Vande Bharat: ಮತ್ತೊಮ್ಮೆ ಕಲ್ಲು ತೂರಾಟ: ಈ ಬಾರಿ ಬಿಡೋದೇ ಇಲ್ಲ, ರೈಲ್ವೆ ಖಡಕ್ ವಾರ್ನಿಂಗ್!
ಲಖನೌ ಬಳಿ ಅವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ರೈಲಿಗೆ ಹಾನಿಯಾಗಿದೆ. ರೈಲಿನಲ್ಲಿದ್ದ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ರೈಲಿಗೆ ಹಾನಿ ಮಾಡಿದವರನ್ನು ಗುರುತಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಮಲಹೌರ್ ರೈಲು ನಿಲ್ದಾಣದ ಬಳಿ ಕೆಲವರು ಗೋರಖ್‌ಪುರ-ಲಖನೌ ರೈಲಿನ ಮೇಲೆ ದಾಳಿ ಮಾಡಿದ್ದಾರೆ. ಕೋಚ್ ಒಂದರ ಕಿಟಕಿಯ ಗಾಜುಗಳು ಹಾನಿಗೀಡಾಗಿವೆ. ಪದೆ ಪದೇ ಕಲ್ಲು ತೂರಾಟದ ಪ್ರಕಾರಣಗಳು ಹೆಚ್ಚಾಗುತ್ತಿರುವ ಬೆನ್ನಲೇ ರೈಲ್ವೆ ಖಡಕ್ ವಾರ್ನಿಂಗ್ ಕೊಟ್ಟಿತ್ತು. ಪ್ರಕರಣದಲ್ಲಿ ಸಿಕ್ಕಿಬಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರೈಲ್ವೆ ಈ ಹಿಂದೆಯೇ ಎಚ್ಚರಿಸಿತ್ತು.

ಎಲ್ಲರೂ ಪ್ರಯಾಣಿಸುವ ಈ ರೈಲಿಗೆ ಏಕೆ ಇಷ್ಟೊಂದು ವಿರೋಧ ಎಂಬುದು ತಿಳಿದುಬಂದಿಲ್ಲ. ಈ ರೈಲಿನಲ್ಲಿ ಯಾವುದೇ ತಾರತಮ್ಯ ಕೂಡ ಇರುವುದಿಲ್ಲ. ಎಲ್ಲರಿಗೂ ಒಂದೇ ಬೆಲೆ, ಎಲ್ಲರೂ ಪ್ರಯಾಣಿಸಬಹುದಾಗಿದೆ. ಆದರೆ ಕೆಲವರು ಜಿದ್ದಿಗೆ ಬಿದ್ದು ಈ ರೀತಿ ಹಾನಿಗೊಳಿಸುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲೂ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಲಾಗಿದ್ದು, ಕೋಚ್‌ನ ಗಾಜು ಒಡೆದಿತ್ತು.
ಮತ್ತೊಂದು ಪ್ರಕರಣದಲ್ಲಿ, ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಸೆಮಿ-ಹೈ-ಸ್ಪೀಡ್ ರೈಲಿಗೆ ವ್ಯಕ್ತಿಯೊಬ್ಬ ಕಲ್ಲು ಎಸೆದ ಕಾರಣ ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಿಟಕಿಯ ಗಾಜಿಗೆ ಹಾನಿಯಾಗಿತ್ತು. ಜನವರಿಯಲ್ಲಿ ಆಡಳಿತ-ಬಿಜೆಪಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟದ ಘಟನೆಯ ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಧ್ಯಸ್ಥಿಕೆಗೆ ಒತ್ತಾಯಿಸಿತ್ತು.

ಈಗ ಕಲ್ಲು ತೂರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತವಾಗಿದೆ. ಪ್ರಯಾಣಿಕರ ಭದ್ರತೆ ಕೂಡ ಇಲ್ಲಿ ಮುಖ್ಯವಾಗಿದ್ದು, ಕಲ್ಲು ತೂರಾಟ ನಡೆಸುವವರು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರೈಲ್ವೆ ಎಚ್ಚರಿಕೆ ನೀಡಿದೆ. ವಂದೇ ಭಾರತ್ ಆರಂಭವಾದಾಗಿನಿಂದಲೂ ಇಲ್ಲಿಯವರೆಗೆ ಕೇವಲ ಉತ್ತರ ಭಾರತ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಹಲವು ಪ್ರಕರಣಗಳು ದಾಖಲಾಗಿವೆ.
ದಾವಣಗೆರೆಯಲ್ಲಿ ಕಲ್ಲು ತೂರಾಟ: ಜೂನ್ 27 ರಂದು ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದ ಧಾರವಾಡ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ದಾವಣಗೆರೆ ರೈಲು ನಿಲ್ದಾಣದ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಸಿ4 ಕಿಟಕಿಗೆ ಹಾನಿಯಾಗಿದ್ದು, ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿತ್ತು.

ಕಳೆದ ಫೆಬ್ರವರಿ 25 ರಂದು ಮೈಸೂರು-ಚೆನ್ನೈ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಎರಡು ರೈಲಿನ ಗಾಜುಗಳಿಗೆ ತೀವ್ರ ಹಾನಿಯಾಗಿತ್ತಾದರೂ ಗಾಜು ಮತ್ತು ಕೋಚ್‌ನ ಗುಣಮಟ್ಟದಿಂದಾಗಿ ಪ್ರಾಯಾಣಿಕರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಅದಕ್ಕೂ ಮುನ್ನ, ಕಣ್ಣೂರು ಜಿಲ್ಲೆಯಲ್ಲಿ ಮಂಗಳೂರು-ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ನೇತ್ರಾವತಿ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು.
ರೈಲ್ವೆ ಸಂರಕ್ಷಣಾ ಪಡೆ ಕಳೆದ ಜನವರಿಯಲ್ಲಿ ಸುಮಾರು 21 ಹಾಗೂ ಫೆಬ್ರವರಿಯಲ್ಲಿ 13 ಪ್ರಕರಣಗಳನ್ನು ದಾಖಲಿಸಿದೆ. ಸದ್ಯ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಕಳೆದ ಐದು ತಿಂಗಳಲ್ಲಿ ಹಾನಿಗೊಳಗಾದ 40 ಕಿಟಕಿ ಹಾಗೂ ಬಾಗಿಲಿನ ಗಾಜುಗಳನ್ನು ಬದಲಾಯಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ದೆಹಲಿ - ಆಗ್ರಾ ಮಾರ್ಗದಲ್ಲಿ ಸಂಚರಿಸುವ ರೈಲಿನ ಮೇಲೆಯೇ ಬಹುತೇಕ ಕಲ್ಲು ತೂರಾಟಗಳು ನಡೆದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications