Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೂಡಿಟ್ಟ ಚಿಲ್ಲರೆ ಹಣದಿಂದಲೇ ತನ್ನ ಕನಸಿನ ಸ್ಕೂಟರ್ ಖರೀದಿಸಿದ ತರಕಾರಿ ವ್ಯಾಪಾರಿ!
ಪ್ರತಿಯೊಬ್ಬರಿಗೂ ತಮ್ಮ ಸ್ವಂತಕ್ಕೆ ಎನಾದರೂ ಖರೀದಿ ಮಾಡಬೇಕೆಂಬ ಮಹಾದಾಸೆ ಇದ್ದೆ ಇರುತ್ತದೆ. ಆದರೆ ಎಲ್ಲದಕ್ಕೂ ಕಾಲ ಕೂಡಿಬರಬೇಕೆಂಬ ಮಾತು ಸುಳ್ಳಲ್ಲ. ಇದಕ್ಕೆ ಉದಾಹರಣೆ ಎಂದರೆ ಚಿಲ್ಲರೆ ಹಣದಿಂದಲೇ ಹೊಸ ಸ್ಕೂಟರ್ ಖರೀದಿ ಮಾಡಿದ ಈ ತರಕಾರಿ ವ್ಯಾಪಾರಿಯ ಕಥೆಯೇ ನಿದರ್ಶನ.

ಹೌದು, ಹನಿ ಹನಿ ಗೂಡಿದರೆ ಹಳ್ಳ ಎಂಬ ಮಾತಿನಂತೆ ಈ ತರಕಾರಿ ವ್ಯಾಪಾರಿ ಹೊಸ ಸ್ಕೂಟರ್ ಖರೀದಿ ಮಾಡಬೇಕೆಂದು ಎರಡು ವರ್ಷಗಳ ಹಿಂದಿನ ಕನಸನ್ನು ಇದೀಗ ಈಡೇರಿಸಿಕೊಂಡಿದ್ದು, ಕನಸನ್ನು ನನಸು ಮಾಡಿಕೊಳ್ಳಲು ಹಲವಾರು ತಿಂಗಳು ಕಾಲ ತರಕಾರಿ ವ್ಯಾಪಾರದಲ್ಲಿನ ಉಳಿತಾಯದ ಚಿಲ್ಲರೆ ಹಣದಿಂದಲೇ ಸ್ಕೂಟರ್ ಖರೀದಿಸಿದ್ದಾನೆ.

ಸ್ಕೂಟರ್ ಖರೀದಿಗಾಗಿ ತರಕಾರಿ ವ್ಯಾಪಾರಿಯು ಸುಮಾರು ಒಂದು ವರ್ಷಗಳ ಕಾಲ ಚಿಲ್ಲರೆ ಹಣವನ್ನು ಕೂಡಿಟ್ಟು ಸ್ಕೂಟರ್ ಖರೀದಿಸಿದ್ದು, ಸ್ಕೂಟರ್ ಖರೀದಿಗಾಗಿ ಸದ್ಯಕ್ಕೆ ರೂ.22 ಸಾವಿರ ಚಿಲ್ಲರೆ ಹಣವನ್ನೇ ಮುಂಗಡವಾಗಿ ಪಾವತಿಸಿ ಸ್ಕೂಟರ್ ವಿತರಣೆ ಪಡೆದುಕೊಂಡಿದ್ದಾರೆ.

ಸ್ಕೂಟರ್ ಖರೀದಿಗಾಗಿ ಕಳೆದ ಎರಡು ವರ್ಷಗಳಿಂದಲೇ ಪ್ರಯತ್ನಿಸಿ ಹಣಕಾಸು ಸಮಸ್ಯೆಯಿಂದಾಗಿ ಸುಮ್ಮನಾಗಿದ್ದ ಅಸ್ಸಾಂ ರಾಜ್ಯದ ಮೌತುಪುರಿ ನಿವಾಸಿಯು ಸ್ಕೂಟರ್ ಖರೀದಿ ಮಾಡಲೇಬೇಕೆಂಬ ಹಠದೊಂದಿಗೆ ಕಳೆದ ಕೆಲ ತಿಂಗಳಿನಿಂದ ತನ್ನ ತರಕಾರಿ ವ್ಯಾಪಾರದಲ್ಲಿ ಮುಂಗಡ ಪಾವತಿಗಾಗಿ ಬೇಕಿರುವ ಹಣವನ್ನು ಹೊಂದಿಸಲು ಆರಂಭಿಸಿದ್ದ.

ಸದ್ಯಕ್ಕೆ ಮುಂಗಡ ಪಾವತಿಗೆ ಬೇಕಿರುವ ಹಣ ಸಂಗ್ರಹಣೆ ನಂತರ ಸುಜುಕಿ ಮೋಟಾರ್‌ಸೈಕಲ್ ಡೀಲರ್ಸ್ ಸಂಪರ್ಕಿಸಿದ ತರಕಾರಿ ವ್ಯಾಪಾರಿಯು ಹಣಕಾಸು ಪಾವತಿ ವಿಧಾನದ ಬಗ್ಗೆ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟಿದ್ದು, ಶೋರೂಂ ಸಿಬ್ಬಂದಿ ಕೂಡಾ ತರಕಾರಿ ವ್ಯಾಪಾರಿಯ ಮನವಿಗೆ ಸಹಕರಿಸಿ ಚಿಲ್ಲರೆ ಹಣವನ್ನೇ ಸ್ವಿಕಾರ ಮಾಡುವ ಮೂಲಕ ಸ್ಕೂಟರ್ ವಿತರಿಸಿದ್ದಾರೆ.

ರೂ.22 ಸಾವಿರ ಚಿಲ್ಲರೆ ಹಣವನ್ನು ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಏಣಿಕೆಯ ನಂತರ ತರಕಾರಿ ವ್ಯಾಪಾರಿಯ ಸ್ಕೂಟರ್ ಖರೀದಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನುಳಿದ ಹಣ ಪಾವತಿಗಾಗಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಒದಗಿಸಿದ್ದಾರೆ.

ಸ್ಕೂಟರ್ ಖರೀದಿಗಾಗಿ ತರಕಾರಿ ವ್ಯಾಪಾರಿಯು ಚಿಲ್ಲರೆ ಹಣ ಸಂಗ್ರಹಣೆ ಕುರಿತು ಹಿರಾಕ್ ಜೆ ದಾಸ್ ಎನ್ನುವ ಯೂಟ್ಯೂಬರ್ ಈ ಮಾಹಿತಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ತರಕಾರಿ ವ್ಯಾಪಾರಿಯ ಹೆಸರನ್ನು ಸ್ಪಷ್ಟವಾಗಿ ತಿಳಿಸಿವಾದರೂ ಮೌತುಪುರಿ ನಿವಾಸಿ ಎನ್ನುವ ಮಾಹಿತಿಯಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಬಿಡುಗಡೆ ಮಾಡಿದ್ದ ಹೊಸ ಅವೆನಿಸ್ ಸ್ಕೂಟರ್ ಮಾದರಿಯನ್ನೇ ತರಕಾರಿ ವ್ಯಾಪಾರಿಯು ಚಿಲ್ಲರೆ ಹಣ ಕೊಟ್ಟು ಖರೀದಿ ಮಾಡಿದ್ದು, ಇದು ಎಕ್ಸ್‌ಶೋರೂಂ ಪ್ರಕಾರ ಸುಮಾರು ರೂ. 86,700 ಆರಂಭಿಕ ಬೆಲೆ ಹೊಂದಿದೆ.

ಹೊಸ ಸುಜುಕಿ ಅವೆನಿಸ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ರೇಸ್ ಎಡಿಷನ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಎಕ್ಸ್‌ಶೋರೂಂ ಪ್ರಕಾರ ರೂ. 86,700 (ಸ್ಟ್ಯಾಂಡರ್ಡ್) ಮತ್ತು ರೂ.87,000 (ರೇಸ್ ಎಡಿಷನ್) ಬೆಲೆ ಹೊಂದಿವೆ.

ಸುಜುಕಿ ಕಂಪನಿಯು ಹೊಸ ಅವೆನಿಸ್ ಸ್ಕೂಟರ್‌ನಲ್ಲಿ 2020ರ ಮೊಟೊ ಜಿಪಿ ಗೆಲುವಿನ ಸಂಭ್ರಮಕ್ಕಾಗಿ ರೇಸ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 8.58 ಬಿಎಚ್‌ಪಿ ಮತ್ತು 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಸ್ಕೂಟರ್ ಮಾದರಿಯು ಸ್ಪೋರ್ಟಿ ಡಿಸೈನ್‌ನೊಂದಿಗೆ ನ್ಯೂ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಲೊ ಮೌಂಟೆಡ್ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಸ್ಪೋರ್ಟಿಯಾಗಿರುವ ಫ್ರಂಟ್ ಆಪ್ರಾನ್, ಶಾರ್ಪ್ ಲೈನ್ ಹೊಂದಿರುವ ಟರ್ನ್ ಇಂಡಿಕೇಟರ್ ಸೇರಿದಂತೆ ಸ್ಪೋರ್ಟಿ ಲುಕ್ ಹೊಂದಿರುವ ಫ್ಲೈ ಸ್ಕೀನ್ ಪಡೆದುಕೊಂಡಿದೆ.

ಸುಜುಕಿ ಕಂಪನಿಯು ಹೊಸ ಸ್ಕೂಟರಿನ ವಿನ್ಯಾಸಕ್ಕೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಲು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಫ್ಲಶ್ ಫಿಟ್ ಫುಟ್‌ರೆಸ್ಟ್, ಹೊಸ ಮಾದರಿಯ ಸ್ಪೋರ್ಟಿ ಎಕ್ಸಾಸ್ಟ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಬೈಕ್‌ಗಳ ಮಾದರಿಯಲ್ಲಿರುವ ಟರ್ನ್ ಇಂಡಿಕೇಟರ್ ಮತ್ತು ಹೊರಭಾಗದಲ್ಲಿರುವ ಫ್ಯೂಲ್ ಕ್ಯಾಪ್ ಆಯ್ಕೆ ಉತ್ತಮವಾಗಿದೆ.

ಇನ್ನು ಹೊಸ ಅವೆನಿಸ್ ಸ್ಕೂಟರ್ ಅತ್ಯುತ್ತಮ ಫೀಚರ್ಸ್ ನೀಡಲಾಗಿದ್ದು, ಹೊಸ ಸ್ಕೂಟರಿನಲ್ಲಿರುವ ಫುಲ್ ಡಿಜಿಟಲ್ ಡಿಸ್‌ಪ್ಲೇ ಗ್ರಾಹಕರನ್ನು ಆಕರ್ಷಿಸಲಿದೆ. ಸುಜುಕಿ ಕನೆಕ್ಟ್ ಆ್ಯಪ್ ಮೂಲಕ ಡಿಜಿಟಲ್ ಡಿಸ್‌ಪ್ಲೇ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದ್ದು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಟ್ಸ್‌ಅಪ್ ಮೆಸೇಜ್ ಅಲರ್ಟ್, ಎಸ್ಎಂಎಸ್ ಮತ್ತು ಕಾಲರ್ ಐಡಿ ಸೇವೆಗಳನ್ನು ಬಳಕೆ ಮಾಡಬಹುದಾಗಿದೆ.

ಹಾಗೆಯೇ ಹೊಸ ಸ್ಕೂಟರಿನಲ್ಲಿ ಹೆಚ್ಚಿನ ಗಾತ್ರದ ಸ್ಟೋರೇಜ್ ಸೌಲಭ್ಯದೊಂದಿಗೆ ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಒಂದು ಫುಲ್ ಸೈಜ್ ಗಾತ್ರದ ಅಂಡರ್ ಸೀಟರ್ ಸ್ಟೋರೇಜ್, ಎಂಜಿನ್ ಕಿಲ್ ಸ್ವಿಚ್ ಮತ್ತು ಸೈಡ್ ಸ್ಟ್ಯಾಂಡ್ ಕಟ್ಅಪ್ ತಂತ್ರಜ್ಞಾನ ನೀಡಲಾಗಿದೆ.

ಹೊಸ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಬ್ಲ್ಯೂ, ಗ್ರಿನ್, ಆರೇಂಜ್, ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಹೊಸ ಸ್ಕೂಟರ್ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಮಾದರಿಯು ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಆಕ್ಟಿವಾ 125, ಹೋಂಡಾ ಗ್ರಾಜಿಯಾ, ಯಮಹಾ ಫ್ಯಾಸಿನೊ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.
image courtesy:Hirak J Das Vlogs/YT