ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಟ್ರಾಫಿಕ್ ಸಿಗ್ನಲ್'ಗಳಲ್ಲಿ ಕಾಯುತ್ತಿರುವವರು ಗ್ರೀನ್ ಸಿಗ್ನಲ್ ಬೀಳಲು ಇನ್ನು ಕೆಲವು ಸೆಕೆಂಡುಗಳು ಉಳಿದಿರುವಾಗ ಸಿಗ್ನಲ್ ಜಂಪ್ ಮಾಡುವುದನ್ನು ದೇಶದ ಹಲವು ಭಾಗಗಳಲ್ಲಿ ಕಾಣಬಹುದು.

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಆದರೆ ಈ ರೀತಿ ಸಿಗ್ನಲ್ ಜಂಪ್ ಮಾಡುವುದು ಅತ್ಯಂತ ಅಪಾಯಕಾರಿ. ಸಿಗ್ನಲ್ ಜಂಪ್ ಮಾಡಿದರೆ ಯಾವ ರೀತಿಯಲ್ಲಿ ಅಪಾಯ ಸಂಭವಿಸಬಹುದು ಎಂದು ತಿಳಿಸಲು ಸೈಬರಾಬಾದ್ ಟ್ರಾಫಿಕ್ ಪೊಲೀಸರು ಸಿಸಿಟಿವಿ ವೀಡಿಯೊವೊಂದನ್ನು ಯೂಟ್ಯೂಬ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಗ್ನಲ್ ಜಂಪ್ ಮಾಡಿದಾಗ ಏನಾಗಬಹುದು ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಮೇ 31ರಂದು ಹೈದರಾಬಾದ್ ನಗರದಲ್ಲಿ ನಡೆದಿರುವ ಈ ಘಟನೆಯನ್ನು ಜಂಕ್ಷನ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯ ಮೂಲಕ ಹಲವಾರು ಆಂಗಲ್'ಗಳಿಂದ ತೋರಿಸಲಾಗಿದೆ. ಈ ವೀಡಿಯೊದಲ್ಲಿ ಎರಡು ವಾಹನಗಳು ಅಂದರೆ ಮಹೀಂದ್ರಾ ಬೊಲೆರೊ ಪಿಕ್ ಅಪ್ ಹಾಗೂ ಮಾರುತಿ ಸುಜುಕಿ ಇಕೊ ಸಿಗ್ನಲ್ ಜಂಪ್ ಮಾಡುತ್ತವೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಇದೇ ವೇಳೆ ಟ್ರಕ್'ವೊಂದು ಜಂಕ್ಷನ್‌ನತ್ತ ಧಾವಿಸುತ್ತಿತ್ತು. ಗ್ರೀನ್ ಸಿಗ್ನಲ್ ಇದ್ದ ಕಾರಣ ಟ್ರಕ್ ಚಾಲಕ ಟ್ರಕ್'ನ ವೇಗವನ್ನು ನಿಧಾನಗೊಳಿಸುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಸಿಗ್ನಲ್ ಜಂಪ್ ಮಾಡಿದ ಮಾರುತಿ ಸುಜುಕಿ ಇಕೊ ಹಾಗೂ ಮಹೀಂದ್ರಾ ಬೊಲೆರೊ ಪಿಕ್ ಅಪ್ ಟ್ರಕ್‌ಗೆ ಡಿಕ್ಕಿ ಹೊಡೆದಿವೆ.

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಟ್ರಕ್‌ಗೆ ಡಿಕ್ಕಿ ಹೊಡೆದ ಕಾರಣ ಇಕೊ ಹಾಗೂ ಬೊಲೆರೊ ಪಿಕ್-ಅಪ್ ವಾಹನಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಎರಡೂ ವಾಹನಗಳ ಚಾಲಕರಿಗೂ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಗ್ರೀನ್ ಸಿಗ್ನಲ್ ಇದ್ದ ಕಾರಣ ಟ್ರಕ್‌ ಸರಿಯಾಗಿಯೇ ಚಲಿಸಿದೆ. ಇಕೊ ಹಾಗೂ ಬೊಲೆರೊ ಪಿಕಪ್ ವಾಹನಗಳು ರೆಡ್ ಸಿಗ್ನಲ್ ಇದ್ದರೂ ಸಿಗ್ನಲ್ ಜಂಪ್ ಮಾಡಿವೆ. ಇದರಿಂದಾಗಿಯೇ ಈ ಅಪಘಾತ ಸಂಭವಿಸಿದೆ.

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಸಿಗ್ನಲ್ ಜಂಪ್ ಮಾಡುವುದು ಯಾವಾಗಲೂ ಅಪಾಯಕಾರಿಯಾಗಿರುತ್ತದೆ. ಮಳೆ ಬೀಳುವಾಗ ದೂರದಿಂದ ಬರುತ್ತಿರುವ ವಾಹನಗಳಿಗೆ ಸಿಗ್ನಲ್ ಸರಿಯಾಗಿ ಗೋಚರಿಸುವುದಿಲ್ಲ. ಈ ವೀಡಿಯೊದಲ್ಲಿ ಮಳೆ ಬೀಳುತ್ತಿರುವುದನ್ನು ಕಾಣಬಹುದು.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಸಿಗ್ನಲ್ ಜಂಪ್ ಮಾಡಿ ಕೆಲವೊಮ್ಮೆ ಅಪಘಾತದಿಂದ ತಪ್ಪಿಸಿ ಕೊಳ್ಳಬಹುದು. ಆದರೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಇ-ಚಲನ್ ಕಳುಹಿಸಲು ದೇಶದ ಬಲವು ಭಾಗಗಳಲ್ಲಿ ಸೆನ್ಸಾರ್ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಈಗ ಪೊಲೀಸರು ಸಹ ಇ-ಚಲನ್ ವಿತರಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅವಲಂಬಿಸಿದ್ದಾರೆ. ವಾಹನ ಸವಾರರು ಸಿಗ್ನಲ್'ಗಳಲ್ಲಿ ಮಾತ್ರವಲ್ಲದೇ ಟ್ರಾಫಿಕ್ ಜಂಕ್ಷನ್‌ ಹಾಗೂ ರಸ್ತೆ ತಿರುವುಗಳಲ್ಲಿ ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡುವುದು ಒಳ್ಳೆಯದು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಆದರೆ ಹಲವರು ಟ್ರಾಫಿಕ್ ಸಿಗ್ನಲ್‌ಗಳಿಗೆ ಯಾವುದೇ ಗೌರವ ನೀಡುವುದಿಲ್ಲ. ಜೊತೆಗೆ ಸಂಚಾರಿ ನಿಯಮಗಳ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವುದಿಲ್ಲ.ಬೇರೆ ರಸ್ತೆಯಿಂದ ಬೇರೆ ಯಾವುದರೂ ವಾಹನಗಳು ಬರುತ್ತಿವೆಯೇ ಎಂದು ಪರೀಕ್ಷಿಸಲು ಜಂಕ್ಷನ್‌ಗಳಲ್ಲಿ ನಿಧಾನವಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದು.

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

ಭಾರತದಲ್ಲಿ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವ ಮೂಲಕ ಸಮಯ ಉಳಿಸಲು ಪ್ರಯತ್ನಿಸುತ್ತಾರೆ. ಇಂತಹ ವಾಹನ ಸವಾರರಿಂದ ನಿಯಮಗಳನ್ನು ಸರಿಯಾಗಿ ಪಾಲಿಸುವ ವಾಹನ ಸವಾರರಿಗೂ ಅಪಾಯ ಎದುರಾಗುತ್ತದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಈಗ ಹಲವು ನಗರಗಳಲ್ಲಿ ಸಂಚಾರಿ ಪೊಲೀಸರು ಸಿಸಿಟಿವಿಗಳನ್ನು ಅಳವಡಿಸಿರುತ್ತಾರೆ. ಇವುಗಳನ್ನು ಪೊಲೀಸ್ ಸಿಬ್ಬಂದಿ ಪರಿಶೀಲಿಸುತ್ತಲೇ ಇರುತ್ತಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ನೋಂದಣಿ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಆ ವಾಹನಗಳ ಮಾಲೀಕರಿಗೆ ಇ-ಚಲನ್ ನೀಡಲಾಗುತ್ತದೆ.

ಸಿಗ್ನಲ್ ಜಂಪ್ ಮಾಡಿ ಅಪಘಾತಕ್ಕೀಡಾದ ವಾಹನಗಳು

2019ರಲ್ಲಿ ಜಾರಿಗೊಳಿಸಲಾದ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಸಂಚಾರಿ ನಿಯಮ ಉಲ್ಲಂಘನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ದಂಡ ಹೆಚ್ಚಳದ ಮುಖ್ಯ ಉದ್ದೇಶವಾಗಿದೆ.

Most Read Articles

Kannada
English summary
Vehicles met with an accident after signal jump. Read in Kannada.
Story first published: Wednesday, June 9, 2021, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X