Vande Metro: ಇವೆರೆಡು ನಗರಗಳ ನಡುವೆ ವಂದೇ ಮೆಟ್ರೋ ಸಂಚಾರ.. ಈ ರೈಲಿನ ವಿಶೇಷತೆಗಳೇನು?

ದೇಶಾದ್ಯಂತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Vande Bharat Express) ಸೆಮಿ-ಹೈಸ್ಪೀಡ್ ರೈಲಾಗಿ ಸಂಚರಿಸುತ್ತಿದೆ. ಕೆಲವೇ ದಿನಗಳಲ್ಲಿ ಪ್ರಮುಖ ನಗರಗಳ ನಡುವೆ ಸಂಪರ್ಕವನ್ನು ಬೆಸೆಯಲು ವಂದೇ ಮೆಟ್ರೋ (Vande Metro) ಸಹ ಹಳಿಗೆ ಬರಲಿದ್ದು, ಈ ಮಾರ್ಗದಲ್ಲಿ ನೂತನ ರೈಲು ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಬಿಹಾರದ ಭಾಗಲ್‌ಪುರದಿಂದ ಪಶ್ಚಿಮ ಬಂಗಾಳದ ಹೌರಾ ಮಧ್ಯೆ ಹೊಸ ವಂದೇ ಮೆಟ್ರೋ ಓಡಾಟವನ್ನು ನಡೆಸಲಿದೆ. 8 ಕೋಚ್‌ಗಳನ್ನು ಹೊಂದಿರುವ ಈ ರೈಲು, ಬುಧವಾರ ಭಾಗಲ್‌ಪುರ ಮತ್ತು ಮಂಗಳವಾರ ಹೌರಾದಿಂದ ಸಂಚರಿಸುವುದಿಲ್ಲ ಎನ್ನಲಾಗಿದೆ. ಭಾಗಲ್‌ಪುರದಿಂದ ಬೆಳಗ್ಗೆ 6:15ಕ್ಕೆ ಹೊರಟು, 7:28ಕ್ಕೆ ಸಾಹಿಬ್‌ಗಂಜ್, 8:15ಕ್ಕೆ ಬರ್ಹರ್ವ ರೈಲು ನಿಲ್ದಾಣವನ್ನು ತಲುಪಲಿದೆ. ಅಲ್ಲಿ ಎರಡು ನಿಮಿಷಗಳ ಕಾಲ ನಿಲುಗಡೆ ಇರಲಿದೆ ಎಂದು ಹೇಳಲಾಗಿದೆ.

Vande Metro train Run Between Bhagalpur To Howrah Here The Details

ಬರ್ಹರ್ವದಿಂದ ಅಜಿಮ್‌ಗಂಜ್, ಕಟ್ವಾ, ನೌದೀಪ್‌ಧಾಮ್ ಮಾರ್ಗವಾಗಿ ಈ ವಂದೇ ಮೆಟ್ರೋ, ಮಧ್ಯಾಹ್ನ 2:25ರ ಸುಮಾರಿಗೆ ಹೌರಾಕ್ಕೆ ತೆರಳುತ್ತದೆ. ಹೌರಾದಿಂದ ಮಧ್ಯಾಹ್ನ 1:30ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ರಾತ್ರಿ 9:55ರ ಸುಮಾರಿಗೆ ಭಾಗಲ್‌ಪುರಕ್ಕೆ ಬರುತ್ತದೆ. ಒಟ್ಟು 439 ಕಿಲೋಮೀಟರ್ ದೂರವನ್ನು 7:30 ಗಂಟೆಗಳಲ್ಲಿ ಕ್ರಮಿಸಲಿದೆ. ನೂತನ ರೈಲಿನ ವೇಳಾಪಟ್ಟಿ ಸಂಬಂಧ ಪೂರ್ವ ರೈಲ್ವೆ ವಿಭಾಗದ ಅಧಿಕಾರಿಗಳು, ರೈಲ್ವೆ ಮಂಡಳಿಗೆ ವರದಿಯನ್ನು ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಭಾಗಲ್‌ಪುರ ಹೌರಾ ಮಾತ್ರವಲ್ಲದೆ, ಜಮಾಲ್‌ಪುರ - ಮಾಲ್ಡಾ ಮತ್ತು ಭಾಗಲ್‌ಪುರ - ದಿಯೋಘರ್ ಮಾರ್ಗದಲ್ಲಿ ಕೂಡ ವಂದೇ ಮೆಟ್ರೋ ಕಾರ್ಯಚರಣೆಯನ್ನು ನಡೆಸಲಿದೆ ಎಂದು ತಿಳಿದುಬಂದಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ ಮುಗಿದು, ಹೊಸ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಈ ರೈಲಿನ ಕಾರ್ಯಾಚರಣೆ ಕುರಿತು ಅಧಿಕೃತ ಮಾಹಿತಿ ದೊರೆಯಲಿದೆ.

Vande Metro train Run Between Bhagalpur To Howrah Here The Details

ಪಂಜಾಬ್ ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಮೆಟ್ರೋ ಕೋಚ್‌ಗಳನ್ನು ತಯಾರಿಸಲಾಗುತ್ತಿದ್ದು, ಮೊದಲ ರೈಲು ಮೇ ತಿಂಗಳೊಳಗೆ ಸಿದ್ದವಾಗಲಿದೆ ಎಂದು ಈಚೆಗೆ ವರದಿಯಾಗಿತ್ತು. ಸಂಪೂರ್ಣ ಹವಾನಿಯಂತ್ರಿತವಾಗಿರುವ ವಂದೇ ಮೆಟ್ರೋ, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ ಎಂದು ಹೇಳಲಾಗಿತ್ತು.

ಪ್ರತಿ ಕೋಚ್‌ನಲ್ಲಿ 280 ಜನರು ಪ್ರಯಾಣಿಸಬಹುದು. ಅದರಲ್ಲಿ 100 ಜನರಿಗೆ ಆಸನ ವ್ಯವಸ್ಥೆಯಿದ್ದು, 180 ಮಂದಿ ನಿಂತುಕೊಂಡು ತೆರಳಬಹುದು. ಈ ವಂದೇ ಮೆಟ್ರೋ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಲೋಕೋ ಪೈಲಟ್ ಜೊತೆಯಲ್ಲಿ ಪ್ರಯಾಣಿಕರು ಮಾತನಾಡಲು ಟಾಕ್ ಬ್ಯಾಕ್ ಸಿಸ್ಟಮ್, ಸುರಕ್ಷತೆಗಾಗಿ ಫೇರ್-ಸ್ಮೋಕ್ ಡಿಟೆಕ್ಷನ್ ಸಿಸ್ಟಮ್ ಹಾಗೂ ಕವಚ್ ಸಿಸ್ಟಮ್ ಅನ್ನು ಹೊಂದಿರಲಿದೆ ಎನ್ನಲಾಗಿತ್ತು.

ರೈಲ್ವೆ ಇಲಾಖೆಯು ವಿವಿಧ ನಗರಗಳ ಜನರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಈ ರೈಲನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗಿದ್ದು, ಪ್ರತಿನಿತ್ಯ ಒಂದು ಊರಿನಿಂದ ಮತ್ತೊಂದು ಊರಿಗೆ ಕೆಲಸಕ್ಕೆ ತೆರಳುವವರಿಗೂ ದೊಡ್ಡಮಟ್ಟದಲ್ಲಿ ನೆರವಾಗಲಿದೆ. ವಂದೇ ಮೆಟ್ರೋ ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿರುವುದರಿಂದ ಸಾರ್ವಜನಿಕರು ಕೂಡ ಆರಾಮದಾಯಕವಾಗಿ ಪ್ರಯಾಣಿಸಲು ಸಹಾಯವಾಗಲಿದೆ ಎಂದು ನುರಿತರು ಹೇಳುತ್ತಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, April 26, 2024, 22:01 [IST]
English summary
Vande metro train run between bhagalpur to howrah here the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+