ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ದೆಹಲಿ ಪೊಲೀಸರು ಇಂದಿನಿಂದ ಭಾರೀ ಪ್ರಮಾಣದ ದಂಡ ವಿಧಿಸಲಿದ್ದಾರೆ. ರಾಜ್ಯದ ಎಲ್ಲಾ ವಾಹನಗಳು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದುವುದು ಕಡ್ಡಾಯವೆಂದು ದೆಹಲಿ ಪೊಲೀಸರು ಈ ಹಿಂದೆಯೇ ನೋಟಿಸ್‌ನಲ್ಲಿ ತಿಳಿಸಿದ್ದರು.

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ನಿಯಮ ಉಲ್ಲಂಘಿಸುವ ವಾಹನಗಳಿಗೆ ಡಿಸೆಂಬರ್ 15ರಿಂದ ದಂಡ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ರೂ.5,500ಗಳ ದಂಡ ವಿಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿಯ 9 ಪ್ರದೇಶಗಳಲ್ಲಿರುವ ಪೊಲೀಸರ ತಂಡವು ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸಲಿದೆ.

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ವಾಹನಗಳಲ್ಲಿ ಹೊಸ ನಂಬರ್ ಪ್ಲೇಟ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ 2018ರ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಇದರ ಹೊರತಾಗಿಯೂ ದೆಹಲಿಯಲ್ಲಿ ಅತಿ ಕಡಿಮೆ ಸಂಖ್ಯೆಯ ವಾಹನಗಳು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನು ಹೊಂದಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ದೆಹಲಿ ಸಾರಿಗೆ ಇಲಾಖೆಯ ಪ್ರಕಾರ 40 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿವೆ. ದೆಹಲಿ ಸಾರಿಗೆ ಇಲಾಖೆಯು ನವೆಂಬರ್ 16ರಂದು ನೋಟಿಸ್ ನೀಡಿ ವಾಹನಗಳು ಹಳೆಯ ನಂಬರ್ ಪ್ಲೇಟ್ ಬದಲಿಗೆ ಹೊಸ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದುವುದು ಕಡ್ಡಾಯವೆಂದು ತಿಳಿಸಿತ್ತು.

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಅಧಿಕೃತ ವಾಹನ ಮಾರಾಟಗಾರರಿಂದ ಅಥವಾ ಸರ್ಕಾರಿ ಪರವಾನಗಿ ಹೊಂದಿರುವವರಿಂದ ವಾಹನ ಸವಾರರು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನುಪಡೆಯಬಹುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

2019ರ ಏಪ್ರಿಲ್ 1ರ ಮೊದಲು ಖರೀದಿಸಿದ ವಾಹನಗಳಲ್ಲಿ ಹೊಸ ನಂಬರ್ ಪ್ಲೇಟ್ ಹಾಗೂ ಹೊಲೊಗ್ರಾಮ್ ಸ್ಟಿಕ್ಕರ್ ಅಳವಡಿಸುವುದು ಕಡ್ಡಾಯವಾಗಿದೆ. 2019ರ ಏಪ್ರಿಲ್ 1ರ ನಂತರ ಖರೀದಿಸಿದ ವಾಹನಗಳಲ್ಲಿ ವಿತರಕರು ಹೊಸ ನಂಬರ್ ಪ್ಲೇಟ್‌ ಹಾಗೂ ಹೊಲೊಗ್ರಾಮ್ ಸ್ಟಿಕ್ಕರ್‌ಗಳನ್ನು ಅಳವಡಿಸುತ್ತಿದ್ದಾರೆ.

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳು ಸಾಮಾನ್ಯ ನಂಬರ್ ಪ್ಲೇಟ್ ಗಳಂತೆಯೇ ಕಂಡು ಬರುತ್ತವೆಯಾದರೂ ಅದರ ತಾಂತ್ರಿಕ ಲಕ್ಷಣಗಳು ವಿಭಿನ್ನವಾಗಿವೆ. ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ನಲ್ಲಿ ಕ್ರೋಮಿಯಂ ಹೊಲೊಗ್ರಾಮ್ ಸ್ಟಿಕ್ಕರ್ ಅನ್ನು ಬಳಸಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಈ ಸ್ಟಿಕ್ಕರ್ ವಾಹನಕ್ಕೆ ಸಂಬಂಧಿಸಿದ ಮಾಹಿತಿಗಳಾದ ರಿಜಿಸ್ಟ್ರೇಶನ್ ನಂಬರ್, ಎಂಜಿನ್ ನಂಬರ್, ಚಾಸಿಸ್ ನಂಬರ್ ಮುಂತಾದವುಗಳನ್ನು ಹೊಂದಿರುತ್ತದೆ. ಈ ಮಾಹಿತಿಗಳನ್ನು ಹೊಲೊಗ್ರಾಮ್ ಸ್ಟಿಕ್ಕರ್‌ನಲ್ಲಿ ಯಂತ್ರದಿಂದ ದಾಖಲಿಸಲಾಗುತ್ತದೆ.

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಇವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಯಂತ್ರದಿಂದ ಮಾತ್ರ ಓದಬಹುದು. ಈ ಹೊಲೊಗ್ರಾಮ್ ಸ್ಟಿಕ್ಕರ್ ಅನ್ನು ಹಾಟ್-ಸ್ಟ್ಯಾಂಪಿಂಗ್ ಮೂಲಕ ಅಳವಡಿಸಲಾಗುತ್ತದೆ. ಕಾರು ಅಥವಾ ಬೈಕುಗಳನ್ನು ಕದ್ದ ನಂತರ ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್‌ಗಳನ್ನು ಬದಲಿಸುತ್ತಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಇದರಿಂದಾಗಿ ಪೊಲೀಸರಿಗೆ ವಾಹನವನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನು ಅಲವಡಿಸಿದರೆ ಅದರಲ್ಲಿರುವ ಪ್ಲೇಟ್ ಹಾಗೂ ಸ್ಟಿಕ್ಕರ್ ಅನ್ನು ತೆಗೆದುಹಾಕಲು ಸಾಧ್ಯವಿಲ್ಲ.

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಅವುಗಳನ್ನು ತೆಗೆದುಹಾಕಲು ಯತ್ನಿಸಿದರೆ ಸ್ಟಿಕ್ಕರ್ ಜೊತೆಗೆ ನಂಬರ್ ಪ್ಲೇಟ್ ಸಹ ನಾಶವಾಗುತ್ತದೆ. ಸರ್ಕಾರದ ಸೂಚನೆಯಂತೆ ವಾಹನಕ್ಕೆ ಸಂಬಂಧಿಸಿದ ವಿತರಕರಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನು ಅಳವಡಿಸುವ ಕಾರ್ಯವನ್ನು ವಹಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಇದಕ್ಕಾಗಿ ವಾಹನ ಮಾರಾಟಗಾರರು ವಾಹನ ತಯಾರಕ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. 2019ರ ಏಪ್ರಿಲ್ 1ರ ನಂತರ ವಾಹನ ಖರೀದಿದಾರರು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದುವುದು ಕಡ್ಡಾಯವಾಗಿದೆ. ಹೊಸ ನಂಬರ್ ಪ್ಲೇಟ್ ಇಲ್ಲದೆ ರಿಜಿಸ್ಟರ್ ನಂಬರ್ ಅನ್ನು ನೀಡಲಾಗುವುದಿಲ್ಲ. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದದಿದ್ದರೇ ವಾಹನದ ಸುರಕ್ಷತೆಗೆಧಕ್ಕೆಯುಂಟಾಗುತ್ತದೆ. ಈ ಕಾರಣಕ್ಕೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಹೊಂದುವುದು ಸೂಕ್ತ.

Most Read Articles

Kannada
English summary
Vehicles without high security registration plate to get huge fine. Read in Kannada.
Story first published: Tuesday, December 15, 2020, 16:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X