ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊಸ ನಿಯಮ ಜಾರಿ... ಉಲ್ಲಂಘಿಸಿದರೆ ಎಫ್ಐಆರ್!

ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯಾದ್ಯಂತ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಉಂಟಾಗುವ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ವೇಗದ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳನ್ನು ಹೆಚ್ಚಿನ ವೇಗದಲ್ಲಿ ಚಲಾಯಿಸಿರುವ ಬಗ್ಗೆ ಪೊಲೀಸ್ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಈ ನಿಯಮ ಉಲ್ಲಂಘನೆಯಲ್ಲಿ ರಾಜ್ಯ ಸಾರಿಗೆ ಬಸ್‌ಗಳು ಕೂಡ ಇರುವುದನ್ನು ಬಹಿರಂಗಪಡಿಸಿದೆ. ಹಾಗಾಗಿ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಆಗಸ್ಟ್‌ 1 ರಿಂದ ನಿಯಮ ಉಲ್ಲಂಘನೆ ಮಾಡುವವರಿಗೆ ಬಿಸಿ ಮುಟ್ಟಿಸಲಿದ್ದಾರೆ. ಎಫ್ಐಆರ್ ಜೊತೆಗೆ ದಂಡ ಕೂಡ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಪೊಲೀಸರು ಆಗಸ್ಟ್ 1 ರಿಂದ 130 ಕಿ.ಮೀ ಗಿಂತ ಹೆಚ್ಚಿನ ವೇಗದ ಚಾಲಕರ ವಿರುದ್ಧ ಎಫ್ಐಆರ್ ದಾಖಲಿಸಲಿದ್ದಾರೆ. ಇದನ್ನು ಉಲ್ಲಂಘಿಸುವವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 1,000 ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಇದನ್ನು ಖಂಡಿತವಾಗಿ ಎಲ್ಲಾ ವಾಹನಗಳು ಪಾಲಿಸಲೇಬೇಕು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.

vehicle-speed-limit-new-law-in-karnataka-from-august-1st

ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಮಾತನಾಡಿ, ಶೇ.90ರಷ್ಟು ಅಪಘಾತಗಳು ಅತಿವೇಗದಿಂದ ಸಂಭವಿಸುತ್ತವೆ. ರಾಜ್ಯ ಸಾರಿಗೆ ಬಸ್ಸುಗಳು ಸೇರಿದಂತೆ ಬೆಂಗಳೂರು - ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಶೇ50 ರಷ್ಟು ವಾಹನಗಳು 130 ಕಿ.ಮೀ ವೇಗದ ಮಿತಿಯನ್ನು ಉಲ್ಲಂಘಿಸುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು.

ವಾಹನಗಳ ವೇಗವನ್ನು ಪರಿಶೀಲಿಸಲು ಮತ್ತು ಅನುಮತಿಸಲಾದ ವೇಗದ ಮಿತಿಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸಂಚಾರ ಮತ್ತು ರಸ್ತೆ ಸುರಕ್ಷತಾ ಇಲಾಖೆ, ಜಿಲ್ಲಾ ಪೊಲೀಸರ ಸಹಾಯದಿಂದ, ಎಲ್ಇಡಿ ಹೆಡ್‌ಲೈಟ್‌ಗಳನ್ನು ಬಳಸಿದ ಮತ್ತು ಏಕಮುಖ ನಿಯಮವನ್ನು ಉಲ್ಲಂಘಿಸಿದ ಚಾಲಕರ ವಿರುದ್ಧ ಇತ್ತೀಚೆಗೆ ಎಫ್ಐಆರ್ ದಾಖಲಿಸಲಾಗಿದೆ.

vehicle-speed-limit-new-law-in-karnataka-from-august-1st

ಜುಲೈ 25ರಂದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ 155 ವಾಹನಗಳು 130 ಕಿಮೀ. ಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸಿರುವುದನ್ನು ಗುರುತಿಸಲಾಗಿದೆ. ಅಚ್ಚರಿ ಎಂದರೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಮತ್ತು ಸರ್ಕಾರಿ ವಾಹನಗಳು ಕೂಡ 130 ಕಿ.ಮೀ ವೇಗವನ್ನು ಮೀರಿ ಸಂಚರಿಸಿವೆ. ಇನ್ನೂ ಕೆಲ ವಾಹನಗಳು 159 ಕಿ.ಮೀ ವೇಗದಲ್ಲಿ ಸಂಚರಿಸಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಹೆಚ್ಚಿನ ವೇಗದಲ್ಲಿ ಸಂಚಾರ ನಡೆಸಿರುವ ಕಾರುಗಳಲ್ಲಿ ಸಾಮಾನ್ಯ ಸಣ್ಣ ಕಾರುಗಳಿಗಿಂತ ದುಬಾರಿ ಕಾರುಗಳು ಹೆಚ್ಚಾಗಿವೆ ಎಂಬುದು ತಿಳಿದುಬಂದಿದೆ. ಇಂತಹ ಅಪಯಕಾರಿ ವೇಗಕ್ಕೆ ಕಡಿವಾಣ ಹಾಕುವ ದೃಷ್ಟಿಯಿಮದ 130 ಕಿಮೀಗಿಂತಲೂ ವೇಗವಾಗಿ ವಾಹನ ಚಾಲನೆ ಮಾಡಿದರೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

vehicle-speed-limit-new-law-in-karnataka-from-august-1st

ಸ್ಪಾಟ್ ಸ್ಪೀಡ್ ಮತ್ತು ಸೆಕ್ಷನಲ್ ಸ್ಪೀಡ್ ಅಧಾರದಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಮತ್ತು ದಂಡವನ್ನೂ ವಿಧಿಸಲಾಗುವುದು. ಸ್ಪಾಟ್ ಸ್ಪೀಡ್ ಎಂದರೆ ಕ್ಯಾಮೆರಾ ಸಮೀಪ ದಾಖಲಾಗುವ ವೇಗ. ಸೆಕ್ಷನಲ್ ಸ್ಪೀಡ್ ಎಂದರೆ ಎರಡು ಕ್ಯಾಮೆರಾಗಳ ಮಧ್ಯೆ ವಾಹನ ಸಾಗುವ ಸರಾಸರಿ ವೇಗ. ಈ ಎರಡೂ ಅಂಶಗಳನ್ನು ಪರಿಗಣಿಸಿ ದೂರು ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 30, 2024, 13:45 [IST]
English summary
Vehicle speed limit new law in karnataka from august 1st
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+