ವಿಡಿಯೋ ವೈರಲ್: ಅಭಿಮಾನಿ ಕಾರಿನ ಮೇಲೆ ರಚಿತಾ ಪ್ರೀತಿಯ ಆಟೋಗ್ರಾಫ್.. ಫುಲ್ ಫಿದಾ!
ಕನ್ನಡದ ನಟಿ ರಚಿತಾ ರಾಮ್ (Rachita Ram), ದೊಡ್ಡಮಟ್ಟದಲ್ಲಿ ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದು, ಯಾವುದೇ ಸಿನಿಮಾದ ಶೂಟಿಂಗ್ ಇದ್ದರೂ ಅಭಿಮಾನಿಗಳಿಗೆ ಒಂದಷ್ಟು ಸಮಯವನ್ನು ಮೀಸಲಿಡುತ್ತಾರೆ. ಅಭಿಮಾನಿಯೊಬ್ಬರ ಕಾರಿನ ಮೇಲೆ ರಚ್ಚು ಆಟೋಗ್ರಾಫ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪ್ರತಿ ವಾರಾಂತ್ಯದಲ್ಲಿ ನಟಿ ರಚಿತಾ ರಾಮ್ ತಮ್ಮ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ. ಆ ದಿನವನ್ನು ಅವರಿಗಾಗಿ ಮೀಸಲಿಟ್ಟಿದ್ದಾರೆ. ಇತ್ತೀಚೆಗೆ, ಅಭಿಮಾನಿಯೊಬ್ಬ ಹೊಚ್ಚ ಹೊಸ ಕಾರನ್ನು ರಚಿತಾ ಮನೆ ಬಳಿ ತಂದು, ನೆಚ್ಚಿನ ನಟಿಗಾಗಿ ಸಾಕಷ್ಟು ಸಮಯ ಕಾದಿದ್ದಾರೆ. ಆತನ ಪ್ರೀತಿಗೆ ಮನಸೋತ ನಟಿ, ಆ ಕಾರಿನ ಡ್ಯಾಶ್ ಬೋರ್ಡ್ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯು, ತಮ್ಮ ಮನೆಯ ಸಮೀಪ ರಚಿತಾ ಸ್ಪೆಷಲ್ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದರು. ಆತ, ತನ್ನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ರಚಿತಾರನ್ನು ನೋಡಲು ಆಗಮಿಸಿದ್ದರು. ಆ ಅಭಿಮಾನಿಯನ್ನು ಮಾತನಾಡಿದ ನಟಿ, ಆತನ ಬೈಕ್ ಮೇಲೆಯೂ ಆಟೋಗ್ರಾಫ್ ಹಾಕಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು.
ಸದ್ಯ, ರಚಿತಾ ಮನೆಗೆ ಅಭಿಮಾನಿ ತಂದಿದ್ದ ಕಾರು ಯಾವುದೆಂದು ತಿಳಿಯುವುದಾದರೆ, ಅದು ಮಾರುತಿ ಸುಜುಕಿ ಟೂರ್ ಎಸ್ (Maruti Swift Tour S) ಎಂದು ತಿಳಿದುಬಂದಿದೆ. ಈ ಕಾರು, ರೂ.6.51 ಲಕ್ಷದಿಂದ ರೂ.7.36 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ವಾಣಿಜ್ಯ ಬಳಕೆ ಮಾತ್ರ ಖರೀದಿಗೆ ಲಭ್ಯವಿದೆ. ಡಿಜೈರ್ ಕಾಂಪ್ಯಾಕ್ಟ್ ಸೆಡಾನ್‌ಗೆ ಬಹುತೇಕ ಹೋಲಿಕೆಯಾಗುತ್ತದೆ.
ಈ ಕಾರು, ಪೆಟ್ರೋಲ್, ಸಿಎನ್‌ಜಿ ಫ್ಯುಯೆಲ್ ಬೆಂಬಲಿಸುವ 1.2 ಲೀಟರ್ ಕೆ15 ಸಿ ಡುಯೆಲ್ಜೆಟ್ ಎಂಜಿನ್ ಹಾಗೂ STD (O) ಪೆಟ್ರೋಲ್ ಹಾಗೂ STD (O) ಸಿಎನ್‌ಜಿ ರೂಪಾಂತರ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಲಭ್ಯವಿದ್ದು, ಫ್ರಂಟ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಒಳಗೊಂಡಿದೆ.
ಮೈಲೇಜ್ ವಿಷಯಕ್ಕೆ ಬರುವುದಾದರೆ, ಮಾರುತಿ ಸುಜುಕಿ ಟೂರ್ ಎಸ್ ಪೆಟ್ರೋಲ್ ಆವೃತ್ತಿ 23.15 kmpl ಮತ್ತು ಸಿಎನ್‌ಜಿ 32.12 km/kg ಇಂಧನ ದಕ್ಷತೆಯನ್ನು ಹೊಂದಿದೆ. ವಿನ್ಯಾಸ ದೃಷ್ಟಿಯಿಂದ ಕೂಡ ಟೂರ್ ಎಸ್ ಅತ್ಯುತ್ತಮವಾಗಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಆರ್ಕ್ಟಿಕ್ ವೈಟ್, ಮಿಡ್ನೈಟ್ ಬ್ಲಾಕ್ ಮತ್ತು ಸಿಲ್ಕಿ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
ಮಾರುತಿ ಸುಜುಕಿ ಟೂರ್ ಎಸ್ ಕ್ಯಾಬಿನ್ ಒಳಭಾಗದಲ್ಲಿ ಎಲ್ಲ ವರ್ಗದ ಖರೀದಿದಾರನ್ನು ತನ್ನತ್ತ ಸೆಳೆಯುವ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಕೂಡ ಉತ್ತಮವಾಗಿದ್ದು, ಡ್ಯುಯಲ್ ಏರ್‌ಬ್ಯಾಗ್ಸ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಬ್ರೇಕ್ ಅಸಿಸ್ಟ್, ಸ್ಪೀಡ್ ಲಿಮಿಟಿಂಗ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಅನ್ನು ಹೊಂದಿದೆ.
ಇನ್ನು, ಅಪ್ಪಟ ಕನ್ನಡದ ಬೆಡಗಿ ರಚಿತಾ ರಾಮ್, ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ದರ್ಶನ್ ಜೊತೆಗೆ ನಾಯಕಿಯಾಗಿ 2013ರಲ್ಲಿ ಬುಲ್ ಬುಲ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಸದ್ಯ, ಶ್ರೀನಗರ ಕಿಟ್ಟಿ ಅಭಿನಯದ ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ರಚಿತಾ ತೊಡಗಿಸಿಕೊಂಡಿದ್ದು, ಈ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications