ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಖ್ಯಾತ ಹಾಲಿವುಡ್‌ ಸಿನಿಮಾಗಳಲ್ಲಿ ಒಂದಾಗಿರುವ ಜೇಮ್ಸ್ ಬಾಂಡ್‌ಗೆ ವಿಶ್ವದಾದ್ಯಂತ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಈ ಸಿನಿಮಾಗಳಲ್ಲಿ ಆಕ್ಷನ್ ಸೀಕ್ವೆನ್ಸ್‌ಗಳು ಹೆಚ್ಚು ಪ್ರಮುಖ್ಯತೆ ಪಡೆದುಕೊಂಡಿರುವುದರಿಂದ ದುಬಾರಿ ಬೈಕ್ ಹಾಗೂ ಕಾರುಗಳನ್ನು ಬಳಸಲಾಗುತ್ತದೆ. ಸಿನಿಮಾ ಶೂಟ್‌ ಮುಗಿದ ಬಳಿಕ ಆ ಎಲ್ಲಾ ಕಾರುಗಳನ್ನು ಹರಾಜು ಮಾಡಲಾಗುತ್ತದೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಇದೀಗ ಅದೇ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಳಸಿದ್ದ ಸುಮಾರು 60 ಕಾರುಗಳು ಹರಾಜಾಗಲು ಸಿದ್ದವಾಗಿವೆ. ಇತ್ತೀಚಿನ ಜೇಮ್ಸ್ ಬಾಂಡ್ ಚಲನಚಿತ್ರದ ಚಿತ್ರೀಕರಣದಲ್ಲಿ ಬಳಸಲಾದ 60 ಕಾರುಗಳು ಹರಾಜಾಗಲಿದ್ದು, ಅವುಗಳಲ್ಲಿ ಕೆಲವು ಅಸಾಧಾರಣವಾಗಿ ಹೆಚ್ಚಿನ ಬೆಲೆಗೆ ಹೋಗುವ ನಿರೀಕ್ಷೆಯಿದೆ. ಈ ಕಾರುಗಳಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್, ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಮತ್ತು ಜಾಗ್ವಾರ್ ಎಕ್ಸ್‌ಎಫ್ ಸೇರಿವೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಜೇಮ್ಸ್ ಬಾಂಡ್ ಚಲನಚಿತ್ರ ನಿರ್ಮಾಣ ಸಂಸ್ಥೆಯು ಅತ್ಯಂತ ಅಪ್ರತಿಮ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಆಕ್ಷನ್ ಸೀಕ್ವೆನ್ಸ್‌ಗಳಿಗೆ ಹೆಸರುವಾಸಿಯಾಗುವುದರ ಹೊರತಾಗಿ, ಜೇಮ್ಸ್ ಬಾಂಡ್ ಚಲನಚಿತ್ರಗಳು ಕೆಲವು ಅತ್ಯಂತ ದುಬಾರಿ ಕಾರುಗಳನ್ನು ಮತ್ತು ಕೆಲವೊಮ್ಮೆ ಮೋಟಾರ್‌ಸೈಕಲ್‌ಗಳನ್ನು ಬಳಸುವುದರಲ್ಲಿ ಬಹಳ ಹೆಸರುವಾಸಿಯಾಗಿದೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಅದೇ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿರುವ ನಿರ್ಮಾಣ ಸಂಸ್ಥೆ, ಇತ್ತಿಚೆಗೆ ತೆರೆಕಂಡಿದ್ದ ಜೇಮ್ಸ್‌ ಬಾಂಡ್ ನೋ ಟೈಮ್ ಟು ಡೈ ಸಿನಿಮಾದಲ್ಲಿ ಅತ್ಯಂತ ದೊಡ್ಡ ಕಪ್ಪು ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಗಳನ್ನು ಇದರಲ್ಲಿ ಬಳಸಿತ್ತು. ಈ SUVಗಳು ಜಿಗಿತ, ಉರುಳುವುದು, ಕ್ರ್ಯಾಶ್ ಮಾಡುವುದು ಮತ್ತು ಆಫ್-ರೋಡ್‌ಗಳಲ್ಲಿ ಹೈ-ಸ್ಪೀಡ್ ಚೇಸ್ ಸೀಕ್ವೆನ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದವು.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಸದ್ಯ ಅಭಿಮಾನಿಗಳಲ್ಲಿ ಹೆಚ್ಚು ಕ್ರೇಜ್ ಹುಟ್ಟುಹಾಕಿರುವ ಈ ಕಾರುಗಳಿಗೆ ಭಾರೀ ಹಣ ಹರಿದುಬರುವ ನಿರೀಕ್ಷೆಯಿದೆ. ಈ ಕಾರುಗಳನ್ನು ಬ್ರಿಟಿಷ್ ಹರಾಜು ಸಂಸ್ಥೆ ಹರಾಜಿಗೆ ಇಟ್ಟಿದೆ. ಈ ಎಲ್ಲಾ ಕಾರುಗಳನ್ನು ಜೇಮ್ಸ್ ಬಾಂಡ್ ಚಲನಚಿತ್ರಗಳಲ್ಲಿ ಸಾಹಸಕ್ಕಾಗಿ ಬಳಸಲಾಗಿತ್ತು. ಹರಾಜಾದ ಕೆಲವು ಕಾರುಗಳ ಆದಾಯವನ್ನು ನೇರವಾಗಿ ರೆಡ್‌ಕ್ರಾಸ್‌ಗೆ ನೀಡಲು ಯೋಜಿಸಲಾಗಿದೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಈ ಕಾರುಗಳಲ್ಲಿ, ಲ್ಯಾಂಡ್ ರೋವರ್ ಡಿಫೆಂಡರ್ ಅತ್ಯಂತ ಜನಪ್ರಿಯ ಕಾರಾಗಿದೆ. ಇದೊಂದೆ ಅಲ್ಲದೇ ಉಳಿದೆಲ್ಲಾ ಕಾರುಗಳು ಚಲನಚಿತ್ರಕ್ಕಾಗಿ ಪ್ರತ್ಯೇಕವಾಗಿ ತಯಾರಿಸಲ್ಪಟ್ಟಿದ್ದವು. ಉತ್ಪಾದನಾ ಘಟಕದಿಂದ ಚಲನಚಿತ್ರಕ್ಕಾಗಿ ನೇರವಾಗಿ ನೀಡಲಾಗಿತ್ತು. ಈ ಕಾರಿನ ಚಾಸಿಸ್ ಸಂಖ್ಯೆಯನ್ನು ಸಹ 007 ಎಂದು ನೀಡಲಾಗಿದೆ. ಈ ಕಾರು ಗರಿಷ್ಠ 5 ಲಕ್ಷ ಪೌಂಡ್‌ಗಳು (4.82 ಕೋಟಿ ರೂಪಾಯಿ) ಪಡೆಯುವ ನಿರೀಕ್ಷೆಯಿದೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಹರಾಜಾಗಲಿರುವ ಕಾರುಗಳ ಪಟ್ಟಿಗೆ ಸಂಬಂಧಿಸಿದಂತೆ, ರೇಂಜ್ ರೋವರ್ ಸ್ಪೋರ್ಟ್ಸ್ SVRS SUV ಮತ್ತು ಜಾಗ್ವಾರ್ XF ಸಲೂನ್‌ಗಳು ಸಹ ಇವೆ. ಇವನ್ನು ನೋ ಟೈಮ್ ಟು ಡೈ ಚಿತ್ರದಲ್ಲಿ ಖಳನಾಯಕರು ಬಳಸಿದ್ದಾರೆ. ಇದರಲ್ಲಿ ರೋವರ್ ಸ್ಪೋರ್ಟ್ಸ್ ಎಸ್‌ವಿಆರ್‌ಎಸ್ ಎಸ್‌ಯುವಿ ಕಾರು 1.2 ಲಕ್ಷ ಪೌಂಡ್ ಅಂದರೆ ಭಾರತೀಯ ಮೌಲ್ಯದಲ್ಲಿ 1.15 ಕೋಟಿ ರೂಪಾಯಿಗೆ, ಜಾಗ್ವಾರ್ ಎಕ್ಸ್‌ಎಫ್ ಸಲೂನ್ ಕಾರು 70,000 ಪೌಂಡ್ ಅಂದರೆ ಭಾರತೀಯ ಮೌಲ್ಯದಲ್ಲಿ 67 ಲಕ್ಷ ರೂಪಾಯಿಗೆ ಹರಾಜಾಗುವ ನಿರೀಕ್ಷೆಯಿದೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಈ ಬಾರಿಯ ಹರಾಜಿನಲ್ಲಿ ಡಿಫೆಂಡರ್ ಎಸ್‌ಯುವಿ ಕಾರು ಲಭ್ಯವಿಲ್ಲ. ನೋ ಟೈಮ್ ಟು ಡೈ ಚಿತ್ರದಲ್ಲಿ ಇದು ಪ್ರಮುಖವಾಗಿ ಕಾಣಿಸಿಕೊಂಡಿದೆ. ಆದರೆ ಈ ಹರಾಜಿನಲ್ಲಿ ಸ್ಥಾನ ಪಡೆದಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ಹರಾಜಿನಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್ 110 ವಿ8 ಬಾಂಡ್ ಎಡಿಷನ್ ಕಾರು ಸ್ಥಾನ ಪೆಡೆದುಕೊಂಡಿದೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಈ ಕಾರು ನೋ ಟೈಮ್ ಟು ಡೈ ಚಿತ್ರದಲ್ಲಿಯೂ ಕಾಣಿಸಿಕೊಂಡು ಭಾರೀ ಸದ್ದು ಮಾಡಿತ್ತು. ಈ ಕಾರು ವಿಶೇಷ ಆವೃತ್ತಿಯ ಕಾರಾಗಿದ್ದು, ಒಟ್ಟು 300 ಕಾರುಗಳನ್ನು ಮಾತ್ರ ಉತ್ಪಾದಿಸಲಾಗಿತ್ತು. ಈ ಕಾರು ಸುಮಾರು 3 ಲಕ್ಷ ಪೌಂಡ್‌ಗಳು ಅಂದರೆ ಭಾರತೀಯ ಮೌಲ್ಯದಲ್ಲಿ 2.88 ಕೋಟಿ ರೂ. ಪಡೆದುಕೊಳ್ಳುವ ನಿರೀಕ್ಷೆಯಿದೆ.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಲಂಡನ್‌ನ ಕ್ರಿಸ್ಟೀಸ್‌ನಲ್ಲಿ ಸೆಪ್ಟೆಂಬರ್ 28 ರಂದು ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಆಹ್ವಾನಿತರು ಮಾತ್ರ ಭಾಗವಹಿಸಬಹುದು. ಡಿಫೆಂಡರ್, ರೇಂಜ್ ರೋವರ್ ಮತ್ತು ಜಾಗ್ವಾರ್ ಕಾರುಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹರಾಜು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ನಿಕ್ ಕಾಲಿನ್ಸ್ ಹೇಳಿದ್ದಾರೆ. ಈ ಹರಾಜು ಜೇಮ್ಸ್ ಬಾಂಡ್ ಕಾರು ಸಂಗ್ರಾಹಕರಿಗೆ ಭಾರೀ ವರದಾನವಾಗಲಿದೆ. ಈ ಹಣದ ಹೆಚ್ಚಿನ ಭಾಗವನ್ನು ದಾನ ಮಾಡಲಾಗುವುದು.

ಹರಾಜಿಗೆ ಸಜ್ಜಾಗಿವೆ ಜೇಮ್ಸ್‌ ಬಾಂಡ್ ಸಿನಿಮಾದಲ್ಲಿ ಮಿಂಚಿದ್ದ ದುಬಾರಿ ಕಾರುಗಳು

ಡಿಫೆಂಡರ್ V8 ಬಾಂಡ್ ಆವೃತ್ತಿಯು ಈ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ. ಇದು 60 ವರ್ಷಗಳಿಂದ ಅನುಸರಿಸುತ್ತಿರುವ ಜೇಮ್ಸ್ ಬಾಂಡ್ ಲೋಗೋವನ್ನು ಹೊಂದಿದೆ. ಲಾಂಛನದ ಮೂಲಕವೇ ಮಾರಾಟ ವಾಗಲಿದ್ದು, ಇದು ವಿಶೇಷವಾಗಿದೆ. ಹಾಗಾಗಿ ಈ ಕಾರು ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

Most Read Articles

Kannada
English summary
Vehicles Used In No Time To Die Movie To Be Sold In Auction
Story first published: Tuesday, August 2, 2022, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X