ವಿರೋಧ ವ್ಯಕ್ತಿಪಡಿಸುತ್ತಿದ್ದಾರೆ. ಆದ್ರೆ ಇದಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ. ರೈಲಿಗೆ ಕಲ್ಲು ಹೊಡೆಯುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈಗ ಹಳಿ ತಪ್ಪಿಸಲು ಮುಂದಾಗಿರುವುದು ಪ್ರಯಾಣಿಕರಲ್ಲಿ ತೀವ್ರ ಭಯವನ್ನು ಹುಟ್ಟಿಸಿದೆ. ಅದೃಷ್ಟಶಾತ್ ವಂದೇ ಭಾರತ್ ಲೊಕೊಮೊಟಿವ್ ಪೈಲಟ್ ಸಮಯಪ್ರಜ್ಞೆ ಮೆರೆದು ಭೀಕರ ದುರಂತವನ್ನು ತಪ್ಪಿಸಿದ್ದಾರೆ.

ರೈಲು ಚಾಲನೆಯಲ್ಲಿದ್ದಾಗ ಲೊಕೊಮೊಟಿವ್ ಪೈಲಟ್ ಅಡಚಣೆಯನ್ನು ಗಮನಿಸಿ ತಕ್ಷಣವೇ ತುರ್ತು ಬ್ರೇಕ್‌ಗಳನ್ನು ಹಾಕಿದ್ದಾರೆ. ಇಳಿದು ಬಂದು ನೋಡಿದ್ರೆ ಯಾರೋ ಬೇಕಂತಲೇ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಚಿತ್ರಿಸಲಾದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೀಡಿಯೊ ಪ್ರಕಾರ, ಗಂಗ್ರಾರ್-ಸೋನಿಯಾನಾ ವಿಭಾಗದ ಟ್ರ್ಯಾಕ್ ಬಳಿ ಘಟನೆ ನಡೆದಿದೆ.
ಟ್ರಾಕ್‌ನಲ್ಲಿ ಕಲ್ಲುಗಳು ಮತ್ತು ಎರಡು ಒಂದು ಅಡಿ ಉದ್ದವಿರುವ ರಾಡ್‌ಗಳನ್ನು ಹಳಿಗಳಿಗೆ ಅಂಟಿಕೊಂಟು ನಿಲ್ಲಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬೆಳಗ್ಗೆ 9:55ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಅವರು ರಾಜಸ್ಥಾನದಲ್ಲಿದ್ದ ದಿನವೇ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಈ ಹಳಿಗಳ ಮೇಲೆ ರೈಲು ಮುಂದುವರೆದಿದ್ದರೇ ತೀವ್ರ ಹಾನಿಯಾಗುತ್ತಿತ್ತು ಎಂದು ಲೊಕೊಪೈಲೆಟ್ ಹೇಳಿದ್ದಾರೆ. ಏಕೆಂದರೆ ಕಲ್ಲುಗಳು ಹಾಗೂ ರಾಡ್‌ಗಳನ್ನು ಹಳಿ ತಪ್ಪಿಸಲೆಂದೇ ಒಂದರಮೇಲೊಂದು ಕಲ್ಲುಗಳನ್ನು ನಿಲ್ಲಿಸಿದ್ದಾರೆ. ಜೊತೆಗೆ ಆ ಸಣ್ಣ ರಾಡ್‌ಗಳು ಭಾರ ಬಿದ್ದರೂ ಅಲುಗಾಡದಂತೆ ಕಲ್ಲುಗಳನ್ನು ಬಿಗಿಯಾಗಿ ಅಕ್ಕಪಕ್ಕದಲ್ಲಿಟ್ಟು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಭಾರೀ ಅನುಹಾತ ತಪ್ಪಿದ್ದು ನೂರಾರು ಪ್ರಯಾಣಿಕರು ಪಾರಾಗಿದ್ದಾರೆ.
ಜೈಪುರ-ಉದಯಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸೆಪ್ಟೆಂಬರ್ 24 ರಂದು ಉದ್ಘಾಟಿಸಿದ್ದರು. ಜೈಪುರ-ಉದಯಪುರ ವಂದೇ ಭಾರತ್ ಎಕ್ಸ್‌ಪ್ರೆಸ್ 435 ಕಿಲೋಮೀಟರ್ ದೂರವನ್ನು ಆರು ಗಂಟೆ 15 ನಿಮಿಷಗಳಲ್ಲಿ ಕ್ರಮಿಸುತ್ತದೆ. ಇದೇ ಮಾರ್ಗದಲ್ಲಿ ಇತರ ಸಾಮಾನ್ಯ ರೈಲುಗಳು ಅದೇ ದೂರವನ್ನು ಕ್ರಮಿಸಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತವೆ.

ಕರ್ನಾಟಕದಲ್ಲೂ ಕಲ್ಲು ತೂರಾಟ: ಜೂನ್ 27 ರಂದು ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಧಾರವಾಡ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದಾವಣಗೆರೆಯಲ್ಲಿ ತೂರಾಟ ನಡೆಸಲಾಗಿತ್ತು. ಕಳೆದ ಫೆಬ್ರವರಿ 25 ರಂದು ಮೈಸೂರು-ಚೆನ್ನೈ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಎರಡು ರೈಲಿನ ಗಾಜುಗಳಿಗೆ ತೀವ್ರ ಹಾನಿಯಾಗಿತ್ತಾದರೂ ಗಾಜು ಮತ್ತು ಕೋಚ್‌ನ ಗುಣಮಟ್ಟದಿಂದಾಗಿ ಪ್ರಾಯಾಣಿಕರಿಗೆ ಯಾವುದೇ ಗಾಯಗಳಾಗಿರಲಿಲ್ಲ.
ಅದಕ್ಕೂ ಮುನ್ನ, ಕಣ್ಣೂರು ಜಿಲ್ಲೆಯಲ್ಲಿ ಮಂಗಳೂರು-ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ನೇತ್ರಾವತಿ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಸದ್ಯ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಕಳೆದ ಐದು ತಿಂಗಳಲ್ಲಿ ಹಾನಿಗೊಳಗಾದ 40 ಕಿಟಕಿ ಹಾಗೂ ಬಾಗಿಲಿನ ಗಾಜುಗಳನ್ನು ಬದಲಾಯಿಸಲಾಗಿದೆ. ಹೆಚ್ಚಾಗಿ ದೆಹಲಿ - ಆಗ್ರಾ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮೇಲೆಯೇ ಬಹುತೇಕ ಕಲ್ಲು ತೂರಾಟಗಳು ನಡೆದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications