ಮುತ್ತಿನ ನಗರಿಯಿಂದ ಇಲ್ಲಿಗೆ ವಂದೇ ಭಾರತ್ ಸ್ಲೀಪರ್ ಸಂಚಾರ.. ತುಂಬಾ ಕಡಿಮೆ ಸಮಯದಲ್ಲಿ ಹೋಗಬಹುದು!

ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈ-ಸ್ವೀಡ್ ರೈಲಾಗಿ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೆ ಇಲಾಖೆಯು ದೂರದ ಊರುಗಳಿಗೆ ಸಾರ್ವಜನಿಕರು ಆರಾಮದಾಯಕವಾಗಿ ಪ್ರಯಾಣಿಸಲು ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ಕೂಡ ತಯಾರಿಸುತ್ತಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ಈ ರೈಲುಗಳು ಹಳಿಗೆ ಬರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಪುಣೆ ಹಾಗೂ ತೆಲಂಗಾಣದ ಸಿಕಂದರಾಬಾದ್ (ಹೈದರಾಬಾದ್) ಮಾರ್ಗದಲ್ಲಿಯೂ ವಂದೇ ಭಾರತ್ ಸ್ಲೀಪರ್ ಸಂಚರಿಸಬಹುದು ಎನ್ನಲಾಗಿದೆ.

ಸದ್ಯ ಪುಣೆ (Pune) - ಸಿಕಂದರಾಬಾದ್ (Secunderabad) ಮಾರ್ಗದಲ್ಲಿ ಓಡಾಡುತ್ತಿರುವ ಶತಾಬ್ದಿ ಎಕ್ಸ್‌ಪ್ರೆಸ್ ಬದಲಿಗೆ ವಂದೇ ಭಾರತ್ ಸ್ಲೀಪರ್‌ನ್ನು ಬಿಡಬಹುದು ಎಂದು ವರದಿಯಾಗಿದೆ. ನೂತನ ರೈಲು, ಶತಾಬ್ದಿಗಿಂತ ಒಂದು ಗಂಟೆ ಮುಂಚಿತವಾಗಿ ಸಂಚರಿಸಲಿದೆ ಎಂದು ತಿಳಿದುಬಂದಿದೆ. ಆದಾಗ್ಯೂ ಈ ವಂದೇ ಭಾರತ್ ಸ್ಲೀಪರ್ ಎಂದಿನಿಂದ ಕಾರ್ಯಾಚರಣೆಯನ್ನು ಶುರು ಮಾಡಲಿದೆ ಎಂಬುದರ ಕುರಿತಂತೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

Vande Bharat Sleeper Train Run Secunderabad To Pune Low Journey Time

ಪುಣೆ - ಸಿಕಂದರಾಬಾದ್ ನಡುವೆ ಸಂಚರಿಸುತ್ತಿರುವ ಶತಾಬ್ದಿ ಎಕ್ಸ್‌ಪ್ರೆಸ್, ಬೆಳಗ್ಗೆ 6 ಗಂಟೆಗೆ ಪುಣೆ ಜಂಕ್ಷನ್‌ನಿಂದ ಹೊರಡಲಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿಕಂದರಾಬಾದ್ ಜಂಕ್ಷನ್‌ನ್ನು ತಲುಪಲಿದ್ದು, ಪ್ರಯಾಣದ ಅವಧಿಯು 8.20 ಗಂಟೆಯಿದೆ. ಮಾರ್ಗ ಮಧ್ಯೆ ಸೊಲ್ಲಾಪುರ, ಕಲಬುರಗಿ, ವಾಡಿ, ತಾಂಡೂರ್, ವಿಕಾರಾಬಾದ್, ಬೇಗಂಪೇಟ್ ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. ಸಿಕಂದರಾಬಾದ್ ಜಂಕ್ಷನ್‌ನಿಂದ ಮಧ್ಯಾಹ್ನ 2.45ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ರಾತ್ರಿ 11.10ಕ್ಕೆ ಪುಣೆಗೆ ಹೋಗುತ್ತದೆ.

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಿಕಾ ಘಟಕದಲ್ಲಿ ಈ ವಂದೇ ಭಾರತ್ ಸ್ಲೀಪರ್‌ ರೈಲನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವು ಯಾವುದೇ ವಿಮಾನಗಳಿಗೆ ಕಮ್ಮಿಯಿಲ್ಲದಂತಹ ಅತ್ಯುತ್ತಮ ವಿಶ್ವದರ್ಜೆಯ ಸೌಕರ್ಯಗಳನ್ನು ಪ್ರಯಾಣಿಕರಿಗೆ ಒದಗಿಸಲಿದ್ದು, ರಾಜಧಾನಿ ಎಕ್ಸ್‌ಪ್ರೆಸ್‌ಗಳಿಗೆ ಪರ್ಯಾಯವಾಗಲಿವೆ ಎಂದು ಹೇಳಲಾಗಿದೆ.

Vande Bharat Sleeper Train Run Secunderabad To Pune Low Journey Time

ಹೊಸ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಕೋಚ್‌ಗಳನ್ನು ಒಳಗೊಂಡಿರಲಿದೆ. ಅದರಲ್ಲಿ 11 ಎಸಿ 3-ಟೈರ್ ಕೋಚ್‌ಗಳು, 4 ಎಸಿ 2-ಟೈರ್ ಕೋಚ್‌ಗಳು ಹಾಗೂ1 ಎಸಿ ಮೊದಲ ದರ್ಜೆಯ ಕೋಚ್ ಇರಲಿದೆ. ಎಲ್ಲವು ಸೇರಿ 823 ಬರ್ತ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ. ಹಾಗೆಯೇ ಗಂಟೆಗೆ 160 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಬಹುದು. ಸ್ವಯಂ ಚಾಲಿತ ಬಾಗಿಲು ಹಾಗೂ ವಾಸನೆ ಮುಕ್ತ ಶೌಚಾಲಯಗಳನ್ನು ಹೊಂದಿರಬಹುದು ಎನ್ನಲಾಗಿದೆ.

ರೈಲ್ವೆ ಇಲಾಖೆಯು ಹತ್ತಿರದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ವಂದೇ ಭಾರತ್ ಮೆಟ್ರೋ (Vande Bharat Metro) ರೈಲುಗಳು ಕೂಡ ತಯಾರಿಸುತ್ತಿದ್ದು, ಶಿಘ್ರದಲ್ಲಿಯೇ ಹಳಿಗೆ ಬರಬಹುದು. ಮುಂಬರುವ ಒಂದೆರೆಡು ತಿಂಗಳಲ್ಲಿ ನೂತನ ವಂದೇ ಮೆಟ್ರೋ ದೆಹಲಿ ಹಾಗೂ ಆಗ್ರಾ ನಡುವೆ ಸಂಚಾರ ನಡೆಸಲಿದೆ ಎಂದು ತಿಳಿದುಬಂದಿದೆ. ಇವೆರೆಡು ನಗರಗಳ ನಡುವಿನ 200 ಕಿಲೋಮೀಟರ್ ಅಂತರವನ್ನು ಕೇವಲ 1.5 ಗಂಟೆಯಲ್ಲಿ ತಲುಪಲಿದೆ ಎಂದು ಹೇಳಲಾಗಿದೆ.

Vande Bharat Sleeper Train Run Secunderabad To Pune Low Journey Time

ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (Rail Coach Factory)ಯಲ್ಲಿ ನೂತನ ವಂದೇ ಭಾರತ್ ಮೆಟ್ರೋವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜುಲೈನಲ್ಲಿ ಈ ರೈಲು ಪ್ರಾಯೋಗಿಕ ಸಂಚಾರವನ್ನು ನಡೆಸಬಹುದು. ಪ್ರಸ್ತುತ 50 ವಂದೇ ಮೆಟ್ರೋ ರೈಲುಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 400 ರೈಲುಗಳನ್ನು ತಯಾರಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 30, 2024, 16:08 [IST]
English summary
Vande bharat sleeper train run secunderabad to pune low journey time
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+