Vande Bharat sleeper: ವಂದೇ ಭಾರತ್ ಸ್ಲೀಪರ್ ಫಸ್ಟ್ ಲುಕ್ ರಿವೀಲ್, ಯಾವ 'ಹೋಟೆಲ್ ರೂಮ್'ಗೂ ಕಮ್ಮಿಯಿಲ್ಲ!

ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ಪ್ರೀಮಿಯಂ ಹೈಸ್ವೀಡ್ ರೈಲಾಗಿ ಗುರುತಿಸಿಕೊಂಡಿದೆ. ದೂರದ ನಗರಗಳನ್ನು ಕೆಲವೇ ಗಂಟೆಗಳಲ್ಲಿ ತಲುಪುತ್ತದೆ. ಆದರೆ, ಈ ರೈಲು ಹಗಲಿನಲ್ಲಿ ಮಾತ್ರ ಸಂಚರಿಸುತ್ತದೆ. ರಾತ್ರಿ ಪ್ರಯಾಣ ಅಸಾಧ್ಯ. ಹೀಗಾಗಿ, ವಂದೇ ಭಾರತ್ ಸ್ಲೀಪರ್ (sleeper) ರೈಲುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಬಹುತೇಕ, 2024ರ ಫೆಬ್ರವರಿ ವೇಳೆಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ನಡೆಸುವ ನೀರಿಕ್ಷೆಯಿದ್ದು, ಟ್ವಿಟರ್ ಬಳಕೆರೊಬ್ಬರು ಈ ರೈಲಿನ ಒಳಭಾಗದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ರೈಲು, 857 ಬರ್ತ್‌ಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಪ್ರಯಾಣಿಕರಿಗೆ 823 ಹಾಗೂ ಉಳಿದ 34 ಬರ್ತ್‌ಗಳನ್ನು ರೈಲಿನ ಸಿಬ್ಬಂದಿಗೆ ಮೀಸಲಿಡಲಾಗುತ್ತದೆ. ಪ್ರತಿ ಬೋಗಿಯಲ್ಲಿಯೂ ಮಿನಿ ಪ್ಯಾಂಟ್ರಿ ಇರುತ್ತದೆ' ಎಂದು ಬರೆದುಕೊಂಡಿದ್ದಾರೆ.

Vande Bharat sleeper: ವಂದೇ ಭಾರತ್ ಸ್ಲೀಪರ್ ಫಸ್ಟ್ ಲುಕ್ ರಿವೀಲ್, ಯಾವ ಹೋಟೆಲ್ ರೂಮ್ಗೂ ಕಮ್ಮಿಯಿಲ್ಲ!

ಈ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಭಾರತದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್‌)ಹಾಗೂ ರಷ್ಯಾದ ಟಿಎಂಹೆಚ್ ಗ್ರೂಪ್‌ನ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇವೆರೆಡು, ಕಂಪನಿಗಳು ಒಟ್ಟು, 200 ರೈಲುಗಳಲ್ಲಿ 120 ರೈಲುಗಳನ್ನು ಸ್ಲೀಪರ್ ರೈಲುಗಳನ್ನು ಪೂರೈಸಲಿವೆ. ಇನ್ನುಳಿದ 80 ರೈಲುಗಳನ್ನು ಟಿಟಾಗಢ್ ವ್ಯಾಗನ್ಸ್ ಮತ್ತು ಬಿಎಚ್‌ಇಎಲ್‌ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿದೆ ಎಂದು ಟ್ವಿಟರ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ಸದ್ಯ, ನೂತನ ವಂದೇ ಭಾರತ್ ಸ್ಲೀಪರ್ ರೈಲಿನ ಒಳಭಾಗದ ಚಿತ್ರಗಳನ್ನು ಗಮನಿಸಿದಾಗ ಯಾವ 5 ಸ್ಟಾರ್ ಹೋಟೆಲ್ ಗೂ ಕಮ್ಮಿಯಿಲ್ಲವೆಂಬಂತೆ ಭಾಸವಾಗುತ್ತಿದೆ. ಇದು, ದೂರದ ಊರುಗಳಿಗೆ ತೆರಳುವವರಿಗೆ ರಾತ್ರಿಯಿಡೀ ಆರಾಮದಾಯಕ ಪ್ರಯಾಣವನ್ನು ಒದಗಿಸಲು ನೆರವಾಗುತ್ತದೆ. ಜೊತೆಗೆ, ಹೈಸ್ಪೀಡ್ ರೈಲು ಇದಾಗಿರುವುದರಿಂದ ಪ್ರಯಾಣಿಕರಿಗೆ ನಿರ್ದಿಷ್ಟ ಗಮ್ಯಸ್ಥಾನವನ್ನು ಸಾಮಾನ್ಯ ರೈಲುಗಳಿಗಿಂತ ಬೇಗನೇ ತಲುಪಿಸುತ್ತದೆ.

Vande Bharat sleeper: ವಂದೇ ಭಾರತ್ ಸ್ಲೀಪರ್ ಫಸ್ಟ್ ಲುಕ್ ರಿವೀಲ್, ಯಾವ ಹೋಟೆಲ್ ರೂಮ್ಗೂ ಕಮ್ಮಿಯಿಲ್ಲ!

ವಿಶ್ವದರ್ಜೆಯ ಮೂಲ ಸೌಕರ್ಯಗಳಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಫೆಬ್ರವರಿ 15, 2019ರಂದು ಮೊದಲಿಗೆ ನವದೆಹಲಿ - ವಾರಣಾಸಿ ನಡುವೆ ಸಂಚಾರವನ್ನು ಶುರು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿದ್ದರು. ಪ್ರಸ್ತುತ ಕರ್ನಾಟಕ ಸೇರಿದಂತೆ ದೇಶದಲ್ಲಿ ಹಲವು ರಾಜ್ಯಗಳಲ್ಲಿ ಈ ರೈಲು ಕಾರ್ಯಚರಣೆ ನಡೆಸಿಸುತ್ತಿದ್ದು, ಗಂಟೆಗೆ 180 ಕಿಮೀ ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಆದರೆ, ಸುರಕ್ಷತೆಯ ದೃಷ್ಟಿಯಿಂದ ಗಂಟೆಗೆ 110, 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲಿವೆ. ಈ ರೈಲು, ಆರಾಮದಾಯಕ ಸೀಟುಗಳು, ದೊಡ್ಡದಾದ ಕಿಟಕಿ, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ ಹಾಗೂ ಎಸಿ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇನ್ನು, ಕರ್ನಾಟಕಲ್ಲಿ ಈಗಾಗಲೇ ಮೂರು ಮಾರ್ಗದಲ್ಲಿ ವಂದೇ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ ನಡೆಸುತ್ತಿದೆ. ಮೊದಲನೆಯದು ಮೈಸೂರು - ಬೆಂಗಳೂರು - ಚೆನ್ನೈ, ಎರಡನೆಯದು, ಬೆಂಗಳೂರು - ಧಾರವಾಡ. ಮೂರನೆಯದು ತೀರಾ ಇತ್ತೀಚೆಗೆ ಆರಂಭಗೊಂಡ ಬೆಂಗಳೂರು - ಕಾಚಿಗುಡ. ಕೆಲವೇ ದಿನಗಳಲ್ಲಿ ಬೆಂಗಳೂರು - ಮಂಗಳೂರು ಮಧ್ಯೆಯೂ ಸಂಚಾರ ಪ್ರಾರಂಭವಾಗುವ ಸಾಧ್ಯತೆಯಿದೆ.

ದೇಶದಲ್ಲಿ ವಂದೇ ಭಾರತ್ ಸ್ಲೀಪರ್ ಕಾರ್ಯಚರಣೆಯನ್ನು ಮುಂದಿನ ವರ್ಷದ ಆರಂಭದಲ್ಲಿ ಶುರು ಮಾಡುವುದರಿಂದ ದೂರದ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ದೊಡ್ಡಮಟ್ಟದ ಅನುಕೂಲವಾಗಲಿದ್ದು, ಅವರ ಸಮಯವು ಉಳಿತಾಯವಾಗುತ್ತದೆ. ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಈ ರೈಲು ಎಷ್ಟು ಅತ್ಯಾಧುನಿಕವಾಗಿದೆ ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಎಲ್ಲದಕ್ಕೂ ಕೆಲವೇ ತಿಂಗಳಲ್ಲಿ ತೆರೆ ಬೀಳಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 3, 2023, 13:10 [IST]
English summary
Vande bharat sleeper first look reveal details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+