ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಯಾವುದೇ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಬಳಿಕ ನಿವೃತ್ತಿಯಾದ ನಂತರ ಆ ವ್ಯಕ್ತಿಗೆ ಸನ್ಮಾನಿಸುವುದು ಮತ್ತು ಬೀಳ್ಕೊಡುಗೆಯನ್ನು ನೀಡುವುದು ಸಾಮಾನ್ಯ. ಆದರೆ ಇಲ್ಲಿ ಬಹಳ ದೀರ್ಘಕಾಲದವರೆಗೆ ಸೇವಿ ಸಲ್ಲಿಸಿದ ವಾಹನಕ್ಕೆ ಭಾವಪೂರ್ಣ ವಿದಾಯವನ್ನು ಹೇಳಿದ್ದಾರೆ.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಮಾರುತಿ ಜಿಪ್ಸಿ ವಾಹನಕ್ಕೆ ಭಾವಪೂರ್ಣ ವಿದಾಯವನ್ನು ಹೇಳಿರುವ ಘಟನೆಯು ವೆಲ್ಲೂರು ಅಂಚೆ ಕಚೇರಿಯಲ್ಲಿ ನಡೆದಿದೆ. ಈ ಮಾರುತಿ ಜಿಪ್ಸಿಯು 22 ವರ್ಷಗಳ ಕಾಲ ವೆಲ್ಲೂರು ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿದೆ. ಎರಡು ದಶಕಗಳಿಂದ ಜಿಪ್ಸಿಯನ್ನು ಅಂಚೆ ಕಚೇರಿ ಅಧೀಕ್ಷಕರ ಪರಿಶೀಲನಾ ವಾಹನವಾಗಿ ಬಳಸಲಾಗುತ್ತಿತ್ತು. ಈ ಮಾರುತಿ ಜಿಪ್ಸಿಯನ್ನು ಇಲಾಖೆಯು 1999ರ ಮಾರ್ಚ್ 24 ರಂದು ಖರೀದಿಸಲಾಗಿದೆ ಮತ್ತು ಇದನ್ನು 25 ಅಧೀಕ್ಷಕರು ಬಳಸಿದ್ದಾರೆ.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಜಿಲ್ಲೆಯ ಜವಾಧು ಬೆಟ್ಟಗಳು ಸೇರಿದಂತೆ ಅನೇಕ ಬೆಟ್ಟ ಪ್ರದೇಶಗಳಲ್ಲಿನ ಅಂಚೆ ಕಚೇರಿಗಳಿಗೆ ಭೇಟಿ ನೀಡಲು ಈ ಜಿಪ್ಸಿಯನ್ನು ಮುಖ್ಯವಾಗಿ ಬಳಸಲಾಗುತ್ತಿತ್ತು. ಈ ವಾಹನದಲ್ಲಿ ತಮ್ಮ ಜೀವಿತಾವಧಿಯಲ್ಲಿ ಇಲ್ಲಿಯವರೆಗೆ ಅಪಘಾತವನ್ನು ಎದುರಿಸಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಜಿಪ್ಸಿಯ ಬೀಳ್ಕೊಡುಗೆ ಸಮಾರಂಭದಲ್ಲಿ ವೆಲ್ಲೂರು ಅಂಚೆ ಕಚೇರಿಯ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳು ಭಾಗಿಯಾಗಿದ್ದರು. ವಿದಾಯ ಸಮಾರಂಭದಲ್ಲಿ ಇಲಾಖೆ ವಾಹನಕ್ಕೆ ಹೂಮಾಲೆ ಹಾಕಿದ್ದಾರೆ. ಅಲ್ಲದೇ ಎಲ್ಲರಿಗೂ ಸಿಹಿತಿಂಡಿಗಳನ್ನು ವಿತರಿಸಿದ ನೌಕರರು ವಂದಿಸಿದರು ಮತ್ತು ವಾಹನದೊಂದಿಗೆ ಚಿತ್ರಗಳನ್ನು ತೆಗೆದುಕೊಂಡರು

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಇಲಾಖೆಯ ನಿಯಮಗಳ ಪ್ರಕಾರ ಈ ಮಾರುತಿ ಜಿಪ್ಸಿಯನ್ನು ಈಗ ಮೇಲ್ ಮೋಟಾರ್ ಸೇವೆಗೆ ಹಸ್ತಾಂತರಿಸಲಾಗುವುದು ಮತ್ತು ಸರ್ಕಾರದ ಮಾನದಂಡಗಳ ಪ್ರಕಾರ ವಿಲೇವಾರಿ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಭಾರತದ ರಸ್ತೆಗಳಲ್ಲಿ 34 ವರ್ಷಗಳ ಕಾಲ ರಾಜನಾಗಿ ಮೆರೆದಿದ್ದ ಮಾರುತಿ ಸುಜುಕಿ ಜಿಪ್ಸಿಯನ್ನು 2019ರ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಮಾರುತಿ ಸುಜುಕಿ ಕಂಪನಿಯ ಈ ಜಿಪ್ಸಿ ಆಫ್ ರೋಡ್ ಪ್ರಿಯರ ಮೆಚ್ಚಿನ ಮಿನಿ ಎಸ್‍ಯುವಿಯಾಗಿತ್ತು.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಮಾರುತಿ ಜಿಪ್ಸಿ 1985ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಬಿಡುಗಡೆಯಾದಾಗಿನಿಂದಲೂ ಮಾರುತಿ ಸುಜುಕಿ ಜಿಪ್ಸಿ ತನ್ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ 34 ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿತ್ತು.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಆದರೆ ಅಪಘಾತಗಳು ಸಂಭವಿಸಿದಾಗ ಹೆಚ್ಚಿನ ಪ್ರಕರಣದಲ್ಲಿ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿತು. ಇದಕ್ಕೆ ಅನುಗುಣವಾಗಿ ಹೊಸ ಸುರಕ್ಷತಾ ಮಾನದಂಡವನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತು.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಮಿನಿ ಎಸ್‍ಯುವಿಯನ್ನು ಮಾರುತಿ ಸುಜುಕಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ಕೂಡ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತು.

ಮಾರುತಿ ಜಿಪ್ಸಿ ಎಸ್‍ಯುವಿಗೆ ಭಾವಪೂರ್ಣ ವಿದಾಯ ಸಲ್ಲಿಸಿದ ಅಂಚೆ ಕಚೇರಿ ಸಿಬ್ಬಂದಿ

ಮಾರುತಿ ಸುಜುಕಿ ಜಿಪ್ಸಿ ಬದಲಾಗಿ ತನ್ನ ಉತ್ತರಾಧಿಕಾರಿ ಎಂದು ಕರೆಯಬಹುದಾದ ಮಾರುತಿ ಸುಜುಕಿ ಜಿಮ್ನಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಯೋಜಿಸಿದೆ. ಮಾರುತಿ ಸುಜುಕಿ ಕಂಪನಿಯು ಜಿಮ್ನಿ ಮಿನಿ-ಎಸ್‌ಯುವಿಯನ್ನು 2020ರ ಆಟೋ ಎಕ್ಸ್​ಪೋದಲ್ಲಿ ಅನಾವಣಗೊಳಿಸಿದ್ದರು. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Most Read Articles

Kannada
English summary
Vellore Postal Staff Bids Farewell To Maruti Gypsy. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X