ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಆಘಾತಕಾರಿ ವರದಿಗಳು ಹೊರಬಿದ್ದಿವೆ. ದೆಹಲಿಯಲ್ಲಿ ಮೊಬೈಲ್ ಫೋನ್ ಕಳ್ಳತನಕ್ಕಿಂತ ವಾಹನ ಕಳ್ಳತನಗಳು ಹೆಚ್ಚಾಗಿವೆ ಎಂಬುದು ಅಂಕಿಅಂಶಗಳಿಂದ ತಿಳಿದು ಬಂದಿದೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಈ ಅಂಕಿ ಅಂಶಗಳನ್ನು ದೆಹಲಿ ಪೊಲೀಸರೇ ದೃಢಪಡಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ 2011 ರಿಂದ 2020 ರ ನಡುವೆ 3.07 ಲಕ್ಷ ವಾಹನಗಳು ಕಳುವಾಗಿವೆ. ದೆಹಲಿಯಲ್ಲಿ ಪೂರ್ಣ ಲಾಕ್‌ಡೌನ್ ಜಾರಿಯಾಗಿದ್ದ ಸಮಯದಲ್ಲಿ ಹೆಚ್ಚು ವಾಹನಗಳು ಕಳ್ಳತನವಾಗಿವೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಕಳೆದ ವರ್ಷ ಮಾರ್ಚ್ 15 ರಿಂದ ಮಾರ್ಚ್ 30 ರ ನಡುವೆ 1,243 ವಾಹನಗಳನ್ನು ಕಳವು ಮಾಡಲಾಗಿದೆ. ಅಂದರೆ ದಿನಕ್ಕೆ ಸರಾಸರಿ 83 ವಾಹನಗಳನ್ನು ಕಳವು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಇದರಿಂದ ದೆಹಲಿ ರಾಷ್ಟ್ರ ರಾಜಧಾನಿ ಮಾತ್ರವಲ್ಲದೇ ವಾಹನ ಕಳ್ಳತನಕ್ಕೂ ರಾಜಧಾನಿಯಾಗುತ್ತಿದೆ ಎಂಬ ಕುಖ್ಯಾತಿಯನ್ನು ಪಡೆಯುತ್ತಿದೆ. 2019 ರಲ್ಲಿ ಪ್ರತಿ 12 ನಿಮಿಷಕ್ಕೆ ಒಂದು ವಾಹನವನ್ನು ಕಳವು ಮಾಡಲಾಗಿದೆ ಎಂದು ರಾಷ್ಟ್ರೀಯ ಕ್ರಿಮಿನಲ್ ರೆಕಾರ್ಡ್ಸ್ ಬ್ಯೂರೋದ ಅಂಕಿ ಅಂಶಗಳು ತಿಳಿಸಿವೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಈ ಅಂಕಿ ಅಂಶಗಳಿಂದ ಇತರ ದೊಡ್ಡ ನಗರಗಳಿಗೆ ಹೋಲಿಸಿದರೆ ದೆಹಲಿ ನಗರವು ವಾಹನಗಳಿಗೆ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ. ಇನ್ನು ನಮ್ಮ ಬೆಂಗಳೂರಿನಲ್ಲಿ ಪ್ರತಿ ಎರಡು ಗಂಟೆಗಳಿಗೆ ಒಂದು ವಾಹನ ಕಳುವಾಗುತ್ತದೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಮುಂಬೈನಲ್ಲಿ ಪ್ರತಿ ನಾಲ್ಕು ಗಂಟೆಗಳಿಗೆ ಒಂದು ವಾಹನವು ಕಳ್ಳತನವಾಗುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ವಾಹನ ಕಳ್ಳತನ ಪ್ರಕರಣಗಳು ಹಲವು ಪಟ್ಟು ಹೆಚ್ಚಾಗಿವೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಅದರಲ್ಲೂ ದೆಹಲಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ. ಕಳುವು ಮಾಡಲಾದ ವಾಹನಗಳ ಪೈಕಿ 2020 ರಲ್ಲಿ ಕೇವಲ 11.94% ನಷ್ಟು ವಾಹನಗಳನ್ನು ಮಾತ್ರ ವಶ ಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ 72% ನಷ್ಟು ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ವಾಹನಗಳ್ಳರು ಬಳಸುವ ವಿನೂತನ ತಂತ್ರಗಳಿಂದಾಗಿ ವಾಹನಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ವಾಹನಗಳ್ಳರು ಪೊಲೀಸರಿಂದ ಪಾರಾಗಲು ತಾಂತ್ರಿಕ ಪ್ರಗತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಇತ್ತೀಚೆಗೆ ಸೂರತ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ 200 ಕ್ಕೂ ಹೆಚ್ಚು ವಾಹನಗಳನ್ನು ವಶ ಪಡಿಸಿಕೊಂಡಿದ್ದರು. ಬಹುತೇಕ ವಾಹನ ಕಳ್ಳತನದ ಪ್ರಕರಣಗಳು ರಾತ್ರಿಯಲ್ಲಿ ನಡೆಯುತ್ತವೆ.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಅದರಲ್ಲೂ ಅಸುರಕ್ಷಿತ ಪ್ರದೇಶಗಳಿಂದಲೇ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಕಳುವು ಮಾಡಲಾಗಿದೆ. ವಾಹನಗಳು ಕಳುವಾಗುವುದನ್ನು ತಡೆಯಲು ವಾಹನಗಳನ್ನು ಆದಷ್ಟು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸಬೇಕು.

ವಾಹನ ಕಳ್ಳತನದಿಂದ ಕುಖ್ಯಾತಿಗೆ ಒಳಗಾಗುತ್ತಿರುವ ರಾಷ್ಟ್ರ ರಾಜಧಾನಿ

ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿರುವ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿದರೆ, ಕಳುವು ಮಾಡುವವರನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ. ವಾಹನಗಳಲ್ಲಿ ಜಿಪಿಎಸ್ ನಂತಹ ಸುರಕ್ಷತಾ ಫೀಚರ್'ಗಳಿದ್ದರೆ ವಾಹನಗಳು ಕಳುವಾದ ತಕ್ಷಣವೇ ಪತ್ತೆ ಹಚ್ಚಬಹುದು. ಈ ಬಗ್ಗೆ ಸಿಎನ್‌ಬಿಸಿಟಿವಿ 18 ವರದಿ ಮಾಡಿದೆ.

Most Read Articles

Kannada
English summary
Vehicles theft increasing in Delhi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X