ತಿರುವಿನಲ್ಲಿ ವಾಹನಗಳು ಕಣ್ಮರೆ: ನೀವು ಬುದ್ಧಿವಂತರಾದ್ರೆ ಈ ವಿಡಿಯೋ ಡಿಕೋಡ್ ಮಾಡಿ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ನಮ್ಮ ಊಹೆಗೂ ನಿಲುಕದಂತೆ ಮಾಡುತ್ತವೆ. ಅವು ಕೇವಲ ಭ್ರಮೆಯಿಂದ ಹಾಗೆ ಕಂಡರೂ ನಮ್ಮ ಮೆದುಳು ಮಾತ್ರ ಒಪ್ಪೋದಿಲ್ಲ. ಭ್ರಮೆಯನ್ನೇ ನಿಜವೆಂದುಕೊಳ್ಳುವಷ್ಟರ ಮಟ್ಟಿಗೆ ವಿಡಿಯೋಗಳು ನಮ್ಮನ್ನು ನಂಬಿಸುತ್ತವೆ. ಅಂತಹ ವಿಡಿಯೋವೊಂದು ಇಲ್ಲಿದೆ.
ಟ್ವಿಟ್ಟರ್‌ನಲ್ಲಿ ಸದ್ಯ ಸಖತ್ ವೈರಲ್ ಆಗಿರುವ ಈ ವಿಡಿಯೋ ಹಲವರನ್ನು ದಿಗ್ಭ್ರಮೆಗೊಳಿಸಿದೆ. ಸೇತುವೆ ಮೇಲೆ ಬರುತ್ತಿರುವ ವಾಹನಗಳು ತಿರುವು ಪಡೆದ ತಕ್ಷಣ ಕಣ್ಮರೆಯಾಗುತ್ತಿರುವುದನ್ನು ಕಂಡು ಎಂಥವರು ಒಂದು ಕ್ಷಣ ದಂಗಾಗುವಂತೆ ಮಾಡುತ್ತವೆ. ಆದ್ರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಸಲಿಯತ್ತು ಏನೆಂಬುದು ತಿಳಿಯುತ್ತದೆ. ಇದನ್ನು ಪತ್ತೆ ಹಚ್ಚುವುದು ನಿಮಗೆ ತುಸು ಕಷ್ಟವಾದ್ರೂ ಅಸಲಿಯತ್ತು ತಿಳಿಯಬೇಕಾದ್ರೆ ಕೊನೆಯವರೆಗೆ ಓದಿ.

ಮೊದಲೇ ಹೇಳಿದಂತೆ ಸೇತುವೆ ಮೇಲೆ ತಿರುವು ಪಡೆಯುತ್ತಿದ್ದಂತೆ ವಾಹನಗಳು ಕಣ್ಮರೆಯಾಗುತ್ತಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸೇತುವೆಗೆ ಯಾವುದೇ ನಿರ್ಗಮನ ಇಲ್ಲದಿರುವುದು. ವಾಹನಗಳು ಎಲ್ಲಿಗೆ ಹೋದವು ಎಂಬುದಕ್ಕೆ ಯಾವುದೇ ತಾರ್ಕಿಕ ಉತ್ತರವಿಲ್ಲ. ಆದ್ರೆ ಟ್ವಿಟರ್‌ನಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋಗೆ ನೂರಾರು ಮಂದಿ ತಮ್ಮದೇ ಆದ ಉತ್ತರಗಳನ್ನು ನೀಡಿದ್ದಾರೆ.
ಈ ವಿಡಿಯೋದಲ್ಲಿ ಸೇತುವೆ ಕೆಳಗೆ ಯಾವುದೋ ಪ್ರವಾಹದಿಂದ ನೀರು ಹರಿಯುತ್ತಿರುವಂತೆ ಕಾಣುತ್ತದೆ. ಆದ್ರೆ ನಿಜಕ್ಕೂ ಪ್ರವಾಹ ಹರಿದಿರುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಹಾಗದ್ರೆ ಪ್ರವಾಹದಂತೆ ಕಾಣುವ ದೃಷ್ಯಗಳನ್ನು ಎಡಿಟ್ ಮಾಡಲಾಗಿದೆಯೇ ಎಂದು ಕೇಳಿದ್ರೇ, ಖಂಡಿತವಾಗಿಯೂ ಇಲ್ಲ ಎಂದು ಹೇಳುತ್ತೇವೆ. ಇದು 100% ನಿಜವಾದ ವಿಡಿಯೋ ಆಗಿದ್ದು ಸ್ಥಳೀಯವಾಗಿ ಸೆರೆಹಿಡಿಯಲಾಗಿದೆ.
ಈಗಾಗಲೇ 30 ಮಿಲಿಯನ್ ವೀಕ್ಷಣೆಗಳೊಂದಿಗೆ ವೀಡಿಯೊ ಆನ್‌ಲೈನ್‌ನಲ್ಲಿ ಭಾರೀ ಎಂಗೇಜ್‌ಮೆಂಟ್ ಗಳಿಸಿದೆ. ಅನೇಕ ಜನರು ನಂಬಲು ಸಾಧ್ಯವಾಗದಿದ್ದರೂ, ಇದರ ಅಸಲಿಯತ್ತನ್ನು ಪತ್ತೆಹಚ್ಚಲು ತಲೆ ಬಿಸಿ ಮಾಡಿಕೊಂಡಿದ್ದಾರೆ. ಆದ್ರೆ ನಿಜಕ್ಕೆ ಇದು ನಮ್ಮ ಭ್ರಮೆಯಷ್ಟೆ ಅಲ್ಲಿ ಯಾವುದೇ ಪ್ರವಾಹವಿಲ್ಲ. ಬದಲಿಗೆ ಅಲ್ಲಿ ಸೇತುವೆಯ ಮುಂದುವೆರಿದ ಭಾಗವೇ ಪ್ರವಾಹದಂತಹ ದೃಷ್ಯಗಳನ್ನು ಒಳಗೊಂಡಿದೆ.
ಇನ್ನು ವಾಹನಗಳು ಎಲ್ಲಿಗೆ ಹೋಗುತ್ತಿವೆ ಎಂಬುದನ್ನು ನೋಡುವುದಾದರೆ, ಪ್ರವಾಹದಂತೆ ಕಾಣುವ ಆ ದೃಷ್ಯವು ಸೇತುವೆಯ ಮುಂದುವರಿದ ಭಾಗವಾದ್ದರಿಂದ ಅದರ ಕೆಳಗೆ ವಾಹನಗಳು ತೆರಳಲು ರಸ್ತೆಯಿದೆ. ಮೇಲ್ಛಾವಣಿಯು ನದಿಯಂತೆ ಕಾಣುವುದರಿಂದ ಏನೋ ವಿಚಿತ್ರ ನಡೆಯುತ್ತಿದೆ ಎಂದು ಮೆದುಳು ಭ್ರಮೆಗೆ ಒಳಗಾಗುತ್ತದೆ. ಏಕೆಂದ್ರೆ ಅದು ಪ್ರಬಲವಾದ ಜೂಮ್‌ನಿಂದ ರಚಿಸಲಾದ ಆಪ್ಟಿಕ್ ಭ್ರಮೆಯಾಗಿದೆ.
ಇದು ವಾಸ್ತವವಾಗಿ ಮೇಲ್ಸೇತುವೆ ಜೊತೆಗೆ ಸೇತುವೆಯಂತೆ ಕಾಣುವ ಮೇಲ್ಭಾಗವನ್ನು ಹೊಂದಿರುವ ಕಟ್ಟಡವಾಗಿದೆ. ಕ್ಯಾಮೆರಾವನ್ನು ಭ್ರಮೆಯಂತೆ ಕಾಣುವ ಮಟ್ಟಿಗೆ ದೃಶ್ಯಗಳನ್ನು ಸೆರೆಹಿಡಿದಿರುವುದರಿಂದ ಬಹುತೇಕರಿಗೆ ಇದು ನಂಬಲಸಾಧ್ಯದಂತೆ ಕಾಣುತ್ತದೆ. ಕ್ಯಾರಾವನ್ನು ಸಂಪೂರ್ಣವಾಗಿ ಜೂಮ್ ಔಟ್ ಮಾಡಿ ಪೂರ್ಣ ಸೇತುವೆಯನ್ನು ತೋರಿಸಿದರೆ ಅಸಲಿಯತ್ತನ್ನು ನಾವು ನೋಡಬಹುದು. ಅದರಲ್ಲಿ ವಾಸ್ತವವಾಗಿ ಕಾರುಗಳು ಪಕ್ಕದ ಬೀದಿಗೆ ತಿರುಗುತ್ತಿವೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications