ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ದ್ವಿ ಚಕ್ರ ವಾಹನವಿರಲಿ, ನಾಲ್ಕು ಚಕ್ರದ ವಾಹನವಿರಲಿ ಯಾವುದೇ ವಾಹನಗಳಿಗೆ ರಿಜಿಷ್ಟ್ರೇಶನ್ ನಂಬರ್ ಕಡ್ಡಾಯ. ರಿಜಿಷ್ಟ್ರೇಶನ್ ನಂಬರ್ ಹೊಂದಿಲ್ಲದ ವಾಹನಗಳಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ವಾಹನಗಳಿಗೆ ನಂಬರ್ ಹೊಂದುವುದು ಕ್ರೇಜ್ ಆಗಿ ಬದಲಾಗಿದೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ಫ್ಯಾನ್ಸಿ ನಂಬರ್‍‍ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವವರಿದ್ದಾರೆ. ನಿಮ್ಮ ವಾಹನಗಳಲ್ಲಿರುವ ನಂಬರ್‍‍ಗಳು ನಿಮ್ಮ ಗುಣದ ಬಗ್ಗೆ ಹೇಳುತ್ತವೆ ಎಂದರೆ ನೀವು ನಂಬಲೇ ಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಿಮ್ಮ ವಾಹನದಲ್ಲಿರುವ ಎಲ್ಲಾ ನಂಬರ್‍‍ಗಳನ್ನು ಕೂಡಿಸಿ ಅವುಗಳನ್ನು ಸಿಂಗಲ್ ಡಿಜಿಟ್ ಮಾಡಿಕೊಳ್ಳಿ. ಇಂಗ್ಲೀಷ್‍‍ನಲ್ಲಿರುವ ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಮೌಲ್ಯವಿದೆ. ಇದರಿಂದಾಗಿ ನಿಮ್ಮ ವಾಹನದ ಸರಿಯಾದ ಸಿಂಗಲ್ ಡಿಜಿಟ್ ತಿಳಿಯಲಿದೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ಇಂಗ್ಲೀಷ್ ಅಕ್ಷರಗಳು ಹಾಗೂ ಅವುಗಳ ಮೌಲ್ಯಗಳು

A, I, J, Q, Y = 1

B, K, R = 2

C, G, L, S = 3

D, M, T = 4

E, H, N, X = 5

U, V, W = 6

O, Z = 7

F, P = 8

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ಉದಾಹರಣೆಗೆ TN 47 AV 6323 ರಿಜಿಸ್ಟ್ರೇಷನ್ ನಂಬರ್‍‍ನಲ್ಲಿ ಸಿಂಗಲ್ ಡಿಜಿಟ್ ಅನ್ನು ಹೇಗೆ ಕಂಡು ಹಿಡಿಯಬಹುದು ಎಂಬುದನ್ನು ನೋಡೋಣ. ಇಂಗ್ಲೀಷ್ ಅಕ್ಷರಗಳ ಜೊತೆಗೆ ನಂಬರ್‍‍ಗಳನ್ನು ಸಹ ಪರಿಗಣಿಸಬೇಕು.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ಇದರಿಂದಾಗಿ TN 47 AV 6323 ನಂಬರ್ ಅನ್ನು ಸಿಂಗಲ್ ಡಿಜಿಟ್ ಆಗಿ ಬದಲಾಯಿಸಬಹುದು. T+N+4+7+A+V+6+3+2+3. ಇದನ್ನು ಮೇಲೆ ಕೊಟ್ಟ ಅಂಕಿಗಳೊಂದಿಗೆ ಪರಿವರ್ತಿಸಿದಾಗ 4+5+4+7+1+6+6+3+2+3 = 41. 41 ನಂಬರನ್ನು 4+1ರಂತೆ ಕೂಡಿದಾಗ 5 ಆಗುತ್ತದೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ಈ ರೀತಿಯಾಗಿ ನಿಮ್ಮ ವಾಹನದ ನಂಬರ್ ಪ್ಲೇಟಿನಲ್ಲಿರುವ ನಂಬರ್‍‍ಗಳನ್ನು ಪೂರ್ತಿಯಾಗಿ ಕೂಡಿ ಸಿಂಗಲ್ ನಂಬರಿಗೆ ಪರಿವರ್ತಿಸಿಕೊಂಡಾಗ ನಿಮ್ಮ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು. ಈಗ ಯಾವ ಯಾವ ನಂಬರ್ ಏನು ಹೇಳುತ್ತದೆ ಎಂಬುದನ್ನು ನೋಡೋಣ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 1

1ನೇ ನಂಬರ್‍‍ನ ಅಧಿಪತಿ ಸೂರ್ಯ. ನಂಬರ್ 1ರ ಸಿಂಗಲ್ ಡಿಜಿಟ್ ವಾಹನವನ್ನು ಚಲಾಯಿಸುವವರು ಸರ್ಕಾರಿ ಉದ್ಯೋಗದಲ್ಲಿರುತ್ತಾರೆ. ಅವರೂ ಅರಣ್ಯ ಇಲಾಖೆಯಲ್ಲಿಯೂ ಸಹ ಇರಬಹುದು. ಅವರಿಗೆ ನಾನು ಎಂಬ ಅಹಂ ಇರುವುದರ ಜೊತೆಗೆ ಸ್ವಾರ್ಥಿಗಳಾಗಿರುತ್ತಾರೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 2

2ನೇ ನಂಬರಿನ ಅಧಿಪತಿ ಚಂದ್ರ. 2ನೇ ನಂಬರ್ ಅನ್ನು ಸಿಂಗಲ್ ಡಿಜಿಟ್ ಆಗಿ ಹೊಂದಿರುವವರು ಸೌಮ್ಯ ಸ್ವಭಾವದವರಾಗಿರುತ್ತಾರೆ. ಇದರ ಜೊತೆಗೆ ಅವರು ಹೆಚ್ಚು ಭಾವನಾ ಜೀವಿಗಳಾಗಿರುತ್ತಾರೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 3

3ನೇ ನಂಬರಿನ ಅಧಿಪತಿ ಗುರು. 3ನೇ ನಂಬರ್ ಅನ್ನು ಸಿಂಗಲ್ ಡಿಜಿಟ್ ಆಗಿ ಹೊಂದಿರುವವರು ಹೆಚ್ಚಾಗಿ ರಾಜಕೀಯದಲ್ಲಿ ಅಥವಾ ಆಡಳಿತಾತ್ಮಕ ಕೆಲಸಗಳಲ್ಲಿರುತ್ತಾರೆ. ಅವರು ಹಣಕ್ಕೆ ಹೆಚ್ಚು ಮನ್ನಣೆಯನ್ನು ನೀಡುತ್ತಾರೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 4

ರಾಹು 4ನೇ ನಂಬರಿನ ಅಧಿಪತಿ. 4ನೇ ನಂಬರ್ ಅನ್ನು ಹೊಂದಿರುವವರು ಆರ್ಥಿಕವಾಗಿ ಹೆಚ್ಚು ಬಲಿಷ್ಟರಾಗಿರುತ್ತಾರೆ. ಅವರಿಗೆ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ ಜೀವನದಲ್ಲಿ ಅವರು ಯಾವಾಗಲೂ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಸಂಬಂಧಗಳಿಗೆ ಹೆಚ್ಚು ಬೆಲೆಯನ್ನು ನೀಡುವುದಿಲ್ಲ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 5

5ನೇ ನಂಬರಿನ ಅಧಿಪತಿ ಬುಧ. 5ನೇ ನಂಬರ್ ಅನ್ನು ಸಿಂಗಲ್ ಡಿಜಿಟ್ ನಂಬರ್ ಆಗಿ ಹೊಂದಿರುವವರು ಹೆಚ್ಚು ಬುದ್ದಿಶಾಲಿಗಳಾಗಿರುತ್ತಾರೆ. ಇದರಿಂದಾಗಿ ಅವರು ವ್ಯವಹಾರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವರು ಬಾಲಿಶವಾಗಿ ಮಾತನಾಡುತ್ತಾರೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 6

6ನೇ ನಂಬರಿನ ಅಧಿಪತಿ ಶುಕ್ರ. ಈ ನಂಬರಿನ ವಾಹನಗಳನ್ನು ಹೊಂದಿರುವವರು ಕ್ರಿಯಾತ್ಮಕ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರೊಂದಿಗೆ ಕೆಲಸ ಮಾಡಲು ಜನರೂ ಸಹ ಇಷ್ಟ ಪಡುತ್ತಾರೆ. ಆದರೆ ಅವರು ಕುಡಿತಕ್ಕೆ ದಾಸರಾಗಿರುತ್ತಾರೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 7

7ನೇ ನಂಬರಿನ ಅಧಿಪತಿ ಕೇತು. 7ನೇ ನಂಬರಿನ ವಾಹನಗಳನ್ನು ಹೊಂದಿರುವವರು ಆಧ್ಯಾತ್ಮದ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ. ಯಾವುದೇ ತೀರ್ಮಾನವನ್ನು ಕೈಗೊಳ್ಳುವ ಮೊದಲು ಸಮಾಜದ ಒಳಿತಿಗಾಗಿ ಚಿಂತಿಸುತ್ತಾರೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 8

8ನೇ ನಂಬರಿನ ಅಧಿಪತಿ ಶನಿ. 8ನೇ ನಂಬರಿನ ವಾಹನಗಳನ್ನು ಹೊಂದಿರುವವರು ಜನರನ್ನು ಹೆಚ್ಚು ಸೆಳೆಯುತ್ತಾರೆ. ಜೊತೆಗೆ ಇವರು ಜನನಾಯಕರಾಗಿರುತ್ತಾರೆ. ಆದರೆ ಇವರ ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರಾಗುತ್ತಿರುತ್ತದೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 9

9ನೇ ನಂಬರಿನ ಅಧಿಪತಿ ಮಂಗಳ/ಅಂಗಾರಕ. ಈ ನಂಬರಿನ ವಾಹನಗಳನ್ನು ಚಲಾಯಿಸುವವರು ಹೆಚ್ಚು ಬುದ್ದಿವಂತರಾಗಿದ್ದು, ಯಾವುದೇ ತೀರ್ಮಾನಗಳನ್ನು ವೇಗವಾಗಿ ತೆಗೆದುಕೊಳ್ಳುತ್ತಾರೆ. ಅವರು ಜೀವನದ ಪ್ರತಿಯೊಂದು ಹಂತದಲ್ಲೂ ಚೆನ್ನಾಗಿರುತ್ತಾರೆ. ವೇಗವಾಗಿ ವಾಹನ ಚಲಾಯಿಸುವ ಇವರು ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನಂಬರ್ 0

ಈ ನಂಬರ್ ಯಾವುದೇ ಗ್ರಹಕ್ಕೂ ಸಂಬಂಧಪಟ್ಟಿಲ್ಲ. ಇವರ ಜೀವನ ಯಾವಾಗಲೂ ಏರುಪೇರಾಗುತ್ತಿರುತ್ತದೆ. ಆದರೆ ಇವರು ಅದೃಷ್ಟಶಾಲಿಗಳಾಗಿರುತ್ತಾರೆ. ತಮಗೆ ಬೇಕಾದೆಲ್ಲವನ್ನೂ ಪಡೆಯುತ್ತಿರುತ್ತಾರೆ. ಆದರೆ ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಂತರ ಅಸಹಾಯಕರಾಗುತ್ತಾರೆ.

ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತೆ ನಿಮ್ಮ ವಾಹನದ ನಂಬರ್‍..!

ನೀವೂ ಸಹ ಮೇಲೆ ತಿಳಿಸಿರುವ ಪ್ರಕಾರ ನಿಮ್ಮ ವಾಹನದ ನಂಬರ್‍‍ಗಳನ್ನು ಸಿಂಗಲ್ ಡಿಜಿಟಿಗೆ ಬದಲಾಯಿಸಿ, ಅದು ನಿಮ್ಮ ವ್ಯಕ್ತಿತ್ವ ಹಾಗೂ ಕೆಲಸಕ್ಕೆ ಸಂಬಂಧಪಟ್ಟಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

Article Published On: Tuesday, January 7, 2020, 11:22 [IST]
English summary
Is your car number lucky for you? - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+