ವಂದೇ ಭಾರತ್ ಸ್ಲೀಪರ್ ರೈಲು ಈ ಮಾರ್ಗಗಳಲ್ಲಿ ಸಂಚಾರ, ಎಲ್ಲಿ..? ವಿಮಾನದಂತಹ ಸೌಕರ್ಯ..!

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ಪ್ರೀಮಿಯಂ ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಪ್ರಯಾಣಿಕರಿಂದಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ರೈಲು ಚೇರ್‌ಕಾರ್‌ ಆಗಿರುವುದರಿಂದ ರಾತ್ರಿ ಸಂಚಾರ ಅಸಾಧ್ಯವಾಗಿದೆ. ಇದರಿಂದ ರೈಲ್ವೆ ಇಲಾಖೆಯು ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲನ್ನು ಅಭಿವೃದ್ಧಿಪಡಿಸುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದ್ದು, ನೂತನ 'ವಂದೇ ಭಾರತ್ ಸ್ಲೀಪರ್' ಮುಂಬರುವ ಕೆಲವೇ ದಿನಗಳಲ್ಲಿ ಹಳಿಗೆ ಬರುವ ಸಾಧ್ಯತೆಯಿದೆ.

ಸದ್ಯ ದೊರೆತ್ತಿರುವ ಮಾಹಿತಿ ಪ್ರಕಾರ, ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳು ದೆಹಲಿ-ಮುಂಬೈ (Delhi-Mumbai), ದೆಹಲಿ-ಕೋಲ್ಕತ್ತಾ (Delhi-kolkata) ಮಾರ್ಗದಲ್ಲಿ ಓಡಾಟವನ್ನು ಆರಂಭಿಸುವ ನಿರೀಕ್ಷೆಯಿದೆ. ಆದಾಗ್ಯೂ ಈ ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಭವಿಷ್ಯದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ಗಳಿಗೆ ಪರ್ಯಾಯವಾಗಲಿರುವ ಈ ರೈಲುಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ತಯಾರಿಕಾ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ.

Vande Bharat Sleeper Soon Starts This Routes Details

ನೂತನ ವಂದೇ ಭಾರತ್ ಸ್ಲೀಪರ್ ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸುವ ಸಾಧ್ಯತೆಯಿದ್ದು, ಇದರ ಹೊರಭಾಗದ ವಿನ್ಯಾಸ ಬಹುತೇಕ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹೋಲಿಕೆಯಾಗಲಿದೆ ಎನ್ನಲಾಗಿದೆ. ಈ ರೈಲು ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಲು 823 ಬರ್ತ್‌ಗಳನ್ನು ಪಡೆದಿರಲಿದೆ ಎಂದು ಹೇಳಲಾಗಿದೆ.

ಈ ರೈಲಿನಲ್ಲಿ ಪ್ರಯಾಣಿಕರಿಗೆ ವಿಮಾನದಂತಹ ಸೌಕರ್ಯವನ್ನು ಕಲ್ಪಿಸಲಾಗುತ್ತದೆ. ಆಹಾರ ಹಾಗೂ ಕುಡಿಯುವ ನೀರನ್ನು ಒದಗಿಸಲು ಪ್ಯಾಂಟ್ರಿ ವ್ಯವಸ್ಥೆ ಇರಲಿದೆ. ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು, ವಾಸನೆ ಮುಕ್ತ ಶೌಚಾಲಯವನ್ನು ಒಳಗೊಂಡಿರಲಿದೆ. ಪ್ರಯಾಣಿಕರು ಸುಖಕರವಾಗಿ ನಿದ್ರಿಸುತ್ತಾ ತಮ್ಮೂರಿಗೆ ತೆರಳಲು ಆರಾಮದಾಯಕ ಸ್ಲೀಪರ್ ಬರ್ತ್ ಹೊಂದಿರಲಿದ್ದು, ಕೋಚ್‌ಗಳು ಸಂಪೂರ್ಣವಾಗಿ ಶಬ್ದ ನಿರೋಧಕವಾಗಿರಲಿವೆ ಎಂದು ತಿಳಿದುಬಂದಿದೆ.

Vande Bharat Sleeper Soon Starts This Routes Details

ರೈಲ್ವೆ ಇಲಾಖೆಯು ಸಮೀಪದ ನಗರಗಳನ್ನು ಸಂಪರ್ಕಿಸಲು ವಂದೇ ಭಾರತ್ ಮೆಟ್ರೋವನ್ನು ಅಭಿವೃದ್ದಿಪಡಿಸುತ್ತದೆ. ಈ ರೈಲುಗಳು ಕಾನ್ಪುರ-ಲಕ್ನೋ, ದೆಹಲಿ-ಮೀರತ್, ಮುಂಬೈ-ಲೋನಾವಲಾ, ವಾರಣಾಸಿ-ಪ್ರಯಾಗರಾಜ್, ಪುರಿ-ಭುವನೇಶ್ವರ ಹಾಗೂ ಆಗ್ರಾ-ಮಥುರಾ ನಡುವೆ ಕಾರ್ಯಾಚರಣೆಯನ್ನು ನಡೆಸುವ ಸಾಧ್ಯತೆಯಿದೆ. ಪ್ರತಿ ಕೋಚ್‌ನಲ್ಲಿ 250 ಜನರು ಸುಲಭವಾಗಿ ಪ್ರಯಾಣಿಸಬಹುದು ಎನ್ನಲಾಗಿದೆ.

ವಿಶ್ವದ ಅತಿ ಎತ್ತರದ ಸೇತುವೆ ಮೇಲೆ ರೈಲು ಸಂಚಾರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಸೇತುವೆ ಮೇಲೆ ಗುರುವಾರ 'ಮೆಮೊ' ರೈಲು ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿದೆ. ಸಂಗಲ್ದಾನ್‌-ರಿಯಾಸಿ ಮಾರ್ಗದಲ್ಲಿ ಈ ಸೇತುವೆ ಬರಲಿದ್ದು, ಉಧಂಪುರ- ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಭಾಗವಾಗಿ ನಿರ್ಮಾಣ ಮಾಡಲಾಗಿದೆ.

ಈ ಸೇತುವೆಯನ್ನು ಚೆನಾಬ್ ನದಿಯ ಮೇಲೆ 359 ಮೀಟರ್ (ಸುಮಾರು 109 ಅಡಿ) ಎತ್ತರದಲ್ಲಿ ಉಕ್ಕಿನಿಂದ ಕಟ್ಟಲಾಗಿದ್ದು, ಐಫೆಲ್ ಟವರ್‌ಗಿಂತ ಸುಮಾರು 35 ಮೀಟರ್ ಎತ್ತರವಿದೆ. ಜೂನ್ 30ರಂದು ಸಂಗಲ್ದಾನ್‌ ಮತ್ತು ರಿಯಾಸಿ ನಡುವೆ ಮೊದಲು ರೈಲು ತನ್ನ ಸಂಚಾರವನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಹೇಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, June 21, 2024, 17:41 [IST]
English summary
Vande bharat sleeper soon starts this routes details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+