Vande Sadharan: ಕಡಿಮೆ ಖರ್ಚಿನ ವಂದೇ ಸಾಧಾರಣ್ ರೈಲು ಬಂತು, ನಿಮ್ಮೂರಿಗೆ ಸುಲಭ ಪ್ರಯಾಣ!

ಕರ್ನಾಟಕವು ಸೇರಿದಂತೆ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ವೇಗದ ರೈಲುಗಳಾಗಿ ಖ್ಯಾತಿಗಳಿಸಿವೆ. ಸದ್ಯ, ಕಡಿಮೆ ಖರ್ಚಿನ ವಂದೇ ಸಾಧಾರಣ್ (Vande Sadharan) ರೈಲು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದ್ದು, ನಿಮ್ಮೂರಿಗೆ ಸುಲಭವಾಗಿ ಪ್ರಯಾಣಿಸಬಹುದು. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಹೊಚ್ಚ ಹೊಸ ವಂದೇ ಸಾಧಾರಣ್ ಪುಶ್-ಪುಲ್ ರೈಲು ಭಾನುವಾರ (ಅ.29) ಮುಂಬೈನ ವಾಡಿ ಬಂದರ್ ಯಾರ್ಡ್‌ಗೆ ಆಗಮಿಸಿದ್ದು, ಮುಂಬರುವ ಕೆಲವೇ ವಾರಗಳಲ್ಲಿ ಸಂಚಾರ ಪ್ರಾರಂಭಿಸುವ ನೀರಿಕ್ಷೆಯಿದೆ. ಈ ರೈಲು ಕೂಡ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಒಟ್ಟು 22 ಬೋಗಿಗಳು ಇರಲಿದೆ. ಅವುಗಳಲ್ಲಿ 8 ಕಾಯ್ದಿರಿಸದ ಬೋಗಿಗಳು, 14 ಸ್ಲೀಪರ್ ಬೋಗಿಗಳು, ಉಳಿದೆರಡು ಲೋಕೋಮೋಟಿವ್(ಎಂಜಿನ್).

Vande Sadharan: ಕಡಿಮೆ ಖರ್ಚಿನ ವಂದೇ ಸಾಧಾರಣ್ ರೈಲು ಬಂತು, ನಿಮ್ಮೂರಿಗೆ ಸುಲಭ ಪ್ರಯಾಣ!

ಈ ವಂದೇ ಸಾಧಾರಣ್ ರೈಲಿನಲ್ಲಿ 1800 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು. ಇದರಲ್ಲಿ ಹವಾನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ. ಆದರೆ, ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಸಂಚರಿಸಬಹುದು. ವರದಿ ಪ್ರಚಾರ, ವಂದೇ ಸಾಧಾರಣ್ ಬೆಟ್ಟ - ಗುಡ್ಡಗಳಿಂದ ಕೂಡಿರುವ ಮುಂಬೈ - ನಾಸಿಕ್ ನಡುವೆ ಪ್ರಾಯೋಗಿಕ ಸಂಚಾರ ನಡೆಸಲಿದೆ.

ಮೊದಲ ವಂದೇ ಸಾಧಾರಣ್ ರೈಲು ದೆಹಲಿ - ಮುಂಬೈ, ಎರಡನೇ ರೈಲು ಎರ್ನಾಕುಲಂ - ಗುವಾಹಟಿ ನಡುವೆ ಕಾರ್ಯಾಚರಿಸಲಿದೆ. ಜೊತೆಗೆ ಇತರೆ ಮೂರು ಮಾರ್ಗದಲ್ಲಿಯೂ ಸಂಚರಿಸಲಿದ್ದು, ಆ ಬಳಿಕ ದೇಶಾದ್ಯಂತ 30 ಮಾರ್ಗಗಳಲ್ಲಿ ಓಡಾಟವನ್ನು ಆರಂಭಿಸಲಿದೆ. ಸುಮಾರು 400 ರೈಲುಗಳನ್ನು ಚೆನ್ನೈ ಕೋಚ್ ಇಂಟಿಗ್ರೇಟೆಡ್ ಫ್ಯಾಕ್ಟರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

Vande Sadharan: ಕಡಿಮೆ ಖರ್ಚಿನ ವಂದೇ ಸಾಧಾರಣ್ ರೈಲು ಬಂತು, ನಿಮ್ಮೂರಿಗೆ ಸುಲಭ ಪ್ರಯಾಣ!

ಪ್ರಸ್ತುತ, ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ರಾತ್ರಿ ಪ್ರಯಾಣ ಅಸಾಧ್ಯ. ಇದರಿಂದಾಗಿ ರೈಲ್ವೆ ಇಲಾಖೆ 'ವಂದೇ ಭಾರತ್ ಸ್ಲೀಪರ್' ರೈಲುಗಳನ್ನು ತಯಾರಿಸುತ್ತಿದೆ. ಈಗಾಗಲೇ ಈ ರೈಲಿನ ಒಳಭಾಗದ ಚಿತ್ರಗಳು ರಿವೀಲ್ ಆಗಿದ್ದು, ಯಾವ ಹೋಟೆಲ್ ಗೂ ಕಮ್ಮಿ ಇಲ್ಲದಂತಹ ವಿನ್ಯಾಸವನ್ನು ಹೊಂದಿದೆ. ವಂದೇ ಭಾರತ್ ಸ್ಲೀಪರ್ 2024ರ ಫೆಬ್ರವರಿ ವೇಳೆಗೆ ಕಾರ್ಯಚರಣೆ ಶುರು ಮಾಡಬಹುದು.

ಈ ರೈಲು, 857 ಬರ್ತ್‌ಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಪ್ರಯಾಣಿಕರಿಗೆ 823 ಹಾಗೂ ಉಳಿದ 34 ಬರ್ತ್‌ಗಳನ್ನು ರೈಲಿನ ಸಿಬ್ಬಂದಿಗೆ ಮೀಸಲಿಡಲಾಗಿದೆ. ಇದಿಷ್ಟೇ ಅಲ್ಲದೆ, ರೈಲ್ವೆ ಇಲಾಖೆಯು ಹತ್ತಿರದ ನಗರಗಳ ಪ್ರಯಾಣಕ್ಕೆ ವಂದೇ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತಿದೆ. ಇದು, 12 ಬೋಗಿಗಳನ್ನು ಹೊಂದಿರಲಿದ್ದು, 2024ರ ವೇಳೆಗೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.

Vande Sadharan: ಕಡಿಮೆ ಖರ್ಚಿನ ವಂದೇ ಸಾಧಾರಣ್ ರೈಲು ಬಂತು, ನಿಮ್ಮೂರಿಗೆ ಸುಲಭ ಪ್ರಯಾಣ!

ದೇಶದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 15, 2019 ರಂದು ನವದೆಹಲಿ - ವಾರಣಾಸಿ ನಡುವೆ ಸಂಚಾರವನ್ನು ಶುರು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದರು. ಈಗ, 34 ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಚರಣೆ ನಡೆಸುತ್ತಿವೆ. ಇವು, ವಿಮಾನಗಳಂತೆ ಅತ್ಯಾಧುನಿಕ ಮೂಲ ಸೌಕರ್ಯಯನ್ನು ಹೊಂದಿವೆ.

ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸುರಕ್ಷತೆಯ ದೃಷ್ಟಿಯಿಂದ ಗಂಟೆಗೆ 110 - 130 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿವೆ. ಸಂಪೂರ್ಣ ಎಸಿ ವ್ಯವಸ್ಥೆ, ಆರಾಮದಾಯಕ ಸೀಟುಗಳು, ದೊಡ್ಡದಾದ ಕಿಟಕಿ, ವೈಫೈ ಸೌಲಭ್ಯ, ಜೈವಿಕ ಶೌಚಾಲಯ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ ಒಳಗೊಂಡಂತೆ ಹೆಚ್ಚು ನವೀನವಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 31, 2023, 10:20 [IST]
English summary
Vande sadharan train arrives mumbai low cost easy journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+