12 ಕೋಟಿ ರು. ಬಾಚಿದ 'ದಶಕದ ಕಾರು' ಬುಗಾಟಿ ವೆರೊನ್
ಹರಾಜು ಪ್ರಕ್ರಿಯೆಯೊಂದರಲ್ಲಿ ಮೊತ್ತ ಮೊದಲ ಬುಗಾಟಿ ವೆರೊನ್ ಸೂಪರ್ ಕಾರು ಬರೋಬ್ಬರಿ 12 ಕೋಟಿ ರುಪಾಯಿಗಳಿಗೆ (USD 1,815,000) ಮಾರಾಟಗೊಂಡಿದೆ. ಇದು ಐಕಾನಿಕ್ ಬುಗಾಟಿ ಕಾರಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಸಾರುತ್ತಿದೆ.
ಕೆಂಪು ಹಾಗೂ ಕಪ್ಪು ವರ್ಣ ಮಿಶ್ರಿತ ಬುಗಾಟಿ ವೆರೊನ್ ಅನೇಕ ವಿಶಿಷ್ಟತೆಗಳನ್ನು ಪಡೆದುಕೊಂಡಿದೆ. ಇವೆಲ್ಲದರ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ..

ಬುಗಾಟಿ ವೆರೊನ್ ಒಂದು ಮಿಡ್ ಎಂಜಿನ್ ಕ್ರೀಡಾ ಕಾರಾಗಿದ್ದು, ಜರ್ಮನಿಯಲ್ಲಿ ಸ್ಥಿತಗೊಂಡಿರುವ ಫೋಕ್ಸ್ ವ್ಯಾಗನ್ ಸಂಸ್ಥೆಯಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಲಾಗಿದೆ.

ಚೊಚ್ಚಲ ಬುಗಾಟಿ ವೆರೊನ್ 2005ರಲ್ಲಿ ಸಂಸ್ಥೆಯ ಇಟಲಿ ಘಟಕದಿಂದ ಹೊರಬಂದಿತ್ತು. ಇದು ಗಂಟೆಗೆ ಗರಿಷ್ಠ 407 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು ಜಗತ್ತಿನ ಅತಿ ವೇಗದ ಕಾರುಗಳಲ್ಲಿ ಒಂದೆನಿಸಿಕೊಂಡಿದೆ.

ಪ್ರಸ್ತುತ ಇತಿಹಾಸ ಪುಟ ಸೇರಿರುವ ಬುಗಾಟಿ ವೆರೊನ್ ನಿರ್ಮಾಣ ಪ್ರಕ್ರಿಯೆಯನ್ನು 2015ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಇದರ ಸ್ಥಾನವನ್ನು ವೆರೊನ್ ಗ್ರ್ಯಾಂಡ್ ಸ್ಪೋರ್ಟ್ ವಿಟೆಸ್ಸೆ ತುಂಬಿಕೊಂಡಿದೆ.

ಡಬ್ಲ್ಯು16 ಕ್ವಾಡ್ ಟರ್ಬೊ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬುಗಾಟಿ ವೆರೊನ್ ಗರಿಷ್ಠ 1000 ಅಶ್ವಶಕ್ತಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಆಲ್ ವೀಲ್ ಡ್ರೈವ್ ನೊಂದಿಗೆ 7 ಸ್ಪೀಡ್ ಡಿಎಸ್ ಜಿ ಸ್ವಿಕ್ವೇನ್ಸಿಯಲ್ ಗೇರ್ ಬಾಕ್ಸ್ ಲಭ್ಯವಿರುತ್ತದೆ.

ಬಿಬಿಸಿಯ ಟಾಪ್ ಗೇರ್ ನಿಂದ ದಶಕದ ಕಾರು ಹಾಗೂ ಅತ್ಯುತ್ತಮ ಕಾರೆಂಬ (2000-2009) ಪ್ರಶಸ್ತಿಗೆ ಪಾತ್ರವಾಗಿರುವ ಬುಗಾಟಿ ವೆರೂನ್ ಈಗ ಮಾನಿಟರಿ ಹರಾಜಿನಲ್ಲಿ 12 ಕೋಟಿ ರುಪಾಯಿಗಳಿಗೆ ಮಾರಾಟಗೊಂಡಿದೆ.


Click it and Unblock the Notifications








