ವಿಮಾನಕ್ಕೆ ಸೆಡ್ಡುಹೊಡೆಯುವ ಫೀಚರ್ಸ್: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು!

ಭಾರತೀಯ ರೈಲ್ವೆಗೆ ಹೊಸ ಅಂದವನ್ನು ಸೇರಿಸಿದ ವಂದೇ ಭಾರತ್ ರೈಲುಗಳು ಯಶಸ್ವಿಯಾಗಿ ಮುನ್ನುಗ್ಗುತ್ತಿವೆ. ದೇಶಿಯವಾಗಿ ನಿರ್ಮಾಣಗೊಂಡು ಅಂತರಾಷ್ಟ್ತೀಯ ಮಟ್ಟದ ರೈಲುಗಳ ಗುಣಮಟ್ಟದೊಂದಿಗೆ ಪೈಪೋಟಿ ನೀಡುತ್ತಿವೆ. ಈ ಯಶಸ್ಸನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಭಾರತೀಯ ರೈಲ್ವೆ ನವೆಂಬರ್‌ನಲ್ಲಿ ವಂದೇ ಭಾರತ್ ಸ್ಲೀಪರ್‌ನ ಮೊದಲ ಮೂಲಮಾದರಿಯನ್ನು ಪರೀಕ್ಷಿಸಲಿದೆ. ಈ ಹೊಸ ರೈಲು ಮಾದರಿಯು ರಾಜಧಾನಿ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಉತ್ತಮ ವೇಗ, ಆರಾಮ ಮತ್ತು ಸುರಕ್ಷತೆಯೊಂದಿಗೆ ರಾತ್ರಿಯ ಸುಗಮ ಪ್ರಯಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಮುಂಬರಲಿರುವ ಸ್ಲೀಪರ್ ರೈಲಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 160 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿರಲಿದ್ದು, ದೂರದ ಸ್ಥಳಗಳಿಗೆ ಕಡಿಮೆ ಪ್ರಯಾಣದ ಸಮಯವನ್ನು ಹೊಂದಿರುತ್ತವೆ. ರೈಲು ಸಂಪೂರ್ಣವಾಗಿ ಸೀಲ್ ಮಾಡಿದ ಗ್ಯಾಂಗ್ವೇಗಳನ್ನು ಸಹ ಹೊಂದಿದೆ, ಧೂಳು ಮುಕ್ತ ವಾತಾವರಣ ಮತ್ತು ಪರಿಣಾಮಕಾರಿ ಹವಾನಿಯಂತ್ರಣವನ್ನು ಖಚಿತಪಡಿಸುತ್ತದೆ.

vande-bharat-sleeper-top-things-you-should-know

ರೈಲಿನ ಬದಿಯ ಗೋಡೆಗಳು, ರೂಫ್, ಕೊನೆಯ ಗೋಡೆಗಳು ಸೇರಿದಂತೆ ನೆಲದ ಹಾಳೆಗಳು ಮತ್ತು ಕ್ಯಾಬ್ ಅನ್ನು ಆಸ್ಟೆನಿಟಿಕ್ ಸ್ಟೀಲ್‌ನಿಂದ ತಯಾರಿಸಲಾಗಿದೆ, ಇದು ಧೀರ್ಘ ಬಾಳಿಕೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ. ರೈಲು ಚಾಲಕನಿಂದ ನಿಯಂತ್ರಿಸಲ್ಪಡುವ ಆಟೋಮ್ಯಾಟಿಕ್ ಎಂಟ್ರಿ ಮತ್ತು ಎಕ್ಸಿಟ್ ಡೋರ್‌ಗಳನ್ನು ಹೊಂದಿರುತ್ತದೆ. ಹೆಚ್ಚುವರಿ ಪ್ರಯಾಣಿಕರ ಅನುಕೂಲಕ್ಕಾಗಿ ಬೋಗಿಗಳ ನಡುವೆ ಆಟೋಮ್ಯಾಟಿಕ್ ಇಂಟರ್ ಲಿಂಕ್ ಡೋರ್‌ಗಳನ್ನು ಹೊಂದಿದೆ.

ಭಾರತೀಯ ರೈಲ್ವೆಯ ಪ್ರಕಾರ, ಹೊಸ ರೈಲಿನಲ್ಲಿನ ಬೆರ್ತ್‌ಗಳು ಉತ್ತಮ ನಿದ್ರೆಯ ಆರಾಮಕ್ಕಾಗಿ ಸುಧಾರಿತ ಕುಶನ್‌ನೊಂದಿಗೆ ಬರುತ್ತವೆ. ಹೆಚ್ಚುವರಿಯಾಗಿ, ಏಣಿಗಳು ಮೇಲಿನ ಮತ್ತು ಮಧ್ಯದ ಬೆರ್ತ್‌ಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತವೆ. ಹಾಗೆಯೇ ವಂದೇ ಭಾರತ್ ಸ್ಲೀಪರ್ ರೈಲು ಸುಗಮ ಮತ್ತು ಜರ್ಕ್ ಮುಕ್ತ ಸವಾರಿ ಅನುಭವವನ್ನು ನೀಡುತ್ತದೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.

vande-bharat-sleeper-top-things-you-should-know

ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಟಚ್-ಫ್ರೀ ಫಿಟ್ಟಿಂಗ್‌ಗಳೊಂದಿಗೆ ಜೈವಿಕ ನಿರ್ವಾತ (Biological vacuum) ಶೌಚಾಲಯ ವ್ಯವಸ್ಥೆ ಮತ್ತು ಎಸಿ 1 ನೇ ಬೋಗಿಯಲ್ಲಿ ಶವರ್ ಕ್ಯೂಬಿಕಲ್ ಅನ್ನು ಒಳಗೊಂಡಿದೆ. ರಾಜಧಾನಿ ಎಕ್ಸ್ಪ್ರೆಸ್‌ಗಿಂತ ಭಿನ್ನವಾಗಿ, ವಂದೇ ಭಾರತ್ ಸ್ಲೀಪರ್ ಸ್ವಯಂ ಚಾಲಿತ ರೈಲಿಗೆ ಲೋಕೋಮೋಟಿವ್ ಅಗತ್ಯವಿಲ್ಲ. ಇದು ಎರಡೂ ತುದಿಗಳಲ್ಲಿ ಚಾಲಕ ಕ್ಯಾಬಿನ್ ಗಳನ್ನು ಹೊಂದಿದೆ, ನಿಲ್ದಾಣಗಳಲ್ಲಿ ತಿರುಗುವ ಸಮಯವನ್ನು ಕಡಿಮೆ ಮಾಡುತ್ತದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, "ಅಗ್ನಿ ಸುರಕ್ಷತಾ ಮಾನದಂಡಗಳ ವಿಷಯದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ರಾಜಧಾನಿ ರೈಲುಗಳಿಗಿಂತ ಉತ್ತಮವಾಗಿರುತ್ತದೆ. ಇದರ ಮೂಲಮಾದರಿಯು 16 ಬೋಗಿಗಳನ್ನು ಒಳಗೊಂಡಿದೆ. ಒಂದು ಎಸಿ ಪ್ರಥಮ ದರ್ಜೆ ಬೋಗಿ, ನಾಲ್ಕು ಎಸಿ 2-ಟೈರ್ ಬೋಗಿಗಳು ಮತ್ತು ಹನ್ನೊಂದು ಎಸಿ 3-ಟೈರ್ ಬೋಗಿಗಳು, ಒಟ್ಟು 823 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ.

vande-bharat-sleeper-top-things-you-should-know

ರೈಲು ಸುಧಾರಿತ ಪ್ರಯಾಣಕ್ಕಾಗಿ ವಿಭಿನ್ನ ಜೋಡಿಗಳನ್ನು ಮತ್ತು ಆಪ್ಟಿಮೈಸ್ಡ್ ವಿನ್ಯಾಸವನ್ನು ಹೊಂದಿದೆ. ಇದು ಕ್ರ್ಯಾಶ್ ಬಫರ್ ಗಳು ಮತ್ತು ವಿರೂಪಗೊಳಿಸುವ ಟ್ಯೂಬ್ ಗಳನ್ನು ಒಳಗೊಂಡಂತೆ ಉತ್ತಮ ಸುರಕ್ಷತಾ ಕ್ರಮಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ರೈಲು ಇಎನ್ 45545 ಎಚ್ ಎಲ್ 3 ಅಗ್ನಿ ಸುರಕ್ಷತಾ ಮಾನದಂಡವನ್ನು ಪೂರೈಸುತ್ತದೆ, ಹೆಚ್ಚುವರಿ ರಕ್ಷಣೆಗಾಗಿ ಫೈರ್ ಬ್ಯಾರಿಯರ್ ಗೋಡೆಯನ್ನು ಒಳಗೊಂಡಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 28, 2024, 13:12 [IST]
English summary
Vande bharat sleeper top things you should know
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+