ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಭಾರತದ ಹಲವು ಪ್ರಮುಖ ನಗರಗಳು ವಾಯುಮಾಲಿನ್ಯದಿಂದ ಬಳಲುತ್ತಿವೆ. ಇದಕ್ಕೆ ಮುಖ್ಯ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಂದ ಹೊರಬರುವ ಹೊಗೆ. ಈ ಕಾರಣಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೊಗೆ ಹೊರಸೂಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ಹೊಸ ಮೋಟಾರು ವಾಹನ ಕಾಯ್ದೆಯನ್ನು 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಯಿತು. ಈ ಕಾಯ್ದೆಯನ್ವಯ ಸಂಚಾರ ನಿಯಮಗಳ ಉಲ್ಲಂಘನೆಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುವುದು. ಇದರಂತೆ ಅದರಂತೆ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ (ಪಿಯುಸಿಸಿ) ಹೊಂದಿಲ್ಲದ ವಾಹನಗಳಿಗೆ ರೂ.10,000ಗಳವರೆಗೆ ದಂಡ ವಿಧಿಸಲಾಗುವುದು.

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಪಿಯುಸಿಸಿ ಹೊಂದಿಲ್ಲದೆ ಸಿಕ್ಕಿಬೀಳುವ ವಾಹನಗಳಿಗೆ ಮೊದಲ ಬಾರಿಗೆ ರೂ.1,000ಗಳ ದಂಡ ವಿಧಿಸಲಾಗುವುದು. ನಂತರದ ಪ್ರತಿ ಬಾರಿಯ ಉಲ್ಲಂಘನೆಗಾಗಿ ರೂ.2,000ಗಳ ದಂಡ ವಿಧಿಸಲಾಗುತ್ತದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಆದರೆ ಇನ್ನು ಮುಂದೆ ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಮೊದಲ ಬಾರಿಯೇ ರೂ.10,000 ದಂಡ ವಿಧಿಸಲಾಗುವುದು. ದೆಹಲಿಯ ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸರು, ದೆಹಲಿಯಲ್ಲಿ ದೇಶದ ಉಳಿದ ಭಾಗಗಳಿಗಿಂತ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲು ಮುಂದಾಗಿದ್ದಾರೆ.

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ರಾಷ್ಟ್ರ ರಾಜಧಾನಿಯು ದೇಶದ ಉಳಿದ ನಗರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯಕ್ಕೆ ತುತ್ತಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿರುವ ದೆಹಲಿ ಪೊಲೀಸರು ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಲಾಕ್ ಡೌನ್ ಸಡಿಲಿಕೆಯ ನಂತರ ದೆಹಲಿಯಲ್ಲಿ ವಾಹನಗಳ ಸಂಚಾರ ಹೆಚ್ಚುತ್ತಿದೆ. ಜೊತೆಗೆ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವು ಸಹ ಹೆಚ್ಚಾಗುತ್ತಿದೆ. ಆದ್ದರಿಂದ ವಾಯುಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲು ದೆಹಲಿ ಸಾರಿಗೆ ಇಲಾಖೆಯು ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ಇದರ ಭಾಗವಾಗಿ ಕಳೆದ ವಾರ ಸುಮಾರು 440 ವಾಹನಗಳನ್ನು ಪರೀಕ್ಷಿಸಿ ಹೆಚ್ಚು ಹೊಗೆ ಹೊರ ಸೂಸಿದ, ಪಿಯುಸಿಸಿ ಹೊದಿಲ್ಲದ ವಾಹನಗಳ ಮಾಲೀಕರಿಗೆ ತಲಾ ರೂ.10,000ಗಳ ದಂಡ ವಿಧಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ದೆಹಲಿಯ ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 439 ವಾಹನಗಳ ಮಾಲೀಕರಿಗೆ ತಲಾ ರೂ.10,000 ದಂಡ ವಿಧಿಸಲಾಗಿದೆ. ಇದರ ಜೊತೆಗೆ ವಾಯು ಮಾಲಿನ್ಯವನ್ನು ಉಂಟು ಮಾಡುತ್ತಿರುವ ವಾಹನಗಳನ್ನು ಪತ್ತೆಹಚ್ಚಲು ಸುಮಾರು 40 ತಂಡಗಳನ್ನು ರಚಿಸಲಾಗಿದೆ.

ವಾಹನ ಸವಾರರ ಗಮನಕ್ಕೆ, ಪಿಯುಸಿಸಿ ಹೊಂದಿಲ್ಲದ ವಾಹನಗಳಿಗೆ ಬೀಳುತ್ತಿದೆ ಭಾರೀ ಪ್ರಮಾಣದ ದಂಡ

ದೆಹಲಿ ಸಾರಿಗೆ ಇಲಾಖೆಯು ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿರುವ ಕಾರಣಕ್ಕೆ ಅಲ್ಲಿನ ವಾಹನ ಸವಾರರು ಪಿಯುಸಿಸಿ ಪಡೆಯಲು ಮುಂದಾಗಿದ್ದಾರೆ. ಇದರಿಂದಾಗಿ ಪಿಯುಸಿಸಿ ನೀಡುವ ಕೇಂದ್ರಗಳು ವಾಹನಗಳಿಂದ ತುಂಬಿ ಹೋಗಿವೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Vehicle owners without PUCC fined heavily by Delhi Police. Read in Kannada.
Story first published: Monday, August 17, 2020, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X