Vande Bharat Sleeper: ವಂದೇ ಭಾರತ್ ಸ್ಲೀಪರ್ ಶೀಘ್ರ ಹಳಿಗೆ, ವಿಮಾನದಂತೆ ಸೌಕರ್ಯ!

ಕರ್ನಾಟಕವು ಸೇರಿದಂತೆ ದೇಶಾದ್ಯಂತ ಕಾರ್ಯಚರಣೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಖ್ಯಾತಿಗಳಿಸಿದೆ. ಆದರೆ ಈ ರೈಲುಗಳಲ್ಲಿ ಕುಳಿತುಕೊಂಡು ದೂರದ ಊರುಗಳಿಗೆ ರಾತ್ರಿ ವೇಳೆ ಪ್ರಯಾಣಿಸುವುದು ಅಸಾಧ್ಯವಾಗಿದೆ. ಆ ಕಾರಣಕ್ಕೆ ರೈಲ್ವೆ ಇಲಾಖೆ 'ವಂದೇ ಭಾರತ್ ಸ್ಲೀಪರ್' ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಮೊದಲ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲು ಫೆಬ್ರವರಿ (2024)ಯಿಂದ ಸಂಚರಿಸುವ ನೀರಿಕ್ಷೆಯಿದೆ. ಯಾವುದೇ ವಿಮಾನಗಳಿಗೆ ಕಮ್ಮಿಯಿಲ್ಲದಂತೆ ವಿಶ್ವ ದರ್ಜೆಯ ಸೌಕರ್ಯವನ್ನು ಹೊಂದಿರುವ ಈ ರೈಲುಗಳು, ರಾಜಧಾನಿ ಎಕ್ಸ್‌ಪ್ರೆಸ್ (Rajdhani Express)ಗಳಿಗೆ ಪರ್ಯಾಯವಾಗಲಿವೆ ಎಂದು ಹೇಳಲಾಗಿದೆ. 'ವಂದೇ ಭಾರತ್ ಸ್ಲೀಪರ್' ಹೇಗಿರಲಿದೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

Vande Bharat Sleeper: ವಂದೇ ಭಾರತ್ ಸ್ಲೀಪರ್ ಶೀಘ್ರ ಹಳಿಗೆ, ವಿಮಾನಂತಹ ಸೌಕರ್ಯ!

ಬಹುನೀರಿಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸದ್ಯ ತಯಾರಿಕೆ ಹಂತದಲ್ಲಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (Integral Coach Factory - ICF) ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (Bharat Earth Movers Limited - BEML) ಉತ್ಪಾದನಾ ಘಟಕದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ರೈಲಿಗೆ ಅತ್ಯಾಧುನಿಕ ಸ್ಪರ್ಶವನ್ನು ನೀಡಲಾಗುತ್ತಿದೆ.

ಈ ವಂದೇ ಭಾರತ್ ಸ್ಲೀಪರ್ ಹತ್ತಿರ ಹಾಗೂ ದೂರದ ಪ್ರಯಾಣಗಳಿಗೆ ಹೆಚ್ಚು ಸೂಕ್ತವಾಗಿದ್ದು, 16 ಕೋಚ್ ಗಳನ್ನು ಒಳಗೊಂಡಿರಲಿದೆ. 1 ಫಸ್ಟ್ ಎಸಿ (ಹವಾನಿಯಂತ್ರಿತ) ಕೋಚ್, 4 ಸೆಕೆಂಡ್ ಎಸಿ ಕೋಚ್ ಉಳಿದಂತೆ ಥರ್ಡ್ ಎಸಿ ಕೋಚ್ ಗಳು ಇರಲಿವೆ. ಒಟ್ಟು 823 ಬರ್ತ್‌ಗಳನ್ನು ಒಳಗೊಂಡಿರಲಿದ್ದು, ಸಾರ್ವಜನಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದು.

Vande Bharat Sleeper: ವಂದೇ ಭಾರತ್ ಸ್ಲೀಪರ್ ಶೀಘ್ರ ಹಳಿಗೆ, ವಿಮಾನಂತಹ ಸೌಕರ್ಯ!

ವಂದೇ ಭಾರತ್ ಸ್ಲೀಪರ್ ಸುಲಭ ಪ್ರಯಾಣವನ್ನು ಒದಗಿಸುವುದರೊಂದಿಗೆ ಗರಿಷ್ಠ ವೇಗದಲ್ಲಿಯೂ ಸಂಚಾರಿಸುತ್ತದೆ. ಈ ರೈಲು ಗಂಟೆಗೆ 160 ವೇಗದಲ್ಲಿ ಸಂಚಾರಿಸುವ ಸಾಮರ್ಥ್ಯ ಹೊಂದಿರಲಿದ್ದು, ಇದರಿಂದ ಪ್ರಯಾಣಿಕರು ಬೇಗನೇ ತಮ್ಮ ಗಮ್ಯ ಸ್ಥಾನವನ್ನು ತಲುಪಬಹುದು. ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇಂಟರ್ ಕಮ್ಯುನಿಕೇಷನ್ ಡೋರ್ ಹೊಂದಿರುವುದರೊಂದಿಗೆ ಆಟೋಮೆಟಿಕ್ ಡೋರ್ ಅನ್ನು ಪಡೆದಿದೆ.

ಈ ವಂದೇ ಭಾರತ್ ಸ್ಲೀಪರ್ ಉತ್ತಮ ಗುಣಮಟ್ಟದ ಆಸನಗಳನ್ನು ಹೊಂದಿದ್ದು, ರಾತ್ರಿ ವೇಳೆ ಸುಖಕರವಾಗಿ ನಿದ್ರಿಸುತ್ತಾ ಪ್ರಯಾಣಿಸಬಹುದು. ಇದು ವಾಸನೆ ಮುಕ್ತ ಶೌಚಾಲಯ (Odor-Free Toilet Facilities), ಮೊದಲ ದರ್ಜೆಯ ಎಸಿ ಕೋಚ್ ನಲ್ಲಿ ಬಿಸಿನೀರಿನ (Hot Water) ಶವರ್ ಹಾಗೂ ಶಬ್ದ ನಿರೋಧಕ ವ್ಯವಸ್ಥೆ ಹೊಂದಿರುವ ಸಾಧ್ಯತೆಯಿದೆ. ಇದಕ್ಕೆ ತಕ್ಕಂತೆ ಟಿಕೆಟ್ ದರವೂ ಸ್ವಲ್ಪ ಅಧಿಕವಿರಬಹುದು.

Vande Bharat Sleeper: ವಂದೇ ಭಾರತ್ ಸ್ಲೀಪರ್ ಶೀಘ್ರ ಹಳಿಗೆ, ವಿಮಾನಂತಹ ಸೌಕರ್ಯ!

ಪ್ರಧಾನಿ ನರೇಂದ್ರ ಮೋದಿ ಅವರು, ಡಿ.30 ರಂದು ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಮಾಲ್ಡಾ - ಬೆಂಗಳೂರು ಮತ್ತು ದೆಹಲಿ - ಅಯೋಧ್ಯೆ - ದರ್ಬಂಗಾ ಮಧ್ಯೆ ಸಂಚರಿಸುವ 2 ಅಮೃತ್ ಭಾರತ್ (Amrit Bharat) ರೈಲುಗಳಿಗೆ ಚಾಲನೆ ನೀಡಿದ್ದರು. ಈ ರೈಲಿನಲ್ಲಿ ಪ್ರಯಾಣಿಕರು ಕಡಿಮೆ ಖರ್ಚಿನಲ್ಲಿ ಆರಾಮದಾಯವಾಗಿ ಸಂಚರಿಸಬಹುದು.

ಅಮೃತ್ ಭಾರತ್ ರೈಲಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಒಟ್ಟು 22 ಕೋಚ್‌ಗಳನ್ನು ಹೊಂದಿರುವ ಈ ರೈಲುಗಳು ದೂರದ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿವೆ. ಗಂಟೆಗೆ 130 ಕಿಮೀ ವೇಗದಲ್ಲಿ ಸಂಚರಿಸಲಿದ್ದು, ಮುಂಭಾಗ-ಹಿಂಭಾಗ ಎಂಜಿನ್ ಒಳಗೊಂಡಿದೆ. ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್‌ ಮತ್ತು ಕಾಯ್ದಿರಿಸದ ಕೋಚ್‌ಗಳನ್ನು ಹೊಂದಿದ್ದು, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ಎಲ್‌ಇಡಿ ಲೈಟ್ ಸೇರಿದಂತೆ ಅತ್ಯಾಧುನಿಕ ಸೌಕರ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 17:04 [IST]
English summary
Vande bharat sleeper launched soon know more about features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+